ಕರ್ನಾಟಕ

karnataka

ETV Bharat / city

ಸಾಗರ ವಕೀಲರ ಭವನ ನಿರ್ಮಾಣ ಕುರಿತು ಸರ್ಕಾರದ ಸ್ಪಷ್ಟನೆ ಕೇಳಿದ ಹೈಕೋರ್ಟ್ - ಹೈಕೋರ್ಟ್

ಸಾಗರ ತಾಲೂಕು ವಕೀಲರ ಭವನ ನಿರ್ಮಾಣ ವಿಚಾರವಾಗಿ ಎರಡು ವಾರಗಳಲ್ಲಿ ಸ್ಪಷ್ಟನೆ ನೀಡಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್​​ ಸೂಚಿಸಿದೆ.

high court
ಹೈಕೋರ್ಟ್

By

Published : Nov 24, 2021, 6:44 PM IST

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ವಕೀಲರ ಭವನ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಎಷ್ಟು ದಿನಗಳಲ್ಲಿ ಹಣ ಬಿಡುಗಡೆ ಮಾಡುತ್ತೀರಿ ಎಂಬುದನ್ನು ಎರಡು ವಾರಗಳೊಳಗೆ ಸ್ಪಷ್ಟಪಡಿಸಿ ಎಂದು ತಾಕೀತು ಮಾಡಿದೆ.

ವಕೀಲರ ಭವನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡುವಂತೆ ಹಾಗೂ ಕಟ್ಟಡ ನಿರ್ಮಿಸಲು ಅನುದಾನ ಬಿಡುಗಡೆ ಮಾಡುವಂತೆ ಕೋರಿ ಸಾಗರ ವಕೀಲರ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.

ಇದನ್ನೂ ಓದಿ:Council Election : ಎಸ್‌ ಎಂ ಕೃಷ್ಣ ಭೇಟಿಯಾಗಿ ಸಹಕಾರ ಕೋರಿದ ಮಂಡ್ಯ ಬಿಜೆಪಿ ಅಭ್ಯರ್ಥಿ ಕೆ ಆರ್ ಪೇಟೆ ಮಂಜು

ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ವಕೀಲರ ಭವನ ನಿರ್ಮಾಣ ಪ್ರಸ್ತಾವನೆ ಬಜೆಟ್​​ನ ಆದ್ಯತೆ ಪಟ್ಟಿಯಲ್ಲಿದೆ ಎಂದರು. ಇದಕ್ಕೆ ಅಸಮಧಾನ ವ್ಯಕ್ತಪಡಿಸಿದ ಪೀಠ, ಕಳೆದ ಮಾರ್ಚ್​​ನಲ್ಲಿ ನಡೆದಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲೇ ವಕೀಲರ ಭವನ ನಿರ್ಮಾಣ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಪ್ರಸಕ್ತ ಆಯವ್ಯಯ ಪಟ್ಟಿಗೆ ಸೇರಿದ್ದಾಗಿ ತಿಳಿಸಿದ್ದಿರಿ. ಈವರೆಗೂ ಹಣ ಬಿಡುಗಡೆ ಮಾಡಿಲ್ಲವೇಕೆ ಎಂದು ಪ್ರಶ್ನಿಸಿತು. ಅಲ್ಲದೇ, ಸಾಗರ ವಕೀಲರ ಭವನಕ್ಕೆ ಹಣ ಬಿಡುಗಡೆ ಮಾಡುವ ಕುರಿತು ಎರಡು ವಾರಗಳಲ್ಲಿ ಸ್ಪಷ್ಟನೆ ನೀಡಬೇಕು ಎಂದು ಸೂಚಿಸಿ, ವಿಚಾರಣೆ ಮುಂದೂಡಿತು.

ABOUT THE AUTHOR

...view details