ದೇವನಹಳ್ಳಿ(ಬೆಂಗಳೂರು):75ನೇ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ನಾವಿದ್ದೇವೆ. ಇದೇ ಸಮಯದಲ್ಲಿ ಕೆಲವು ವಿಧ್ವಂಸಕ ಕೃತ್ಯ ಎಸೆಗಲು ಉಗ್ರಗಾಮಿ ಸಂಘಟನೆಗಳು ಸಂಚು ನಡೆಸುತ್ತಿರುತ್ತವೆ. ಈ ಹಿನ್ನೆಲೆ ರೈಲ್ವೆ ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಲ್ಲಿ ಖಾಕಿ ಕಣ್ಗಾವಲಿರಿಸಿದೆ. ಹಾಗೆಯೇ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ(ಕೆಐಎಎಲ್) ಕಟ್ಟೆಚ್ಚರ ವಹಿಸಲಾಗಿದೆ.
ಕೆಐಎಎಲ್ ಭದ್ರತೆಯನ್ನ ಸಿಐಎಸ್ಎಫ್ ನೋಡಿಕೊಳ್ಳುತ್ತಿದೆ. ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆ ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಪ್ರಯಾಣಿಕರ ಭದ್ರತಾ ತಪಾಸಣೆ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ತಪಾಸಣೆಗಾಗಿ ಸಾಕಷ್ಟು ಸಮಯ ತೆಗೆದುಕೊಳ್ಳುವುದರಿಂದ, ಏರ್ಪೋರ್ಟ್ಗೆ ಬೇಗ ಬರುವಂತೆ ಕೆಐಎಎಲ್ ಪ್ರಯಾಣಿಕರಲ್ಲಿ ಮನವಿ ಮಾಡಿದೆ.