ಬೆಂಗಳೂರು:ನೈರುತ್ಯ ಮಾನ್ಸೂನ್ ಗುರುವಾರ ರಾಜ್ಯದಲ್ಲಿ ದುರ್ಬಲವಾಗಿದ್ದು, ಕರಾವಳಿ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ವ್ಯಾಪಕ ಮಳೆಯಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲವು ಭಾಗಗಳಲ್ಲಿ ಮಾತ್ರ ಮಳೆಯಾಗಿದೆ.
ಹಾಸನದ ಸಕಲೇಶಪುರದಲ್ಲಿ 6 ಸೆಂ.ಮೀ., ಉಡುಪಿಯ ಕೊಲ್ಲೂರಿನಲ್ಲಿ 5 ಸೆಂಮೀ., ಉತ್ತರ ಕನ್ನಡದ ಕದ್ರಾದಲ್ಲಿ 4 ಸೆಂ.ಮೀ., ಕಾರ್ಕಳ, ಚಿಕ್ಕಮಗಳೂರಿನ ಕೊಟ್ಟಿಗೇಹಾರ, ಶಿವಮೊಗ್ಗದ ಹುಂಚದಕಟ್ಟೆಯಲ್ಲಿ ತಲಾ 3 ಸೆಂ.ಮೀ., ಧರ್ಮಸ್ಥಳ, ಬೆಳ್ತಂಗಡಿ, ಆಗುಂಬೆ, ಶೃಂಗೇರಿಯಲ್ಲಿ ತಲಾ 2 ಸೆಂ.ಮೀ., ಸುಳ್ಯ, ಉತ್ತರ ಕನ್ನಡದ ಯಲ್ಲಾಪುರ, ಮಂಚಿಕೇರಿ, ಉಡುಪಿಯ ಕೋಟ, ಶಿರಾಲಿ, ಬೆಳಗಾವಿಯ ಖಾನಾಪುರ, ಲೋಂಡ, ಭಾಗಮಂಡಲ, ಸೋಮವಾರಪೇಟೆ, ಚಿಕ್ಕಮಗಳೂರಿನ ಕೊಪ್ಪ, ಜಯಪುರ, ಶಿವಮೊಗ್ಗದ ಅನವಟ್ಟಿಯಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.