ಕರ್ನಾಟಕ

karnataka

ETV Bharat / city

ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಮಳೆ: ಹಾನಿ ಬಗ್ಗೆ ಮಾಹಿತಿ ನೀಡಿದ ಸಚಿವರು

ಚಿಕ್ಕಮಗಳೂರಿನಲ್ಲಿ ಉಂಟಾಗಿರುವ ಮಳೆ ಅವಾಂತರ ಕುರಿತು ಮಾಹಿತಿ ನೀಡಿದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ 67 ಎಕರೆ ಬಾಳೆ ನಾಶ ಮತ್ತು ಎರಡು ಸೇತುವೆ ಕೊಚ್ಚಿ ಹೋಗಿದ್ದು, ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಹಾಸನ ಜಿಲ್ಲೆಯಲ್ಲಿಯೂ ಧಾರಾಕಾರ ಮಳೆಯಾಗುತ್ತಿದ್ದು, ನಷ್ಟಕ್ಕೆ ಪರಿಹಾರ ಮತ್ತು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವುದಾಗಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ.

heavy-rain-in-chikkamagalore-and-hassan-district
ಸಚಿವ ಸಿಟಿ ರವಿ ಕೆ ಗೋಪಾಲಯ್ಯ

By

Published : Aug 6, 2020, 4:56 PM IST

ಬೆಂಗಳೂರು: ಶೃಂಗೇರಿ, ಮೂಡಿಗೆರೆ ಭಾಗದಲ್ಲಿ ಮಳೆ ಹೆಚ್ಚಿದ್ದು, ಬಾಳೂರು, ದೇವರಮನೆಯಲ್ಲಿ 300 ಮೀಟರ್​ ಮಳೆಯಾಗಿದೆ. ಈಗಾಗಲೇ 12 ಮನೆಗಳು ಜಖಂ ಆಗಿವೆ ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ. ಟಿ. ರವಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ಒಟ್ಟು 67 ಎಕರೆ ಬಾಳೆ ಬೆಳೆ ನಾಶವಾಗಿದೆ. ಕಳೆದ ವರ್ಷ ಭೂ ಕುಸಿತವಾಗಿತ್ತು. ಆದೇ ಜಾಗದಲ್ಲಿ ಮತ್ತೆ ಈಗಲೂ ಭೂಮಿ ಕುಸಿದಿದೆ. ಗುಡ್ಡ ಕುಸಿದು ರಸ್ತೆ ಜಖಂ ಆಗಿತ್ತು, ಅದನ್ನು ತೆರವು ಮಾಡಲಾಗಿದೆ. ಎರಡು ತಾತ್ಕಾಲಿಕ ಸೇತುವೆಗಳು ಕೊಚ್ಚಿ ಹೋಗಿವೆ. ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆಯನ್ನು ಕೊಟ್ಟಿದ್ದೇನೆ. ನಾಳೆಯಿಂದ ನಾನು ಅಲ್ಲಿಯೇ ಇರುತ್ತೇನೆ ಎಂದು ಹೇಳಿದರು.

ಮಳೆ ಪರಿಣಾಮಗಳ ಕುರಿತು ಮಾಹಿತಿ ನೀಡಿದ ಸಚಿವ ಸಿ.ಟಿ.ರವಿ, ಕೆ. ಗೋಪಾಲಯ್ಯ

ಇದೇ ವೇಳೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ಹಾಸನ ಜಿಲ್ಲೆಯಲ್ಲೂ ಹೆಚ್ಚಿನ ಮಳೆಯಾಗುತ್ತಿದೆ. ಮುಖ್ಯ ಕಾರ್ಯದರ್ಶಿಗಳು ಹಾಗೂ ಡಿಸಿ ಜೊತೆ ಮಾತನಾಡಿದ್ದೇನೆ. ಸಕಲೇಶಪುರದಲ್ಲಿ ಮರಗಳು ಬಿದ್ದಿವೆ. ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಶನಿವಾರ ಹಾಸನಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಈಗಾಗಲೇ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಮಳೆಯಿಂದ ಪ್ರಾಣಹಾನಿಯಾಗಿದ್ದರೆ ಪರಿಹಾರ ಕೊಡುವ ಕೆಲಸ ಮಾಡುತ್ತೇವೆ. ಹಾಸನ ಕೊಬ್ಬರಿ ಬೆಳೆಗಾಗರಿಗೆ ಬೆಂಬಲ ಬೆಲೆ ನಿಗದಿ ಮಾಡಲಾಗಿದ್ದು, ಸಂಪುಟ ಉಪಸಮಿತಿಯಲ್ಲಿ ಇಂದು ನಿರ್ಧಾರ ಮಾಡಲಾಗಿದೆ. ಕೇಂದ್ರದ ಬೆಂಬಲ ಬೆಲೆಗೆ ಒಂದು ಸಾವಿರ ರಾಜ್ಯ ಸರ್ಕಾರ ನೀಡಲಿದೆ ಎಂದರು.

ABOUT THE AUTHOR

...view details