ಬೆಂಗಳೂರು: ರಾಜ್ಯದಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗಿದ್ದು, ರಾಜಧಾನಿಯ ಜನರು ಇನ್ನೂ 10 ದಿನಗಳ ಕಾಲ ಎಚ್ಚರವಾಗಿರಬೇಕಾಗಿದೆ.
ಹೌದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಈಗಾಗಲೇ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದೆ(Heavy rain in Karnataka). ಮತ್ತೆ ನವೆಂಬರ್ 26 ರಿಂದ ಮೂರು ದಿನ ವಾಯುಭಾರ ಕುಸಿತವಾಗುವ ಸಾಧ್ಯತೆ ಇದ್ದು, ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಹೀಗಾಗಿ, ಇನ್ನೂ 10 ದಿನಗಳ ಕಾಲ ಮಳೆಯ ಗಂಡಾಂತರ ದಕ್ಷಿಣ ಒಳನಾಡಿಗೆ ಕಾದಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.