ಕರ್ನಾಟಕ

karnataka

ETV Bharat / city

ಆಸ್ಪತ್ರೆಗಳು ದುಡ್ಡಿನ ಹಿಂದೆ ಬಿದ್ದಿವೆ.. ಬೆಂಗಳೂರಿನ ದುಃಸ್ಥಿತಿ ಬಿಚ್ಚಿಟ್ಟ ಬಾಲಕಿ..!

ಬೆಂಗಳೂರಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಹತಾಸೆಯತ್ತ ಸಾಗುತ್ತಿದೆ. ಕೋವಿಡ್​ಗೆ ಸೂಕ್ತ ಚಿಕಿತ್ಸೆ ಸಿಗದೇ ಮೃತಪಟ್ಟ ವ್ಯಕ್ತಿಯ ಪುತ್ರಿ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

heartrending-stories-in-bengaluru
ಆಸ್ಪತ್ರೆಗಳ ದುಡ್ಡಿನ ಹಿಂದೆ ಬಿದ್ದಿವೆ.. ಬೆಂಗಳೂರಿನ ದುಸ್ಥಿತಿ ಬಿಚ್ಚಿಟ್ಟ ಬಾಲಕಿ..!

By

Published : Apr 29, 2021, 5:34 PM IST

Updated : Apr 29, 2021, 6:55 PM IST

ಬೆಂಗಳೂರು: ನಮ್ಮ ತಂದೆ ಕಂಪನಿಯಲ್ಲಿ ಕೆಲಸ ಮಾಡ್ತಿದ್ದರು. ಅವರು ಇದ್ದಿದ್ದರೆ ನನಗೆ ಮಾಡಿ ಊಟ ಮಾಡಿಸುತ್ತಿದ್ದರು. ಇವಾಗ ನನಗೆ ಊಟ ಮಾಡ್ಸೋರು ಯಾರು? ಓದ್ಸೋರು ಯಾರು? ಎಂದು ಮಾಧ್ಯಮಗಳ ಮೂಲಕ ಪ್ರಶ್ನೆಯನ್ನು ಪುಟ್ಟ ಹುಡುಗಿ ಕೇಳಿದ್ದಾಳೆ.

ಬೆಂಗಳೂರಿನ ದುಸ್ಥಿತಿ ಬಿಚ್ಚಿಟ್ಟ ಬಾಲಕಿ ನವ್ಯಶ್ರೀ

ನಿತ್ಯ ಕೋವಿಡ್ ಸಂಬಂಧಿ ಹೃದಯ ಮಿಡಿಯುವ ಕಥೆಗಳಿಗೆ ಸಾಕ್ಷಿಯಾಗುತ್ತಿರುವ ರಾಜಧಾನಿ ಇಂದು ಕೂಡಾ ಕರುಣಾಜನಕ ಕಥೆಗೆ ಸಾಕ್ಷಿಯಾಯಿತು. ಎಂ.ಎಸ್​.ರಾಮಯ್ಯ ಆಸ್ಪತ್ರೆಯಲ್ಲಿ ತಂದೆಗೆ ಆಕ್ಸಿಜನ್ ಕೊಟ್ಟಿಲ್ಲ, ತಂದೆಯ ಸಾವಿಗೆ ಆಸ್ಪತ್ರೆಯೇ ಕಾರಣ. ಬಿಬಿಎಂಪಿಯನ್ನು ನಂಬಿದ್ದೆವು, ಅವರೂ ಕೈಬಿಟ್ಟಿದ್ದಾರೆ. ಫೋನ್ ಮಾಡಿದ್ದರೂ ಕರೆ ಸ್ವೀಕರಿಸಲಿಲ್ಲ ಎಂದು ಮಗಳು ನವ್ಯಶ್ರೀ ಆರೋಪಿಸುತ್ತಿದ್ದಾಳೆ.

ಇದನ್ನೂ ಓದಿ:ಮಾಜಿ ಸಿಎಂ ಕಲಿಖೋ ಪುಲ್ ಸಾವು ಪ್ರಕರಣದ ಸಿಬಿಐ ತನಿಖೆ ಕೋರಿದ್ದ ಅರ್ಜಿ ವಜಾ

ಇದರ ಜೊತೆಗೆ ಎಲ್ಲರಲ್ಲೂ ಕೈ ಮುಗಿದು ಕೇಳುತ್ತೇನೆ. ಕೊರೊನಾ ಬಂದರೆ ಮನೆಯಲ್ಲಿಯೇ ಚಿಕಿತ್ಸೆ ಪಡಿಯಿರಿ. ಆಸ್ಪತ್ರೆಯವರು ಕೇವಲ ದುಡ್ಡಿನ ಬೆನ್ನು ಬಿದ್ದಿದ್ದಾರೆ ಎಂದು ಬಾಲಕಿ ಮನವಿ ಮಾಡಿದ್ದಾಳೆ.

ನವ್ಯಶ್ರೀ ತಂದೆ ಆನಂದ್ ಕೋವಿಡ್​​ನಿಂದ ಮೃತಪಟ್ಟಿದ್ದು, ನವ್ಯಶ್ರೀಯ ಮಾತು ಕೇಳಿ ಅಲ್ಲಿಯೇ ಇದ್ದ ಜನರು ಭಾವುಕರಾಗಿದ್ದಾರೆ.

Last Updated : Apr 29, 2021, 6:55 PM IST

ABOUT THE AUTHOR

...view details