ಕರ್ನಾಟಕ

karnataka

ETV Bharat / city

ಗಡೇ ದುರ್ಗಮ್ಮದೇವಿಗೆ ಹರಕೆ ಪತ್ರ: ಸ್ಪಷ್ಟನೆ ನೀಡಿದ್ರು ಸಚಿವ ಶ್ರೀರಾಮುಲು - ಸಚಿವ ಶ್ರೀರಾಮುಲು ದೇವಸ್ಥಾನ ಭೇಟಿ ಕುರಿತು ಸ್ಪಷ್ಟನೆ

ಡಿಸಿಎಂ ಸ್ಥಾನಕ್ಕಾಗಿ ಹರಕೆ ಕಟ್ಟಲು ದೇವಸ್ಥಾನಕ್ಕೆ ಹೋಗಿದ್ದಿಲ್ಲ. ಒಂದು ಸಣ್ಣ ಹರಕೆ ಇತ್ತು, ಅದನ್ನು ತೀರಿಸಲು ಹೋಗಿದ್ದೆ ಅಷ್ಟೇ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.

health-minister-b-sriramulu-clarification-on-temple-visit
ಸಚಿವ ಶ್ರೀರಾಮುಲು

By

Published : Sep 18, 2020, 5:32 PM IST

ಬೆಂಗಳೂರು:ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹರಕೆ ಕಟ್ಟಲು ದೇವಸ್ಥಾನಕ್ಕೆ ಹೋಗಿದ್ದಿಲ್ಲ. ಒಂದು ಸಣ್ಣ ಹರಕೆ ತೀರಿಸಲು ಹೋಗಿದ್ದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ದೇವಸ್ಥಾನ ಭೇಟಿ ಕುರಿತು ಸ್ಪಷ್ಟನೆ ನೀಡಿದ್ದಾರೆ.

ನಿನ್ನೆ ನಾನು ದೇವದುರ್ಗ ಜಿಲ್ಲೆಗೆ ಹೋಗಿದ್ದೆ. ಒಂದು ಸಣ್ಣ ಹರಕೆ ಇತ್ತು, ಹೀಗಾಗಿ ದೇವಸ್ಥಾನಕ್ಕೆ‌‌ ಹೋಗಿ ಪ್ರಾರ್ಥನೆ ಸಲ್ಲಿಸಿ ಬಂದಿದ್ದೇನೆ. ಅದನ್ನೇ ಕೆಲವರು ಶ್ರೀರಾಮುಲು ಡಿಸಿಎಂ ಆಗಲು ದೇವರಿಗೆ ಹರಕೆ ಕಟ್ಟಿದ್ದಾರೆ ಎಂದು ಸುಳ್ಳು ಸುದ್ದಿ ಬಿಂಬಿಸಿದ್ದಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ದೇವಸ್ಥಾನ ಭೇಟಿ ಕುರಿತು ಸಚಿವ ಶ್ರೀರಾಮುಲು ಸ್ಪಷ್ಟನೆ

ನಾಯಕತ್ವದ ಬದಲಾವಣೆ ಇಲ್ಲ

ದೆಹಲಿಗೆ ಸಿಎಂ ಹೋಗಿರುವುದು ಕೆಲ ವಿಚಾರಗಳ ಕುರಿತು ಚರ್ಚಿಸಲು ಅಷ್ಟೇ. ಯಡಿಯೂರಪ್ಪ ನಮ್ಮ ನಾಯಕರು, ಪೂರ್ಣ ಪ್ರಮಾಣದ ಅವಧಿಯನ್ನ ಪೂರೈಸುತ್ತಾರೆ. ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನವೇ ಅಂತಿಮ. ಈ ಬಗ್ಗೆ ಹೆಚ್ಚು ಏನು ಮಾತನಾಡೋಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದರು.

ಇಲಾಖೆಯಲ್ಲಿ ಸಿಎಂ ಪುತ್ರನ ಹಸ್ತಕ್ಷೇಪ

ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸುತ್ತಿದ್ದರೋ ಹಾಗೇ ನಮ್ಮ ಸರ್ಕಾರ ಸಹ ಮಾಡುತ್ತೆ ಅಂತ ತಿಳಿದುಕೊಂಡಿದ್ದಾರೆ. ವಿಜಯೇಂದ್ರ ಅವರು ಸಿಎಂ ಮಗನಾಗಿ, ನಮ್ಮ ಇಲಾಖೆ ಅಥವಾ ಬೇರೆ ಯಾವುದೇ ಇಲಾಖೆಯ ವಿಚಾರಗಳಲ್ಲಿ ಮಧ್ಯಪ್ರವೇಶಿಸಿಲ್ಲ. ವೈದ್ಯರ ವಿಚಾರದಲ್ಲಿ ಸಿಎಂ ಭೇಟಿಗೆ ಬಂದಾಗ ತೆಗೆದ ಫೋಟೋ ವೈರಲ್ ಆಗಿದೆಯೇ ಹೊರತು ಬೇರೆ ವಿಚಾರಕ್ಕೆ ಸಂಬಂಧಿಸಿದ್ದು ಅಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

For All Latest Updates

TAGGED:

ABOUT THE AUTHOR

...view details