ಬೆಂಗಳೂರು:ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಡುವೆ ಆರೋಗ್ಯ ಇಲಾಖೆಯು 15 ಮಂದಿಗೆ ಸೋಂಕು ಹೇಗೆ ತಗುಲಿದೆ. ಸೋಂಕಿನ ಮೂಲ ಯಾವುದು ಅನ್ನೋದನ್ನ ಹುಡುಕುವಲ್ಲಿ ವಿಫಲವಾಗಿದೆ.
ಹೌದು, ಸೋಂಕಿನ ಮೂಲ ಪತ್ತೆಯಾಗದೇ ಇದ್ರೆ ರೋಗ ನಿಯಂತ್ರಣ ಕಷ್ಟ ಸಾಧ್ಯವಾಗಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ ಪತ್ತೆಯಾಗಿರೋದು 904 ಕೇಸ್. ಆ 904 ಕೊರೊನಾ ಸೋಂಕಿತರ ಪೈಕಿ 83 ಸೋಂಕಿತರ ಸೋಂಕಿನ ಮೂಲವೇ ಇನ್ನೂ ಸಿಕ್ಕಿಲ್ಲ.
ಈ 83 ಮಂದಿಗೆ ಹೇಗೆ ಸೋಂಕು ಹರಡಿದೆ ಎಂಬುದೇ ಪತ್ತೆ ಆಗ್ತಿಲ್ಲ. ಟ್ರಾವೆಲ್ ಹಿಸ್ಟರಿ ಇಲ್ಲ, ಯಾರ ಪ್ರಾಥಮಿಕ ಸಂಪರ್ಕಿತರೂ ಅಲ್ಲ. ಹೀಗಿದ್ದರೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸದ್ಯ ಆರೋಗ್ಯ ಇಲಾಖೆಗೂ ಈ 83 ಪ್ರಕರಣಗಳು ಸವಾಲಾಗಿವೆ. ಮತ್ತೊಂದೆಡೆ ರೋಗ ಮೂಲ ಪತ್ತೆ ಆಗದೇ ಇದ್ರೆ ಸಾಮೂಹಿಕ ಪರೀಕ್ಷೆ ಅನಿವಾರ್ಯವಾಗಲಿದೆ.
ರಾಜ್ಯಕ್ಕೆ SARI ಮತ್ತು ILI ಕೇಸ್ಗಳು ತಲೆನೋವಾಗಿವೆ. ಈ 83 ಪ್ರಕರಣಗಳಲ್ಲಿ SARI ಮತ್ತು ILI ಕೇಸ್ಗಳೇ ಜಾಸ್ತಿ ಇವೆ. (SARI - severe accute respiratory infection ) (ILI - ವಿಷಮ ಶೀತ ಜ್ವರ influenza like illnesses)
ವೈರಸ್ನ ಮೂಲ ಪತ್ತೆ ಆಗದ 83 ಪ್ರಕರಣದಲ್ಲಿ 45 SARI ಪ್ರಕರಣಗಳಾದರೆ, 23 ILI ಪಾಸಿಟಿವ್ ಪ್ರಕರಣದಲ್ಲೂ ಸೋಂಕಿನ ಮೂಲ ಪತ್ತೆ ಆಗಿಲ್ಲ. ಉಳಿದ 15 ಮಂದಿಯಲ್ಲಿ ಸೋಂಕಿನ ಮೂಲ ಹುಡುಕುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ.