ಕರ್ನಾಟಕ

karnataka

ETV Bharat / city

ಸರಣಿ ಟ್ವೀಟ್‌ಗಳ ಮೂಲಕ ಸಚಿವ ಸುಧಾಕರ್​ಗೆ ಹೆಚ್​ಡಿಕೆ ಟಾಂಗ್

ಕೊರೊನಾ ಸೋಂಕಿತರು ಬೆಡ್​ಗಳಿಲ್ಲದೆ, ಆ್ಯಂಬುಲೆನ್ಸ್ ದಕ್ಕದೆ, ಸೂಕ್ತ ವೈದ್ಯಕೀಯ ಚಿಕಿತ್ಸೆಗಾಗಿ ಪರದಾಡುವಾಗ ನಿಮ್ಮ ಸಶಕ್ತತೆ ಎಲ್ಲಿ ಅಡಗಿತ್ತು? ಕೊರೊನಾ ನಿಯಂತ್ರಣಕ್ಕೆ ಎಷ್ಟೊಂದು ಸಚಿವರು? ಎಂದು ಹೆಚ್‌ಡಿಕೆ ಸಚಿವ ಕೆ.ಸುಧಾಕರ್‌ ವಿರುದ್ಧ ಟ್ವೀಟ್‌ ಮೂಲಕ ಹರಿಯಾಯ್ದಿದ್ದಾರೆ.

HDK
ಹೆಚ್​ಡಿಕೆ

By

Published : Aug 20, 2020, 6:31 PM IST

ಬೆಂಗಳೂರು: ಕೊಪ್ಪಳ ಜಿಲ್ಲೆಯ ರೈತರೊಬ್ಬರು ವಾರದಿಂದ ಅಲೆದರೂ ಒಂದು ಚೀಲ ಗೊಬ್ಬರ ಸಿಕ್ಕಿಲ್ಲ ಎಂದು ಅಳುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಇಲ್ಲದೇ ರೋಗಿಗಳು ನರಳಾಡುತ್ತಿರುವುದು ಸರ್ಕಾರ ಸಶಕ್ತವಾಗಿರುವ ಲಕ್ಷಣವೋ?, ನಿಶಕ್ತವಾಗಿರುವ ಲಕ್ಷಣವೋ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಚಿವ ಡಾ.ಕೆ.‌ಸುಧಾಕರ್ ಅವರಿಗೆ ತಿರುಗೇಟು ನೀಡಿದ್ದಾರೆ.

ಹೆಚ್​ಡಿ ಸರಣಿ ಟ್ವೀಟ್

ಮಾಧ್ಯಮಗಳ ವರದಿಗಳನ್ನು ಗಮನಿಸುವಷ್ಟು ವ್ಯವಧಾನವಿರದ ನೀವು ಮಾಧ್ಯಮಗಳ ಮುಂದೆ ಕುಳಿತು 'ಪೋಸು' ಕೊಡುವುದು ಬಿಟ್ಟು ಮೈಬಗ್ಗಿಸಿ ಕೆಲಸ ಮಾಡಿ ತೋರಿಸಿ. ಕೊರೊನಾ ಸೋಂಕಿನ ವಿಷಯದಲ್ಲಿ ಆರು ತಿಂಗಳಿಂದ ಮಾತಿನ ಮಂಟಪ ಕಟ್ಟಿದಿರೇ ಹೊರತು ಅನುಷ್ಠಾನದಲ್ಲಿ ಮಕಾಡೆ ಮಲಗಿದ್ದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಖಾರವಾಗಿ ಹೇಳಿದ್ದಾರೆ.

ಸೋಂಕಿತರು ಬೆಡ್​ಗಳಿಲ್ಲದೆ, ಆ್ಯಂಬುಲೆನ್ಸ್ ದಕ್ಕದೆ, ಸೂಕ್ತ ವೈದ್ಯಕೀಯ ಚಿಕಿತ್ಸೆಗಾಗಿ ಪರದಾಡುವಾಗ ನಿಮ್ಮ ಸಶಕ್ತತೆ ಎಲ್ಲಿ ಅಡಗಿತ್ತು? ಕೊರೊನಾ ನಿಯಂತ್ರಣಕ್ಕೆ ಎಷ್ಟೊಂದು ಸಚಿವರು? ಕಮೀಷನ್ ದಂಧೆ, ಸಮನ್ವಯದ ಕೊರತೆಯಿಂದ ಬಳಲಿ ಹೈರಾಣಾದಿರಿ ಎಂದು ವ್ಯಂಗ್ಯವಾಡಿದರು.

ಅಧಿಕಾರ ಇದ್ದಾಗಲೂ ಕೊಟ್ಟ ಮಾತು ಉಳಿಸಿಕೊಳ್ಳಲಾಗದವರ ಹಾಗೂ ರೋಗಗ್ರಸ್ತ ಮನಸ್ಸಿನವರ ಬಗ್ಗೆ ನನಗೆ ಮರುಕವಿದೆ. ಮಾಧ್ಯಮಗೋಷ್ಠಿ ಕರೆಯದೆ 'ಈ ದಿನ ಮಾಧ್ಯಮಗೋಷ್ಠಿ ಇರುವುದಿಲ್ಲ' ಎಂದು ಸ್ಪಷ್ಟನೆ ನೀಡುವ ಬೌದ್ಧಿಕ ದಾರಿದ್ರ್ಯ ನಿಮ್ಮಂತೆ ನನಗೆ ಬಂದೊದಗಿಲ್ಲ ಎಂದು ಸುಧಾಕರ್ ಅವರಿಗೆ ಎದಿರೇಟು ನೀಡಿದ್ದಾರೆ.

'ನುಡಿಯಲುಬಾರದು ಕೆಟ್ಟನುಡಿಗಳ, ನಡೆಯಲುಬಾರದು ಕೆಟ್ಟನಡೆಗಳ ನುಡಿದಡೇನು ನುಡಿಯದಿರ್ದಡೇನು? ಹಿಡಿದವ್ರತ ಬಿಡದಿರಲು ಅದೆ ಮಹಾಜ್ಞಾನದಾಚರಣೆ ಎಂಬೆನು ಅಜಗಣ್ಣ ತಂದೆ' ಎಂದು ಮುಕ್ತಾಯಕ್ಕ ವಚನದ ಮೂಲಕ ಟಾಂಗ್ ನೀಡಿದ್ದಾರೆ.

ABOUT THE AUTHOR

...view details