ಕರ್ನಾಟಕ

karnataka

ETV Bharat / city

ಗ್ರಾಮ ಸ್ವರಾಜ್ ತಿದ್ದುಪಡಿ ವಿಧೇಯಕ ಮೇಲಿನ‌ ಚರ್ಚೆ: ನಗು ಮೂಡಿಸಿದ ಹೆಚ್‌.ಡಿ.ರೇವಣ್ಣರ ಮಾತು

ಸಚಿವ ಮಾಧುಸ್ವಾಮಿ ಕಾನೂನಿನ ರೀತಿಯಾಗಿ ನಡೆಯುತ್ತಾರೆ ಎಂಬ ಕಾರಣಕ್ಕಾಗಿ ಕಾನೂನು ಸಚಿವ ಸ್ಥಾನದಿಂದ ಕಿತ್ತು ಹಾಕಿದ್ರು. ಅವರು ನೇರ ವ್ಯಕ್ತಿ. ಈ ತಿದ್ದುಪಡಿ ಸರಿ ಇದ್ಯಾ ಎಂದು ಮಾಧುಸ್ವಾಮಿ ಹೇಳಲಿ ಎಂದು ಹೆಚ್​​.ಡಿ.ರೇವಣ್ಣ ಹೇಳಿದರು.

HD Revanna
ಹೆಚ್​​.ಡಿ. ರೇವಣ್ಣ

By

Published : Sep 16, 2021, 10:36 PM IST

ಬೆಂಗಳೂರು:ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ ಚರ್ಚೆ ವೇಳೆ ಹೆಚ್.ಡಿ.ರೇವಣ್ಣ ಮಾತು ಸದನವನ್ನು ನಗೆಗಡಲಲ್ಲಿ ಮುಳುಗಿಸಿತು.

ಚರ್ಚೆ ವೇಳೆ ಮಾತನಾಡುತ್ತಾ, ಮಾಧುಸ್ವಾಮಿ ಕಾನೂನಿನ ರೀತಿಯಾಗಿ ನಡೆಯುತ್ತಾರೆ ಎಂಬ ಕಾರಣಕ್ಕಾಗಿ ಕಾನೂನು ಸಚಿವ ಸ್ಥಾನದಿಂದ ಕಿತ್ತು ಹಾಕಿದ್ರು. ಅವರು ನೇರ ವ್ಯಕ್ತಿ. ಈ ತಿದ್ದುಪಡಿ ಸರಿ ಇದ್ಯಾ ಎಂದು ಮಾಧುಸ್ವಾಮಿ ಹೇಳಲಿ ಎಂದು ರೇವಣ್ಣ ಹೇಳಿದರು.

ಗ್ರಾಮ ಸ್ವರಾಜ್ ತಿದ್ದುಪಡಿ ವಿಧೇಯಕ ಮೇಲಿನ‌ ಚರ್ಚೆ: ನಗೆ ಮೂಡಿಸಿದ ಹೆಚ್‌.ಡಿ.ರೇವಣ್ಣ ಮಾತು

ಅವರಿಗೆ ಎಲ್ಲಿಂದ ಒತ್ತಡ ಬಂತು ಎಂದು ಇಲ್ಲಿ ಹೇಳಲು ಸಾಧ್ಯವಿಲ್ಲ. ಹೇಳಿದರೆ ಅವರಿಗೆ ಕುತ್ತಾಗುತ್ತದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್, ನೀವು ಏನು ದೊಡ್ಡ ಉಪಕಾರ ಮಾಡುತ್ತಿದ್ದೀರಿ ಯಡಿಯೂರಪ್ಪಗೆ. ಅವರಿಗೆ ಇನ್ನೇನು ಕುತ್ತಾಗಬೇಕು?. ಏನು‌ ಬಾಕಿ ಇದೆ ಹೇಳಿ ಎಂದು ಯಡಿಯೂರಪ್ಪ ಅಧಿಕಾರ ಕಳೆದುಕೊಂಡಿರುವ ಬಗ್ಗೆ ಪರೋಕ್ಷವಾಗಿ ಉಲ್ಲೇಖಿಸಿದರು. ನಿಮಗೆ ಯಡಿಯೂರಪ್ಪ, ಮಾಧುಸ್ವಾಮಿ ತೊಂದರೆ ಮಾಡಿಲ್ಲ. ನಿಮಗೆ ಅಭಿಮಾನ ಇಲ್ಲದಿರುವುದು ಯಾರ ಬಗ್ಗೆ ಹೇಳಿ. ಅವರ ಬಗ್ಗೆ ಹೇಳಿದರೆ ಕುತ್ತು ಬರುತ್ತದೆ ಎನ್ನುತ್ತೀರಿ ಎಂದು ಕಾಲೆಳೆದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಸಿದ್ದರಾಮಯ್ಯ, ಈಗ ಇದ್ದಕ್ಕಿದ್ದಂತೆ ಮಾಧುಸ್ವಾಮಿ ಮೇಲೆ ಏಕೆ ಪ್ರೀತಿ ಬಂದಿದೆ. ಮಾಧುಸ್ವಾಮಿ ಹಾಸನ ಉಸ್ತುವಾರಿ ಸಚಿವರಿದ್ದಾಗ ಬಹುಶಃ ಮಾಧುಸ್ವಾಮಿ ಅವರು ರೇವಣ್ಣನಿಗೆ ಕೆಲಸ ಮಾಡಿಕೊಟ್ಟಿರಬೇಕು. ಅದಕ್ಕೆ ಮಾಧುಸ್ವಾಮಿ ಪರ ಮಾತನಾಡುತ್ತಿದ್ದಿರಾ ಎಂದು ಹೇಳಿದರು.

ಬಿಎಸ್‌ವೈ ಮುಖದಲ್ಲೂ ನಗು:

ರೇವಣ್ಣ ಮತ್ತು ರಮೇಶ್ ಕುಮಾರ್ ಮಾತಿಗೆ ಮಾಜಿ ಸಿಎಂ ಯಡಿಯೂರಪ್ಪ ಮುಖದಲ್ಲೂ ಮಂದಹಾಸ ಕಂಡುಬಂತು.

ABOUT THE AUTHOR

...view details