ಕರ್ನಾಟಕ

karnataka

ETV Bharat / city

ಒಂದು ತಿಂಗಳಲ್ಲಿ ರಾಜ್ಯದಲ್ಲಿ ಶಾಂತಿ, ಸಾಮರಸ್ಯ ನೆಲೆಸದಿದ್ದರೆ ಪಾದಯಾತ್ರೆ: ಹೆಚ್​ಡಿಕೆ

ಕುವೆಂಪು ಅವರು ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿ ಸಾಮರಸ್ಯ ಗೀತೆ ಬರೆದರು. ಅದನ್ನು ನಾವು ನಾಡಗೀತೆಯಾಗಿ ಸ್ವೀಕಾರ ಮಾಡಿದ್ದೇವೆ. ಅಂತಹ ಮಹಾಪುರುಷ ಹುಟ್ಟಿದ ಜಿಲ್ಲೆಯಲ್ಲಿಯೇ ಇಂದು ಅಶಾಂತಿ ಉಂಟಾಗಿದೆ ಎಂದು ಹೆಚ್​ಡಿಕೆ ದೂರಿದರು.

HD Kumaraswamy set deadline for the state govt
ಸರ್ವ ಜನಾಂಗದ ಶಾಂತಿಯ ತೋಟ- ಕರ್ನಾಟಕ: ಒಂದು ಭಾವೈಕ್ಯ ಚರ್ಚೆ

By

Published : Apr 1, 2022, 8:46 AM IST

ಬೆಂಗಳೂರು: ಒಂದು ತಿಂಗಳೊಳಗಾಗಿ ರಾಜ್ಯ ಸಹಜ ಸ್ಥಿತಿಗೆ ಮರಳದಿದ್ದರೆ ಶಾಂತಿ, ಸಾಮರಸ್ಯ, ಸೌಹಾರ್ದ ಪುನರ್ ಸ್ಥಾಪನೆಗಾಗಿ ಪಾದಯಾತ್ರೆ ಕೈಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದರು. ಬೆಂಗಳೂರಿನ ಗಾಂಧಿ ಭವನದಲ್ಲಿ ಗುರುವಾರ ಜೆ.ಪಿ.ವಿಚಾರ ವೇದಿಕೆ ಹಮ್ಮಿಕೊಂಡಿದ್ದ 'ಸರ್ವ ಜನಾಂಗದ ಶಾಂತಿಯ ತೋಟ- ಕರ್ನಾಟಕ: ಒಂದು ಭಾವೈಕ್ಯ ಚರ್ಚೆ'ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ಇಡಿ, ಐಟಿಯಿಂದ ಭಯೋತ್ಪಾದಕ ಕೆಲಸ:ರಾಜ್ಯದಲ್ಲಿ ಉಂಟಾಗಿರುವ ಪರಿಣಾಮಗಳ ಬಗ್ಗೆ ತೀವ್ರ ಆಘಾತವಾಗುತ್ತಿದೆ. ಕಿಡಿಗೇಡಿ, ತಿಳಿಗೇಡಿ, ಸಮಾಜಘಾತಕರು ಈ ದೇಶವನ್ನು ಛಿದ್ರಗೊಳಿಸಲು ಹೊರಟಿದ್ದಾರೆ. ಯಾರ ಹೃದಯವನ್ನೂ ಸ್ವಚ್ಛ ಮಾಡುವುದು ಕಾಣುತ್ತಿಲ್ಲ. ಅದರ ವಿರುದ್ಧ ದನಿ ಎತ್ತಲು ಹೋದರೆ ಅಂಥವರನ್ನು ಸಂಪೂರ್ಣ ನಿಗ್ರಹ ಮಾಡಲು ಕೆಲ ಸಂಸ್ಥೆಗಳನ್ನು ದಾಳಿಗೆ ಬಿಡುತ್ತಾರೆ. ವಿಹೆಚ್​ಪಿ, ಭಜರಂಗದಳಕ್ಕಿಂತ ಹೆಚ್ಚಾಗಿ ಇಡಿ, ಐಟಿ ಸಂಸ್ಥೆಗಳು ಭಯೋತ್ಪಾದಕ ಕೆಲಸ ಮಾಡುತ್ತಿವೆ ಎಂದು ಕೆಲ ಮಾಧ್ಯಮಗಳು ಬರೆದಿವೆ ಎಂದು ಕುಮಾರಸ್ವಾಮಿ ಹೇಳಿದರು.

ನಿಷ್ಕ್ರಿಯ ಸರ್ಕಾರ: ಸಂವಿಧಾನ ಉಲ್ಲಂಘನೆ ಮಾಡುವ ಸಮಾಜಘಾತುಕರ ಮೇಲೆ ಏನೂ ಕ್ರಮ ಆಗಿಲ್ಲ. ಇಂಥ ಸರ್ಕಾರಕ್ಕೆ ಏನೆನ್ನಬೇಕು?. ನನ್ನ ಪ್ರಕಾರ ಇದೊಂದು ನಿಷ್ಕ್ರಿಯ ಸರ್ಕಾರ ಎಂದು ಅವರು ಟೀಕಿಸಿದರು.

ಗಂಡಸ್ತನ ಪದ ಬಳಕೆಗೆ ವಿಷಾದ:ಚನ್ನಪಟ್ಟಣದಲ್ಲಿ ಮುಖ್ಯಮಂತ್ರಿ ವಿರುದ್ಧ ಒಂದು ಪದ ಬಳಸಿದೆ. ಸಾಮಾನ್ಯವಾಗಿ ನಾನು ಅಂತಹ ಪದ ಬಳಸಲ್ಲ. ಕೆಲವೊಮ್ಮೆ ಪರಿಸ್ಥಿತಿಯನ್ನು ನೋಡಿ ಸಹಿಸಲಾಗದೆ ಇಂಥ ಪದಗಳು ಆಕ್ರೋಶದಿಂದ ಹೊರಬರುತ್ತವೆ. ಈ ಬಗ್ಗೆ ನನಗೆ ವಿಷಾದವಿದೆ ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ:ಸಮವಸ್ತ್ರ ಕುರಿತು ವಿವಾದಿತ ಹೇಳಿಕೆ: ಶಿಕ್ಷಣ ಸಚಿವರಿಗೆ ವಕೀಲರ ಸಂಘಟನೆಯಿಂದ ನೋಟಿಸ್

ABOUT THE AUTHOR

...view details