ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಾಗ ಸದನದ ಹೊರಗೆ ಮತ್ತು ಒಳಗೆ ನನ್ನ ಬಗ್ಗೆ ಹಲವಾರು ಆರೋಪ ಮಾಡಿದ್ದ ಹೆಚ್. ಡಿ. ಕುಮಾರಸ್ವಾಮಿ ಇಂದು ತಮಗಾದ ನೋವನ್ನು ಬಹಿರಂಗಪಡಿಸುವ ಮೂಲಕ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿ ಇರಲಿಲ್ಲ ಎಂದು ಜನರಿಗೆ ಸತ್ಯವನ್ನು ಹೇಳಿದ್ದಾರೆ ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ಕುರಿತು ಸಚಿವ ಗೋಪಾಲಯ್ಯ ಪ್ರತಿಕ್ರಿಯೆ ಕುಮಾರಕೃಪಾ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರಿಂದ ಹಾಳಾದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಹೃದಯದಿಂದ ನೋವಿನಿಂದ ಸತ್ಯ ಹೇಳಿದ್ದಾರೆ.
ಓದಿ-ಹೆಚ್ಡಿಕೆಗೆ 'ಕೈ' ಜೋಡಿಸೋದು ಬೇಡ ಅಂತ ಮೊದಲೇ ಹೇಳಿದ್ದೆವು: ಹೊರಟ್ಟಿ
ಅವರು ಕಾಂಗ್ರೆಸ್ ನವರ ಜೊತೆ ಎಷ್ಟು ದಿನ ಇದ್ದರೋ ಅಷ್ಟು ದಿನವೂ ನೋವಿನಲ್ಲೇ ಇದ್ದರು. ಇವತ್ತು ಅವರ ನೋವಿನ ಕಥೆ ಯನ್ನು ಜನತೆ ಮುಂದೆ ಬಿಚ್ಚಿಟ್ಟಿದ್ದಾರೆ ಈಗಲಾದರೂ ಅವರಿಗೆ ನಮ್ಮಿಂದ ನೋವು ಆಗಿಲ್ಲ. ಕಾಂಗ್ರೆಸ್ ನವರಿಂದ ನೋವು ಆಗಿದೆ ಎಂಬ ಸತ್ಯ ರಾಜ್ಯದ ಜನತೆಗೆ ಗೊತ್ತಾಗಿದೆ ಎಂದರು.
ಇದೆ ಕುಮಾರಸ್ವಾಮಿ ಸದನದಲ್ಲಿ ನನ್ನ ಮೇಲೆ ಏನೇನೋ ಆರೋಪ ಮಾಡಿದ್ದರು ಆದರೆ ಇವತ್ತು ಅವರ ನೋವಿನ ಬಗ್ಗೆ ಜನರಿಗೆ ತಿಳಿಸಿದ್ದಾರೆ ಬಿಡಿ ಎಂದರು.