ಕರ್ನಾಟಕ

karnataka

ETV Bharat / city

ದೇಗುಲಗಳಲ್ಲಿ ಭಜನೆ, ಮಂತ್ರ ಪಠಣ: ಬೆಂಗಳೂರಲ್ಲಿ ಹಿಂದೂ ಮುಖಂಡರು ಪೊಲೀಸ್‌ ವಶಕ್ಕೆ - ಆಜಾನ್ ವಿರುದ್ಧ ಹಿಂದೂ ಸಂಘಟನೆ ಪ್ರತಿಭಟನೆ

ದೇವಾಲಯಗಳಲ್ಲಿ ಭಜನೆ, ಮಂತ್ರ ಪಠಣ ಅಭಿಯಾನದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹಿಂದೂ ಮುಖಂಡರನ್ನು ಬೆಂಗಳೂರಲ್ಲಿ ಪೊಲೀಸರು ವಶಕ್ಕೆ ಪಡೆದರು.

ದೇವಾಲಯಗಳಲ್ಲಿ ಭಜನೆ, ಮಂತ್ರ ಪಠಣ
ದೇವಾಲಯಗಳಲ್ಲಿ ಭಜನೆ, ಮಂತ್ರ ಪಠಣ

By

Published : May 9, 2022, 10:13 AM IST

Updated : May 9, 2022, 10:36 AM IST

ಬೆಂಗಳೂರು:ರಾಜಧಾನಿ ಸೇರಿದಂತೆ ರಾಜ್ಯದ ಹಲವೆಡೆ ರಾಮಮಂತ್ರ ಜಪ ಪ್ರಾರಂಭವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಹಿಂದೂ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು, ದೇವಾಲಯಗಳ ಸುತ್ತಲೂ ಬಿಗಿ ಭದ್ರತೆ ಕೈಗೊಂಡಿದ್ದಾರೆ. ನಗರದ ಹಲವು ದೇವಸ್ಥಾನಗಳ ಸುತ್ತ ಪೊಲೀಸ್‌ ಸರ್ಪಗಾವಲು ಕಾಣುತ್ತಿದೆ.


ಸೋಮವಾರ ಬೆಳಗ್ಗೆ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಮೊಳಗಿಸುವುದಾಗಿ ಶ್ರೀರಾಮಸೇನೆ ಕರೆ ನೀಡಿತ್ತು. ನಗರದ ವಿವೇಕನಗರದ ಬಳಿಯ ಆಂಜನೇಯ ದೇವಸ್ಥಾನದಲ್ಲಿ ಭದ್ರತೆ ಏರ್ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಹಿತಕರ ಘಟನೆ ಸಂಭವಿಸದಂತೆ ಕಣ್ಗಾವಲು ಹಾಕಿದ್ದೇವೆ. ಕೆಲ ಹಿಂದೂ ಮುಖಂಡರನ್ನು ಮುಂಜಾಗೃತಾ ಕ್ರಮವಾಗಿ ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದರು.

ಮಸೀದಿಗಳ ಮೈಕ್ ತೆರವಿಗೆ ಆಗ್ರಹ:ಮಸೀದಿಗಳ ಮೇಲಿನ ಮೈಕ್​ಗಳ ತೆರವು ಆಗ್ರಹಿಸಿ ಕಾಳಿ ಮಠದ ರಿಷಿಕುಮಾರ ಸ್ವಾಮೀಜಿ ರಾಮತಾರಕ ಮಂತ್ರ ಪಠಿಸಿದರು. ಬೆಂಗಳೂರಿನ ಉಳ್ಳಾಲ ಬಳಿಯ ಹಿಂದೂ ಭಕ್ತರ ಮನೆಯಲ್ಲಿ ರಾಮ ಜಪ ಮಾಡಲಾಗಿದ್ದು, ಹಿಂದೂಪರ ಕಾರ್ಯಕರ್ತರು ಜಪದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: 'ಸುಪ್ರಭಾತ ಹಾಡಲು ಹೋದವರನ್ನು ಬಂಧಿಸಿದ್ದೀರಿ, ಇದು ನ್ಯಾಯವೇ?': ಮುತಾಲಿಕ್

Last Updated : May 9, 2022, 10:36 AM IST

ABOUT THE AUTHOR

...view details