ಕರ್ನಾಟಕ

karnataka

ETV Bharat / city

ಬೆಂಗಳೂರು : 5 ಕೆಜಿ ಚಿನ್ನ ಎಗರಿಸಿದ್ದ 7 ಖದೀಮರ ಗ್ಯಾಂಗ್​​ ಅಂದರ್​!

5 ಕೆಜಿ ಚಿನ್ನ ಎಗರಿಸಿದ್ದ ಖದೀಮರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ..

Bangalore robbers are arrested
ಬೆಂಗಳೂರಿನಲ್ಲಿ ದರೋಡೆಕೋರರ ಬಂಧನ

By

Published : Dec 1, 2021, 2:45 PM IST

Updated : Dec 1, 2021, 2:57 PM IST

ಬೆಂಗಳೂರು :5 ಕೆಜಿ ಚಿನ್ನ ಎಗರಿಸಿದ್ದ 7 ಖದೀಮರ ಗ್ಯಾಂಗ್‌ನ ಹೆಡೆಮುರಿಕಟ್ಟುವಲ್ಲಿ ಹಲಸೂರು ಗೇಟ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ದರೋಡೆಕೋರರ ಬಂಧನ ಕುರಿತು ನಗರ ಪೊಲೀಸ್‌ ಆಯುಕ್ತ ಕಮಲ್​ ಪಂತ್​ ಮಾಹಿತಿ ನೀಡಿರುವುದು..

ನವಂಬರ್ 19ರಂದು ಸಂಸ್ಕಾರ್ ಎಂಟರ್ಪ್ರೈಸಸ್ ಮಾಲೀಕ ಅಟ್ಟಿಕಾ ಗೋಲ್ಡ್ ಕಂಪನಿಯಲ್ಲಿ ಚಿನ್ನದ ಗಟ್ಟಿಗಳನ್ನು ಖರೀದಿಸಿ ವಾಪಸ್ಸಾಗುತ್ತಿದ್ದ ವೇಳೆ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಜ್ ಹೋಟೆಲ್ ಹತ್ತಿರ ಸಿನಿಮೀಯ ರೀತಿಯಲ್ಲಿ ಬಂದ 7 ಖದೀಮರು, ಲಾಂಗ್ ತೋರಿಸಿ 5 ಕೆಜಿ ಚಿನ್ನವನ್ನು ಎಗರಿಸಿ ಪರಾರಿಯಾಗಿದ್ದರು.

ಇದನ್ನೂ ಓದಿ:ತುಮಕೂರಿನ ಶನೇಶ್ವರ ದೇಗುಲಕ್ಕೆ ನುಗ್ಗಿದ ಕಳ್ಳರು : ಚಿನ್ನಾಭರಣಗಳನ್ನು ದೋಚಿ ಪರಾರಿ

ಈ ಕುರಿತು ದೂರು ದಾಖಲಿಸಿಕೊಂಡಿದ್ದ ಹಲಸೂರು ಗೇಟ್ ಪೊಲೀಸರು, ಆರೋಪಿಗಳಾದ ಮೊಹಮ್ಮದ್ ಪರಾನ್, ಹಂಜುಮ್, ಮೊಹಮ್ಮದ್ ಹುಸೇನ್, ಮೊಹಮ್ಮದ್ ಅರಿಫ್, ಸೊಹೈಲ್ ಬೇಗ್, ಶಾಹಿದ್ ಅಹ್ಮದ್ ಹಾಗೂ ಉಮೇಶ್ ಎನ್ನುವವರನ್ನು ಬಂಧಿಸಿ 5 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತಪಡಿಸಿರುವ ಕಮಿಷನರ್ ಕಮಲ್ ಪಂತ್, ತನಿಖಾ ತಂಡಕ್ಕೆ 70 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.

Last Updated : Dec 1, 2021, 2:57 PM IST

ABOUT THE AUTHOR

...view details