ಬೆಂಗಳೂರು: ಹಿಂದೂಸ್ತಾನ್ ಟ್ರೈನರ್ ಏರ್‌ಕ್ರಾಫ್ಟ್‌ಗೆ (HTT-40) ಶಕ್ತಿ ತುಂಬಲು ನಿರ್ವಹಣೆ ಮತ್ತು ಬೆಂಬಲ ಸೇವೆಗಳ ಜೊತೆಗೆ 88 TPE331-12B ಎಂಜಿನ್‌ಗಳು/ಕಿಟ್‌ಗಳ ಪೂರೈಕೆ ಮತ್ತು ತಯಾರಿಕೆಗಾಗಿ ಹೆಚ್‌ಎಎಲ್ 100 ಮಿಲಿಯನ್ ಡಾಲರ್ ಮೌಲ್ಯದ ಒಪ್ಪಂದ ಮಾಡಿಕೊಂಡಿದೆ. ಹನಿವೆಲ್ ಓಇ ಸೇಲ್ಸ್ ವಿಭಾಗದ ಹಿರಿಯ ನಿರ್ದೇಶಕ ಎರಿಕ್ ವಾಲ್ಟರ್ಸ್ ಮತ್ತು ಎಚ್‌ಎಎಲ್ ಕಾರ್ಯನಿರ್ವಾಹಕ ನಿರ್ದೇಶಕ (ಇ & ಐಎಂಜಿಟಿ) ಬಿ.ಕೃಷ್ಣ ಕುಮಾರ್ ಅವರು ಎಚ್‌ಎಎಲ್ ಸಿಎಂಡಿ ಆರ್.ಮಾಧವನ್ ಉಪಸ್ಥಿತಿಯಲ್ಲಿ ಒಪ್ಪಂದ ಪತ್ರವನ್ನು ವಿನಿಮಯ ಮಾಡಿಕೊಂಡರು.
ಐಎಎಫ್‌ನ ಮೂಲಭೂತ ತರಬೇತಿ ಅವಶ್ಯಕತೆಗಳನ್ನು ಪರಿಹರಿಸಲು ಹೆಚ್‌ಎಎಲ್ ಬೇಸಿಕ್ ಟ್ರೈನರ್ ಏರ್‌ಕ್ರಾಫ್ಟ್ (HTT-40) ಅನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ. ಅದಕ್ಕೆ 70 ವಿಮಾನಗಳ ಸಂಭಾವ್ಯ ಅವಶ್ಯಕತೆ ಇದೆ. ಐಎಎಫ್ ಜೊತೆಗಿನ ಒಪ್ಪಂದವು ಸುಧಾರಿತ ಹಂತದ ಅನುಮೋದನೆಯಲ್ಲಿದೆ ಎಂದು ಮಾಧವನ್ ಹೇಳಿದರು.
ಹೆಚ್‌ಎಎಲ್ ಜೊತೆಗಿನ ನಮ್ಮ ನಾಲ್ಕು ದಶಕಗಳ ಪಾಲುದಾರಿಕೆಯ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ. ಈ ಹೊಸ ಒಪ್ಪಂದದೊಂದಿಗೆ ನಮ್ಮ ಸಂಬಂಧವನ್ನು ವಿಸ್ತರಿಸಲು ಸಂತೋಷಪಡುತ್ತೇವೆ. TPE331-12 ಸಂಬಂಧಿಸಿದ ಎಂಜಿನ್‌ಗಳು ಪ್ರಪಂಚದಾದ್ಯಂತ ಕಾರ್ಯಾಚರಣೆಗಳಲ್ಲಿ ತನ್ನನ್ನು ಸಾಬೀತುಪಡಿಸಿದೆ. ಐಎಎಫ್‌ನ ಅವಶ್ಯಕತೆಗಳನ್ನು ಪೂರೈಸಲು ನಿಗದಿತ ವೇಳಾಪಟ್ಟಿಯೊಳಗೆ ಎಂಜಿನ್‌ಗಳು ಮತ್ತು ಕಿಟ್‌ಗಳನ್ನು ಬೆಂಬಲಿಸಲು ಮತ್ತು ತಲುಪಿಸಲು ನಾವು ಬದ್ಧ. ಪ್ರಸ್ತುತ ರಾಡಾರ್‌ನಲ್ಲಿರುವ ಇತರ ಎಂಜಿನ್ ಕಾರ್ಯಕ್ರಮಗಳೊಂದಿಗೆ ಮುಂಬರುವ ವರ್ಷಗಳಲ್ಲಿ HTT-40 ವಿಮಾನಗಳ ರಫ್ತುಗೆ ಬೆಂಬಲ ನೀಡಲು ಹನಿವೆಲ್ ಬದ್ಧವಾಗಿದೆ. ಈ ಒಪ್ಪಂದವು ಹೆಚ್‌ಎಎಲ್ ಮತ್ತು ಹನಿವೆಲ್ ನಡುವಿನ ಭವಿಷ್ಯದ ಸಹಯೋಗಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಎರಿಕ್ ವಾಲ್ಟರ್ಸ್ ತಿಳಿಸಿದರು.
HTT-40 ಮೂಲಮಾದರಿಗಳು TPE331-12B ಎಂಜಿನ್‌ಗಳಿಂದ ಚಾಲಿತವಾಗಿವೆ. 2014 ರಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಹನಿವೆಲ್ TPE331-12B ಟರ್ಬೊಪ್ರೂಪ್ ಎಂಜಿನ್‌ಗಾಗಿ ಉತ್ಪಾದನೆ ಮತ್ತು ದುರಸ್ತಿ ಪರವಾನಗಿ ಒಪ್ಪಂದಕ್ಕೆ ಸಹಿ ಹಾಕುವುದು 70 HTT-40 ವಿಮಾನ ಕಾರ್ಯಗತಗೊಳಿಸುವ ಪ್ರಮುಖ ಮೈಲಿಗಲ್ಲು. HTT-40 ರ ರಫ್ತು ಸಾಮರ್ಥ್ಯದ ಬೆಂಬಲಕ್ಕಾಗಿ ಹೆಚ್‌ಎಎಲ್ ಹನಿವೆಲ್ ಜೊತೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಹೆಚ್‌ಎಎಲ್ ಮತ್ತು ಹನಿವೆಲ್ 1MW ಟರ್ಬೊ ಜನರೇಟರ್‌ಗಳು, ಉತ್ಪಾದನೆ, TPE 331-10GP / 12JR ಎಂಜಿನ್‌ಗಳ ದುರಸ್ತಿ ಮತ್ತು ಡೋರ್ನಿಯರ್‌ನ ರೂಪಾಂತರಗಳಿಗಾಗಿ ಇತರ ಕ್ಷೇತ್ರಗಳನ್ನು ಅನ್ವೇಷಿಸುತ್ತಿವೆ.
ಇದನ್ನೂ ಓದಿ:ಮಾನವ ಸಹಿತ ಗಗನಯಾನ ಯೋಜನೆ: ಇಸ್ರೋಗೆ ಮೊದಲ ಹಂತದ ಹಾರ್ಡ್ವೇರ್ ಹಸ್ತಾಂತರ