ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವದ ಮಾನವಸಹಿತ ಗಗನಯಾನ ಯೋಜನೆಗೆ ಸಂಬಂಧಿಸಿದಂತೆ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) ಮೊದಲ ಹಂತದ ಹಾರ್ಡ್ವೇರ್ ಹಸ್ತಾಂತರಿಸಿತು. ನಗರದ ಓಲ್ಡ್ ಏರ್ಪೋರ್ಟ್ ರಸ್ತೆಯ ಹೆಚ್ಎಎಲ್ ಸಂಸ್ಥೆಯ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಎರಡನೇ ಹಂತದ ಪಿಎಸ್ಎಲ್ವಿ ರಾಕೆಟ್ ಜೋಡಣಾ ಕೇಂದ್ರವನ್ನು ಸೋಮವಾರ ಉದ್ಘಾಟಿಸಲಾಯಿತು.
ಹೆಚ್ಎಎಲ್ ನಿಂದ ಇಸ್ರೋಗೆ ಗಗನಯಾನ ಕಕ್ಷಾ ವಾಹಕದ ರಚನೆ ಹಸ್ತಾಂತರ ಈ ವೇಳೆ ಹೆಚ್ಎಎಲ್ನಿಂದ ಇಸ್ರೋಗೆ ಗಗನಯಾನ ಕಕ್ಷಾ ವಾಹಕದ ರಚನೆಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಮಾನವ ಸಹಿತ ಗಗನಯಾನ ದೇಶದ ಪ್ರಸ್ತುತ ಹಾಗೂ ಭವಿಷ್ಯದ ಬಾಹ್ಯಾಕಾಶ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದರು.
ಹೆಚ್ಎಎಲ್ ನಿಂದ ಇಸ್ರೋಗೆ ಗಗನಯಾನ ಕಕ್ಷಾ ವಾಹಕದ ರಚನೆ ಹಸ್ತಾಂತರ ಬಾಹ್ಯಾಕಾಶ ಮಿಷನ್ಗಳಲ್ಲಿ ಖಾಸಗಿಯವರ ಪಾತ್ರ:ಬಾಹ್ಯಾಕಾಶ ಮಿಷನ್ಗಳಲ್ಲಿ ಸ್ವದೇಶಿ ಹಾಗೂ ಕಡಿಮೆ ವೆಚ್ಚದಲ್ಲಿ ಕಾರ್ಯಕ್ರಮ ಜಾರಿಗೆ ತರುವ ಸವಾಲಿನ ಕೆಲಸದಲ್ಲಿ ಹೆಚ್ಎಎಲ್ ಜೊತೆ ಜೊತೆಗೆ ಖಾಸಗಿಯವರ ಪಾತ್ರ ಕೂಡ ಬಹಳ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹೆಚ್ಎಎಲ್ ನಿಂದ ಇಸ್ರೋಗೆ ಗಗನಯಾನ ಕಕ್ಷಾ ವಾಹಕದ ರಚನೆ ಹಸ್ತಾಂತರ ಹೆಚ್ಎಎಲ್ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಆರ್.ಮಾಧವನ್ ಮಾತನಾಡಿ, ಇಸ್ರೋ ಜತೆಗಿನ ನಾಲ್ಕು ದಶಕಗಳ ಸಂಬಂಧವನ್ನು ಮೆಲುಕು ಹಾಕಿದರು. ಜತೆಗೆ ಇಸ್ರೋ ಬಾಹ್ಯಾಕಾಶ ಉಡಾವಣಾ ವಾಹಕದ ಜೋಡಣೆ ಕಾರ್ಯದಲ್ಲಿ ಹೆಚ್ಎಎಲ್ ದೊಡ್ಡ ಜವಾಬ್ದಾರಿಯನ್ನು ಹೊರಲು ಸಿದ್ಧವಾಗಿದೆ. ಇಸ್ರೋ ಜತೆ ಹೆಚ್ಎಎಲ್ ನಂಬಿಕಸ್ಥ ಜೊತೆಗಾರನಾಗಿ ಸಮರ್ಪಣಾ ಮನೋಭಾವ ಹಾಗೂ ಹುರುಪಿನಿಂದ ಕಾರ್ಯನಿರ್ವಹಿಸಲಿದೆ ಎಂದರು.
ಇದನ್ನೂ ಓದಿ:ಇಸ್ರೋದಿಂದ ವರ್ಷದ ಮೊದಲ ಉಡ್ಡಯನ ಯಶಸ್ವಿ: ಕಕ್ಷೆ ಸೇರಿದ 3 ಉಪಗ್ರಹಗಳು