ಬೆಂಗಳೂರು:ನಗರದಥಣಿಸಂದ್ರದ ಹಜ್ ಭವನದಲ್ಲಿ ನಿರ್ಮಿಸಲಾದ 147 ಆಕ್ಸಿಜನ್ ವ್ಯವಸ್ಥೆಯುಳ್ಳ ಕೋವಿಡ್ ಆರೈಕೆ ಕೇಂದ್ರವನ್ನು ಸಚಿವ ಆರ್. ಅಶೋಕ್ ಉದ್ಘಾಟನೆ ಮಾಡಿದರು.
ಕಳೆದ ಬಾರಿ ಕೋವಿಡ್ ಕೇರ್ ಸೆಂಟರ್ ಆಗಿದ್ದ ಹಜ್ ಭವನ ಇದೀಗ ಆಕ್ಸಿಜನ್ ಸೆಂಟರ್ ಆಗಿದೆ. ನಾಳೆಯಿಂದಲೇ ಇದು ಕಾರ್ಯಾರಂಭ ಮಾಡಲಿದೆ. ಅಧಿಕಾರಿಗಳು ಕಳೆದ ಹತ್ತು ದಿನಗಳಿಂದ ಆಕ್ಸಿಜನ್ ಸೆಂಟರ್‌ಗಾಗಿ ಶ್ರಮ ವಹಿಸಿದ್ದಾರೆ. ಹಜ್ ಭವನದಲ್ಲಿ ಚಿಕಿತ್ಸೆಗಾಗಿ 8 ವೈದ್ಯರು, 12 ದಾದಿಯರು, 12 ಹೌಸ್ ಕೀಪಿಂಗ್ ಸಿಬ್ಬಂದಿ, ಡಾಟಾ ಎಂಟ್ರಿ ಆಪರೇಟರ್ಗಳನ್ನು ನಿಯೋಜಿಸಲಾಗಿದೆ. ಈ ಭಾಗದ ಜನರಿಗೆ ಅನುಕೂಲವಾಗುವಂತೆ ನೂರು ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಿದ್ದೇವೆ ಎಂದು ಸಚಿವ ಆರ್. ಅಶೋಕ್ ಹೇಳಿದರು.
ರೋಗ ಗುಣಲಕ್ಷಣಗಳುಳ್ಳ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುವುದು. ಇಲ್ಲಿ 24 ಗಂಟೆ ಕಾಲವೂ ಅಂಬ್ಯುಲೆನ್ಸ್ ಸೌಲಭ್ಯ ಇರಲಿದೆ. ಸೋಂಕಿತರಿಗೆ ಬೆಳಗ್ಗೆ ಉಪಹಾರ, ಹಣ್ಣು, ಸೂಪ್, ಮಧ್ಯಾಹ್ನದ ಊಟ, ಸಂಜೆ ಚಹಾ ಮತ್ತು ಬಿಸ್ಕತ್ತು, ರಾತ್ರಿ ಊಟ ಮತ್ತು ಹಾಲು ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕಂದಾಯ ಸಚಿವರು ತಿಳಿಸಿದರು.