ಬೆಂಗಳೂರು: ಖಾಸಗಿ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದ ಬಿಟ್ ಕಾಯಿನ್ ದಂಧೆಯ ಆರೋಪಿ ಶ್ರೀಕೃಷ್ಣ ಆಲಿಯಾಸ್ ಶ್ರೀಕಿ ಒಂದು ತಿಂಗಳ ಬಳಿಕ ಪೊಲೀಸರ ಮುಂದೆ ಹಾಜರಾಗಿದ್ದಾನೆ.
Bitcoin case: ನಾಪತ್ತೆಯಾಗಿದ್ದ ಶ್ರೀಕಿ ಪೊಲೀಸರ ಮುಂದೆ ದಿಢೀರ್ ಪ್ರತ್ಯಕ್ಷ! - bitcoin case accused Sri Krishna
ಕಳೆದ ತಿಂಗಳು ಖಾಸಗಿ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದ ಶ್ರೀಕಿ, ಅಲಿಯಾಸ್ ಶ್ರೀಕೃಷ್ಣ ಭಾನುವಾರ ದಿಢೀರ್ ಆಗಿ ಪೊಲೀಸರ ಮುಂದೆ ಪ್ರತ್ಯಕ್ಷವಾಗಿದ್ದಾನೆ.
ಕಳೆದ ತಿಂಗಳು ಖಾಸಗಿ ಹೋಟೆಲ್ನಲ್ಲಿ ತಂಗಿದ್ದ ಶ್ರೀಕಿ ಕ್ಷುಲ್ಲಕ ಕಾರಣಕ್ಕಾಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಸಂಬಂಧ ಜೀವನ ಭೀಮಾನಗರ ಪೊಲೀಸರು ಆತನನ್ನು ಬಂಧಿಸಿದ್ದರು. ನಂತರ ಷರತ್ತುಬದ್ಧ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ.
ಪ್ರತಿ 15 ದಿನಕ್ಕೊಮ್ಮೆ ಠಾಣೆಗೆ ಬಂದು ಸಹಿ ಹಾಕಿ ಹೋಗುವಂತೆ ಪೊಲೀಸರು ಸೂಚಿಸಿದ್ದರು. ಆದರೆ ಒಂದು ತಿಂಗಳು ಕಳೆದರೂ ಆತ ಪೊಲೀಸರ ಮುಂದೆ ಹಾಜರಾಗಿರಲಿಲ್ಲ. ಎರಡು ಬಾರಿ ಗೈರು ಹಾಜರಾದ ಕಾರಣ ಪೊಲೀಸರು ಜಾಮೀನು ರದ್ದು ಕೋರಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಮುಂದಾಗುತ್ತಿದ್ದಂತೆ ಭಾನುವಾರ ಪೊಲೀಸರ ಮುಂದೆ ಮತ್ತೆ ಶ್ರೀಕಿ ಪ್ರತ್ಯಕ್ಷವಾಗಿದ್ದಾನೆ. ವಿಚಾರಣೆ ನಡೆಸಿ ಮತ್ತೆ ಜ. 4 ರಂದು ಬರುವಂತೆ ಪೊಲೀಸರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.