ಕರ್ನಾಟಕ

karnataka

ETV Bharat / city

ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಮಾಜಿ ಸಚಿವ ಹೆಚ್.ಆಂಜನೇಯ, ರಘು ಆಚಾರ್ ಹಿಂದೇಟು

ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಹಿನ್ನೆಲೆಯಲ್ಲಿ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಮಾಜಿ ಸಚಿವ ಹೆಚ್.ಆಂಜನೇಯ ಹಾಗೂ ರಘು ಆಚಾರ್ ಹಿಂದೇಟು ಹಾಕಿದ್ದಾರೆ.

h-anjaneya-and-raghu-achar
ಆಂಜನೇಯ ರಘು ಆಚಾರ್

By

Published : Nov 15, 2021, 7:52 PM IST

ಬೆಂಗಳೂರು: ಚಿತ್ರದುರ್ಗ ವಿಧಾನ ಪರಿಷತ್ ಚುನಾವಣೆಯಲ್ಲಿ (Legislative Council Election 2021) ಹೆಚ್‌.ಆಂಜನೇಯ ಹಾಗೂ ರಘು ಆಚಾರ್ ಹೆಸರು ಬಲವಾಗಿ ಕೇಳಿ ಬಂದಿತ್ತು. ಆದರೆ ಇಬ್ಬರೂ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದು ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ.

ಈ ನಿಟ್ಟಿನಲ್ಲಿ ಇಂದು ಚಿತ್ರದುರ್ಗ ಕಾಂಗ್ರೆಸ್​​​ ಮುಖಂಡರ ತಂಡ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು (Chitradurga legislative council election) ಬೆಂಗಳೂರಿನ‌ ಅವರ ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿದರು.

ಬಳಿಕ ಮಾತನಾಡಿದ ಮಾಜಿ ಸಚಿವ ಹೆಚ್.ಆಂಜನೇಯ, ಮಂಜುನಾಥ್ ಹಿರಿಯೂರಿನವರು, ಸೋಮಶೇಖರ್ ಪರಿಷತ್​ ಆಕಾಂಕ್ಷಿ. ರಘು ಆಚಾರ್ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಶೇ. 65ಕ್ಕೂ ಹೆಚ್ಚು ಪಂಚಾಯತ್ ಸದಸ್ಯರು ಕಾಂಗ್ರೆಸ್ ಬೆಂಬಲಿಗರು ಇದ್ದಾರೆ. ಯಾರೇ ಸ್ಪರ್ಧಿಸಿದ್ರೂ ಅವರು ಗೆಲ್ತಾರೆ ಎಂದರು.

ಹೊರಗಿನವರು ಅನ್ನೋ ಪ್ರಶ್ನೆ ಬರಲ್ಲ. ಕಾಂಗ್ರೆಸಿಗ ಅನ್ನೋದು ಅಷ್ಟೇ ಮುಖ್ಯ. ವಿಧಾನ ಸಭೆ ಮತ್ತು ದೆಹಲಿ ನೋಡದವರಿಗೆ ಎಂಎಲ್ಎ ಮತ್ತು ಎಂಪಿ ಮಾಡಿದ್ದೇ ಕಾಂಗ್ರೆಸ್. ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ ಎಂದು ಭರವಸೆ ವ್ಯಕ್ತಪಡಿಸಿದರು.

ನನಗೆ ನಿಲ್ಲುವಂತೆ ರಘುಆಚಾರ್ ಹೇಳಿದ್ದರು. ನಾನೇ ಎಲ್ಲ ನೋಡಿಕೊಳ್ತೀನಿ ಎಂದು ಎಂದಿದ್ರು. ನಾನು ವಿಧಾನ ಸಭೆಗೆ ಆಕಾಂಕ್ಷಿ. ಜತೆಗೆ ಚಿತ್ರದುರ್ಗ ಲೋಕಸಭೆ ಸೇರಿದಂತೆ ಮೂರು ವಿಧಾನ ಸಭಾ ಕ್ಷೇತ್ರಗಳು ಮೀಸಲು ಕ್ಷೇತ್ರಗಳು ಹೀಗಾಗಿ ಬೇರೆಯವರಿಗೆ ಅವಕಾಶ ಸಿಗಬೇಕು ಎಂದು ತಿಳಿಸಿರುವುದಾಗಿ ಹೇಳಿದರು.

'ಮಾತಿನ‌ ಚಟಕ್ಕೆ ಕೆಲವರು ಮಾತನಾಡುತ್ತಾರೆ'

ಪ್ರಿಯಾಂಕ ಖರ್ಗೆ ಹೆಣ್ಣೋ ಗಂಡೋ ಅನ್ನೋದೇ ಸಂಶಯ ಎಂಬ ಪ್ರತಾಪ ಸಿಂಹ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಾತಿನ ಚಟಕ್ಕೆ ಕೆಲವರು ಮಾತನಾಡ್ತಾರೆ. ಅವರನ್ನು ನಿರ್ಲಕ್ಷ್ಯ ಮಾಡಬೇಕು. ಸಿ.ಟಿ.ರವಿ, ತೇಜಸ್ವಿ ಸೂರ್ಯ, ಪ್ರತಾಪ ಸಿಂಹ ಮಾತನಾಡುವುದನ್ನು ಚಟ ಮಾಡಿಕೊಂಡಿದ್ದಾರೆ. ಅವರಿಗೆ ಬೇರೆ ಕೆಲಸ ಇಲ್ಲ ಎಂದು ಕಿಡಿಕಾರಿದರು.

ಅವರಿಗೆ ಆಡಳಿತ ವಿರೋಧಿ ಅಲೆ ಸೃಷ್ಟಿ ಆಗಿದೆ. ಜನ ದಂಗೆ ಎದ್ದಿದ್ದಾರೆ. ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಮರಿ ಖರ್ಗೆ, ಹೆಣ್ಣೋ ಗಂಡೋ ಅಂತ ಕೇಳುವುದು ಸರಿಯಾ?. ಮುಂದೆ ಸೋಲಿನ ಹತಾಶೆಯಿಂದ ಹೀಗೆ ಮಾತನಾಡುತ್ತಿದ್ದಾರೆ ಎಂದರು.

ABOUT THE AUTHOR

...view details