ಬೆಂಗಳೂರು: ನೆರೆಹಾವಳಿ ಸಂತ್ರಸ್ತರಿಗೆ ಸಹಾಯ ಮಾಡುವುದಾಗಿ ಹೇಳಿ ಬಿಗ್ಬಾಸ್ ಮನೆಯೊಳಗೆ ಹೋಗಿದ್ದ ಅಕ್ಕಿ ಮಠದ ಗುರುಲಿಂಗ ಸ್ವಾಮೀಜಿ ವಾರದಲ್ಲೇ ವಾಪಸ್ ಬಂದಿದ್ದಾರೆ.
ಹಾವೇರಿಯ ಗುರುಲಿಂಗ ಸ್ವಾಮೀಜಿ ನೇರವಾಗಿ ಕಿರಿಕ್ ಪಾರ್ಟಿ ಚಂದನ್ ಆಚಾರ್ ಅವರನ್ನು ನಾಮಿನೇಟ್ ಮಾಡಿ ಹೊರ ಬಂದಿದ್ದಾರೆ. ಸ್ವಾಮೀಜಿ ಅವರು ಗೆದ್ದರೆ ಎಲ್ಲ ಹಣವನ್ನು ಉತ್ತರ ಕರ್ನಾಟಕದ ಜನರಿಗೆ ನೀಡುತ್ತೇನೆ ಎಂದಿದ್ದರು. ಅಲ್ಲದೆ, ಕ್ಯಾಪ್ಟನ್ ಆಯ್ಕೆ ವಿಚಾರಕ್ಕೆ ಪಡೆದುಕೊಂಡಿದ್ದ ಕೆಂಪು ಬ್ಯಾಂಡನ್ನು ಗಾಯಕ ವಾಸಕಿ ವೈಭವ್ ಅವರಿಗೆ ಹೊರಬಂದಿದ್ದಾರೆ.
ಮನೆಯೊಳಗೆ ಪ್ರವೇಶಿಸುವ ಸಂದರ್ಭ ಸುದೀಪ್ ಅವರು ಸ್ವಾಮೀಜಿಗೆ ಸಸಿಯೊಂದನ್ನು ನೀಡಿದ್ದರು. ಸ್ವಾಮೀಜಿ ನೆಟ್ಟ ಸಸಿಯನ್ನು ಪೋಷಣೆ ಮಾಡುವುದಾಗಿ ಮನೆ ಸದಸ್ಯರು ಭರವಸೆ ನೀಡಿದ್ದಾರೆ.
ರವಿ ಬೆಳಗೆರೆ ಮೊದಲ ದಿನವೇ ಅನಾರೋಗ್ಯದ ಕಾರಣ ಬಿಗ್ಬಾಸ್ನಿಂದ ಹೊರಹೋಗಿದ್ದರು. ಆ ನಂತರ ಒಂದು ವಾರದ ಮಟ್ಟಿಗೆ ಅತಿಥಿಯಾಗಿ ಮತ್ತೆ ಬಿಗ್ಬಾಸ್ ಮನೆಗೆ ಪ್ರವೇಶ ಕೊಟ್ಟಿದ್ದರು. ಮತ್ತೋರ್ವ ಸ್ಪರ್ಧಿ ಕಿಶನ್ ಅನಾರೋಗ್ಯದ ಹಿನ್ನೆಲೆಯಲ್ಲಿ ಈಗಾಗ್ಲೇ ಬಿಗ್ಬಾಸ್ನಿಂದ ಹೊರಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೊದಲ ವಾರದಲ್ಲಿ ಮನೆಯಿಂದ ಹೊರ ಹೋಗಲು ಬರಹಗಾರ್ತಿ ಚೈತ್ರಾ ಕೊಟ್ಟೂರ್, ನಿರೂಪಕಿ ಚೈತ್ರಾ ವಾಸುದೇವನ್, ಗುರುಲಿಂಗ ಸ್ವಾಮೀಜಿ, ಹಾಸ್ಯನಟ ಕುರಿ ಪ್ರತಾಪ್, ನಟ ರಾಜು ತಾಳಿ ಕೋಟೆ ಮತ್ತು ಪತ್ರಕರ್ತ ರವಿ ಬೆಳಗೆರೆ ನಾಮಿನೇಟ್ ಆಗಿದ್ದರು.