ಕರ್ನಾಟಕ

karnataka

ETV Bharat / city

3ನೇ ಹಂತದ ಲಸಿಕಾಭಿಯಾನ.. ಆರೋಗ್ಯ ಕಾರ್ಯಕರ್ತರ ಅವಲಂಬಿತ ಕುಟುಂಬದವರ ಲಸಿಕೆಗೆ ಮಾರ್ಗಸೂಚಿ - ಕೋವಿಡ್ ಲಸಿಕೆ ನೀಡಲು ಮಾರ್ಗಸೂಚಿ

18 ರಿಂದ 44 ವರ್ಷದ ಫಲಾನುಭವಿಗಳಿಗೆ ಮೇ 22 ರಿಂದ ಆಯ್ದ ಗುಂಪುಗಳಿಗೆ ಲಸಿಕೆ ಪ್ರಾರಂಭಿಸಲಾಗಿತ್ತು. ಇದೀಗ ಆರೋಗ್ಯ ಕಾರ್ಯಕರ್ತರ ಅವಲಂಬಿತ ಕುಟುಂಬದವರನ್ನುರಾಜ್ಯ ಸರ್ಕಾರ ಗುರುತಿಸಿರುವ ದುರ್ಬಲ ಗುಂಪಿನ ಫಲಾನುಭವಿಗಳು ಮತ್ತು ರಾಜ್ಯ ಕೊರೊನಾ ಮುಂಚೂಣಿ ಕಾರ್ಯಕರ್ತರು ಗುಂಪಿಗೆ ಈಗಾಗಲೇ ಸೇರ್ಪಡೆಗೊಳಿಸಿದ್ದು, ಲಸಿಕಾಕರಣ ನಡೆಸಲು ತಿಳಿಸಿದೆ..

guidelines-for-vaccination-
ಮೂರನೇ ಹಂತದ ಲಸಿಕಾಭಿಯಾನ

By

Published : Jun 8, 2021, 9:21 PM IST

Updated : Jun 8, 2021, 9:28 PM IST

ಬೆಂಗಳೂರು :ರಾಜ್ಯದಲ್ಲಿ 18 ರಿಂದ 44 ವರ್ಷ ವಯೋಮಾನದವರಲ್ಲಿ ಆದ್ಯತೆ ಗುಂಪಿನ ಆರೋಗ್ಯ ಕಾರ್ಯಕರ್ತರ ಅವಲಂಬಿತ ಕುಟುಂಬದವರಿಗೆ ಕೋವಿಡ್ ಲಸಿಕೆ ನೀಡಲು ಮಾರ್ಗಸೂಚಿ ಹೊರಡಿಸಲಾಗಿದೆ.

ಓದಿ: ಭೀಮಾ ತೀರದಲ್ಲಿ ಮುಗಿಯದ ರಕ್ತ ಚರಿತೆ: ಜಿ.ಪಂ ಮಾಜಿ ಸದಸ್ಯನ ಸಹೋದರನ ಬರ್ಬರ ಹತ್ಯೆ

18 ರಿಂದ 44 ವರ್ಷದ ಫಲಾನುಭವಿಗಳಿಗೆ ಮೇ 22ರಿಂದ ಆಯ್ದ ಗುಂಪುಗಳಿಗೆ ಲಸಿಕೆ ಪ್ರಾರಂಭಿಸಲಾಗಿತ್ತು. ಇದೀಗ ಆರೋಗ್ಯ ಕಾರ್ಯಕರ್ತರ ಅವಲಂಬಿತ ಕುಟುಂಬದವರನ್ನು ರಾಜ್ಯ ಸರ್ಕಾರ ಗುರುತಿಸಿರುವ ದುರ್ಬಲ ಗುಂಪಿನ ಫಲಾನುಭವಿಗಳು ಮತ್ತು ರಾಜ್ಯ ಕೊರೊನಾ ಮುಂಚೂಣಿ ಕಾರ್ಯಕರ್ತರ ಗುಂಪಿಗೆ ಈಗಾಗಲೇ ಸೇರ್ಪಡೆಗೊಳಿಸಿದ್ದು, ಲಸಿಕಾಕರಣ ನಡೆಸಲು ತಿಳಿಸಿದೆ.

ಹೊಸ ಮಾರ್ಗಸೂಚಿ ಏನು?

- ಭಾರತ ಸರ್ಕಾರದ ಮಾರ್ಗಸೂಚಿಯಲ್ಲಿ ವ್ಯಾಖ್ಯಾನಿಸಿದಂತೆ ಆರೋಗ್ಯ ಕಾರ್ಯಕರ್ತರೆಂದರೆ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವವರು ಮತ್ತು ಆರೋಗ್ಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇತರ ನೌಕರರು.

- ಈ ವ್ಯಾಖ್ಯಾನದನ್ವಯ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯದಿದ್ದರೆ, ಅವರಿಗೆ ಭಾರತ ಸರ್ಕಾರದಿಂದ ಲಸಿಕಾಕರಣಕ್ಕಾಗಿ ಸರಬರಾಜಾದ ಲಸಿಕೆಗಳನ್ನು ಬಳಸಿ ಲಸಿಕೆ ನೀಡುವುದು.

- ಜನವರಿ 6, 2021ರಿಂದ ಪ್ರಾರಂಭಿಸಲಾದ ಮೊದಲ ಹಂತದ ಕೋವಿಡ್ ಲಸಿಕಾಕರಣದಲ್ಲಿ ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರ ಕುಟುಂಬದವರನ್ನು, ರಾಜ್ಯದ ಮೂರನೇ ಹಂತದ ಕೋವಿಡ್ ಲಸಿಕಾಕರಣದಲ್ಲಿ ಗುರುತಿಸಲಾದ ದುರ್ಬಲ ಗುಂಪಿನಡಿ/ಅತಿ ಅಪಾಯದಲ್ಲಿರುವ (Vulnerable group) ಕೋವಿಡ್ ಲಸಿಕಾಕರಣಕ್ಕೆ ಸೇರ್ಪಡೆಗೊಳಿಸಲಾಗಿದೆ.

- ಆರೋಗ್ಯ ಕಾರ್ಯಕರ್ತರ ಕುಟುಂಬದವರೆಂದರೆ ಒಂದೇ ಸೂರಿನಡಿ ವಾಸಿಸುವ ಗಂಡ/ಹೆಂಡತಿ, ಅತ್ತೆ, ಮಾವ, ತಂದೆ, ತಾಯಿ ಮತ್ತು 18 ರಿಂದ 44 ವರ್ಷದೊಳಗಿನವರಿಗೆ ಮಾತ್ರ ಲಸಿಕೆ ನೀಡಲಾಗುವುದು.

- ಆರೋಗ್ಯ ಕಾರ್ಯಕರ್ತರು ತಮ್ಮ ಕುಟುಂಬದವರೆಂದು ಪರಿಗಣಿಸಲು ನೀಡುವ ದಾಖಲೆಯನ್ನು ಆರೋಗ್ಯ ಕಾರ್ಯಕರ್ತರು ಕರ್ತವ್ಯ ನಿರ್ವಹಿಸುವ ಸಂಸ್ಥೆಯ ಮುಖ್ಯಸ್ಥರು ಪರಿಶೀಲಿಸಿ ಪ್ರಮಾಣೀಕರಿಸುವುದು.

- ಸದರಿ ಗುಂಪಿನಲ್ಲಿರುವ 45 ವರ್ಷ ಮೇಲ್ಪಟ್ಟವರಿಗೆ ಭಾರತ ಸರ್ಕಾರದಿಂದ ಸರಬರಾಜಾದ ಲಸಿಕೆಗಳನ್ನು ಬಳಸಿ ಲಸಿಕಾಕರಣವನ್ನು ನಡೆಸುವುದು.

- ಹಾಗೇ 18 ರಿಂದ 44 ವರ್ಷದೊಳಗಿನವರಿಗೆ ರಾಜ್ಯ ಸರ್ಕಾರದಿಂದ ಖರೀದಿಸಿದ ಲಸಿಕೆಗಳನ್ನು ಬಳಸಿ ಲಸಿಕಾಕರಣ ನಡೆಸುವುದು.

ರಾಜ್ಯ ಗುರುತಿಸಿರುವ ದುರ್ಬಲ ಗುಂಪು, ಮುಂಚೂಣಿ ಕಾರ್ಯಕರ್ತರು ಯಾರು? :

* ಅಂಗವೈಕಲ್ಯ ಹೊಂದಿರುವ (ಮಾನಸಿಕ ಅಸ್ವಸ್ಥತ ಸೇರಿದಂತೆ) ಫಲಾನುಭವಿಗಳು ಮತ್ತು ಆರೈಕೆದಾರರು.

* ಕೈದಿಗಳು, ಚಿತಾಗಾರ/ಸ್ಮಶಾನ ರುದ್ರಭೂಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸ್ವಸಹಾಯಕರು.

* ಕೋವಿಡ್-19 ಕರ್ತವ್ಯಕ್ಕೆ ನಿಯೋಜಿಸಲಾದ ಶಿಕ್ಷಕರು.

* ಸರ್ಕಾರಿ ಸಾರಿಗೆ ಸಿಬ್ಬಂದಿ, ಆಟೋ ಮತ್ತು ಕ್ಯಾಬ್ ಚಾಲಕರು, ವಿದ್ಯುತ್ ಮತ್ತು ನೀರು ಸರಬರಾಜು ಮಾಡುವವರು, ಅಂಚೆ ಇಲಾಖೆಯ ಸಿಬ್ಬಂದಿ, ಬೀದಿ ಬದಿಯ ವ್ಯಾಪಾರ ಮಾಡುವವರು, ಭದ್ರತೆ ಮತ್ತು ಕಚೇರಿಗಳ ಹೌಸ್‌ಕೀಪಿಂಗ್ ಸಿಬ್ಬಂದಿ.

* ನ್ಯಾಯಾಂಗ ಅಧಿಕಾರಿಗಳು,ವಯೋವೃದ್ಧರು/ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರ ಆರೈಕೆದಾರರು ಹಾಗೂ ಮಕ್ಕಳ ಸಂರಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

* ಮಾಧ್ಯಮದವರು.

* ಆಸ್ಪತ್ರೆಗಳಿಗೆ ಸರಕು ಸರಬರಾಜು ಮಾಡುವ ವ್ಯಕ್ತಿಗಳು.

* ಆಯಿಲ್ ಇಂಡಸ್ಟ್ರಿ ಮತ್ತು ಗ್ಯಾಸ್ ಸರಬರಾಜು ಮಾಡುವವರು (ಪೆಟ್ರೋಲ್ ಬಂಕ್ ಕರ್ಮಚಾರಿ ಒಳಗೊಂಡಂತೆ).

* ಔಷಧ ತಯಾರಿಸುವ ಕಂಪನಿಯ ಸಿಬ್ಬಂದಿ.

* ಆಸ್ಪತ್ರೆಗಳಿಗೆ ಆಕ್ಸಿಜನ್, ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವ ಸಿಬ್ಬಂದಿ ಹಾಗೂ ಎಲ್‌ಎಂಒ ಸಿಬ್ಬಂದಿ (Liquid medical oxygen plant).

* ಅಧಿಕೃತ ಗುರುತಿನ ಚೀಟ ಹೊಂದಿರದ ಫಲಾನುಭವಿಗಳು (ಉದಾಹರಣೆ: ವೃದ್ಧಾಶ್ರಮ ವಾಸಿಗಳು, ನಿರ್ಗತಿಕರು)

* ಭಾರತೀಯ ಆಹಾರ ನಿಗಮ ಸಿಬ್ಬಂದಿ ಹಾಗೂ ಕರ್ನಾಟಕ ರಾಜ್ಯ ಆಹಾರ ನಿಗಮ ಸಿಬ್ಬಂದಿ.

* ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕೆಲಸಗಾರರು ಕರ್ನಾಟಕ ರಾಜ್ಯ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ.

* 18 ವರ್ಷ 44 ವರ್ಷ ವಯೋಮಾನದಲ್ಲಿನ ಕೋಮಾರ್ಬಿಡಿಟಿ ಹೊಂದಿರುವ ಫಲಾನುಭವಿಗಳು.

* ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಸಿಬ್ಬಂದಿ.

* ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ತೋಟಗಾರಿಕೆ ಇಲಾಖೆಯ ಸಿಬ್ಬಂದಿ.

* ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ (ಐಇಎಲ್) ಸಿಬ್ಬಂದಿ.

* ಗ್ರಾಮ ಪಂಚಾಯತ್ ಮತ್ತು ನಗರಾಡಳಿತ ಸಂಸ್ಥೆಯ ಸ್ಥಳೀಯಾಡಳಿತ ಪ್ರತಿನಿಧಿಗಳು.

* ಆರೋಗ್ಯ ಕಾರ್ಯಕರ್ತರ ನಿಕಟ ಕುಟುಂಬಸ್ಥರು.

Last Updated : Jun 8, 2021, 9:28 PM IST

ABOUT THE AUTHOR

...view details