ಬೆಂಗಳೂರು: ಪಾಲಿಕೆಯ ಕಸದ ಲಾರಿಯಿಂದ ಸರಣಿ ಅಪಘಾತಗಳು ಆಗುತ್ತಿವೆ. ಪಾಲಿಕೆಯ ಗೈಡ್‌ಲೈನ್ಸ್ ಅನ್ನು ಚಾಲಕರು ಗಾಳಿಗೆ ತೂರಿದ್ದಾರಾ? ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಒಂದೇ ತಿಂಗಳಿನಲ್ಲಿ ಕಸದ ಲಾರಿಯಿಂದ ಮೂರು ಅಪಘಾತಗಳಾಗಿವೆ. ಹಾಗಾಗಿ, ಕಾಂಪ್ಯಾಕ್ಟರ್ಗಳು ಇನ್ಮುಂದೆ ರಸ್ತೆಗಿಳಿಯುವ ಮುನ್ನ ಕೆಲ ಕಡ್ಡಾಯ ನಿಯಮಗಳನ್ನು ಪಾಲಿಸಬೇಕೆಂದು ಪಾಲಿಕೆಯಿಂದ ಖಡಕ್ ಆದೇಶ ಹೊರಡಿಸಲಾಗಿದೆ.
ಎಲ್ಲಾ ಕಾಂಪ್ಯಾಕ್ಟರ್/ಟಿಪ್ಪರ್ ವಾಹನಗಳಿಗೂ ಫಿಟ್ನೆಸ್ ಸರ್ಟಿಫಿಕೇಟ್ ಇರಬೇಕು. ಹಾಗೇ ಇದರ ತಪಾಸಣೆಯನ್ನು ಇನ್ಮುಂದೆ ಬಿಬಿಎಂಪಿ ಮಾರ್ಷಲ್ಸ್ ಕೈಗೊಳ್ಳಬೇಕು. ಎಲ್ಲಾ ಕಾಂಪ್ಯಾಕ್ಟರ್, ಟಿಪ್ಪರ್ಗಳಿಗೆ ವೇಗ ನಿಯಂತ್ರಕಗಳನ್ನು ಅಳವಡಿಸಿರುವ ಕುರಿತು ಸಾರಿಗೆ ಪ್ರಾಧಿಕಾರ ದೃಢೀಕರಿಸಬೇಕು. ಈ ಬಗ್ಗೆ ಕಾರ್ಯಪಾಲಕ ಅಭಿಯಂತರರು ಹಾಗೂ ಟ್ರಾಫಿಕ್ ಪೊಲೀಸರೊಂದಿಗೆ ಚೆಕ್ಕಿಂಗ್ ಕೈಗೊಂಡು ವಾಹನ ಸಂಚಾರ ಯೋಗ್ಯವಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು.