ಕರ್ನಾಟಕ

karnataka

ETV Bharat / city

ಭೀಕರ ನೆರೆಯ ಎಫೆಕ್ಟ್​: ಕಳೆಗುಂದಿದ ಗೌರಿ-ಗಣೇಶ ಹಬ್ಬ - ಗೌರಿ ಗಣೇಶ ಹಬ್ಬ

ಅತ್ತ ರಾಜ್ಯದಲ್ಲಿ ಆದ ಪ್ರವಾಹ ಹಾಗೂ ಇತ್ತ ಪಿಒಪಿ ಗಣೇಶ ಮೂರ್ತಿಗಳು ಬ್ಯಾನ್ ಆಗಿರುವ ಪರಿಣಾಮ ನಿರೀಕ್ಷೆ ಮಾಡಿದಷ್ಟು ಗಣೇಶ ಮೂರ್ತಿಗಳ ಖರೀದಿ- ಮಾರಾಟವಾಗುತ್ತಿಲ್ಲ ಎಂದು ಮಾರಾಟಗಾರರು ಅಭಿಪ್ರಾಯ ಪಟ್ಟಿದ್ದಾರೆ.

ಕಳೆಗುಂದಿದ ಮೂರ್ತಿಗಳ ವ್ಯಾಪಾರ

By

Published : Sep 1, 2019, 3:11 AM IST

Updated : Sep 1, 2019, 12:25 PM IST

ಬೆಂಗಳೂರು:ಪ್ರತಿ ಬಾರಿಯೂ ಗೌರಿ ಗಣೇಶ ಹಬ್ಬವನ್ನು ಎಲ್ಲೆಡೆ ಸಂಭ್ರಮ-ಸಡಗರದಿಂದ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಉಂಟಾದ ಭೀಕರ ನೆರೆ, ಹಬ್ಬದ ಸಡಗರವನ್ನು ಕಳೆಗುಂದಿಸಿದೆ.

ರಾಜ್ಯದಲ್ಲಿ ಈ ಬಾರಿ ಯಾರು ಊಹೆ ಮಾಡದ ರೀತಿಯಲ್ಲಿ ಹಲವು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದ್ದವು. ಹಲವೆಡೆ ಲಕ್ಷಾಂತರ ಮಂದಿ ಮನೆ -ಮಠ ಕಳೆದುಕೊಂಡರು. ಹೀಗಿರುವಾಗ ಹಬ್ಬ ಮಾಡುವ ಮನಸ್ಸಾದರೂ ಹೇಗೆ ತಾನೇ ಬರಬೇಕು. ಹೀಗಾಗಿ ಉದ್ಯಾನನಗರಿಯಲ್ಲಿ ನಿರೀಕ್ಷೆ ಮಾಡಿದಷ್ಟು ಗಣೇಶ ಮೂರ್ತಿಗಳ ಖರೀದಿ- ಮಾರಾಟವಾಗಿಲ್ಲ ಅಂತಾರೆ ಮಾರಾಟಗಾರರು.

ಕಳೆಗುಂದಿದ ಮೂರ್ತಿಗಳ ವ್ಯಾಪಾರ

ಈ ಸಲ ಹಬ್ಬವನ್ನ ವಿಜೃಂಭಣೆಯಿಂದ ಆಚರಣೆ ಮಾಡುವ ಬದಲು, ಪುಟ್ಟ ಗಣಪನಿಗೆ ಪೂಜಿಸಿ ಸರಳವಾಗಿ ಆಚರಿಸಲು ಸಾರ್ವಜನಿಕರು ಮುಂದಾಗಿರುವುದರಿಂದ ಮೂರ್ತಿ ತಯಾರಕರ ಹೊಟ್ಟೆ ಪಾಡು ಹೇಳತೀರದಾಗಿದೆ. .

ಇತ್ತ ಪಿಒಪಿ ಗಣೇಶ ಮೂರ್ತಿಗಳು ಬ್ಯಾನ್ ಆಗಿದ್ದು, ಮಣ್ಣಿನ ಗಣೇಶ ಮೂರ್ತಿಗಳ ಬೆಲೆ ಏರಿಕೆ ಆಗಿದೆ. ಇದು ಕೂಡ ಹಬ್ಬದ ಸಂಭ್ರಮಕ್ಕೆ ಕೊಂಚ ಅಡ್ಡಿಯಾಗಿದೆ. ಈ ಬಾರಿ ವಿಶೇಷವಾಗಿ, ಗಣೇಶ ಮೊಬೈಲ್​​ ಫೋನ್​ನಲ್ಲಿ ಮಾತಾಡೋದರಲ್ಲಿ ಬ್ಯುಸಿಯಾಗಿರುವುದು, ತನ್ನ ವಾಹಕನಿಗೆ ಪಾಠ ಮಾಡುವ‌ ಹಾಗೇ, ಇನ್ನು ತನ್ನಿಷ್ಟದ ಕಡುಬು ಸವಿಯುತ್ತಿರುವ ಮೂರ್ತಿಗಳು ಎಲ್ಲರನ್ನು ಆಕರ್ಷಿಸುತ್ತಿದೆ. ಮಕ್ಕಳು ಕೂಡ ವಿಭಿನ್ನವಾಗಿರುವ ಗಣೇಶ ಮೂರ್ತಿಗಳನ್ನ ನೋಡಿ ಫೋಟೋ‌ ಕಿಕ್ಲಿಸಿಕೊಳ್ಳುತ್ತಿದ್ದ ದೃಶ್ಯ ನಗರದಲ್ಲಿ ಕಂಡು ಬಂತು.

Last Updated : Sep 1, 2019, 12:25 PM IST

ABOUT THE AUTHOR

...view details