ಕರ್ನಾಟಕ

karnataka

ETV Bharat / city

ಮಹಿಳೆಯರಿಗೆ ಸರ್ಕಾರ ಬಂದೂಕು ಪರವಾನಗಿ ನೀಡಲಿ: ಸಚಿವ ಆನಂದ್ ಸಿಂಗ್

ಮೈಸೂರು ಅತ್ಯಾಚಾರ ಪ್ರಕರಣ ಖಂಡಿಸಿರುವ ಸಚಿವ ಆನಂದ್ ಸಿಂಗ್, ಮಹಿಳೆಯರಿಗೆ ಸರ್ಕಾರದಿಂದ ಬಂದೂಕು ಪರವಾನಗಿ ಸಿಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ಸಚಿವ ಆನಂದ್ ಸಿಂಗ್
ಸಚಿವ ಆನಂದ್ ಸಿಂಗ್

By

Published : Aug 28, 2021, 5:13 AM IST

ಬೆಂಗಳೂರು: ದುಬೈ ಮಾದರಿಯಲ್ಲಿಯೇ ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕು. ಆ ಮಾದರಿಯಲ್ಲಿಯೇ ಇಲ್ಲಿಯೂ ತಪ್ಪಿತಸ್ಥರಿಗೆ ಅದು ಕಟ್ ಇದು ಕಟ್ ಆಗ್ಬೇಕು. ಆದ್ರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಕಷ್ಟ ಎಂದು ಸಚಿವ ಆನಂದ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ಅತ್ಯಾಚಾರ ಘಟನೆ ಖಂಡಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆನಂದ್ ಸಿಂಗ್ ಮಾತನಾಡಿ, ಬೇರೆಯವರ ಇಲಾಖೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ.ಇತಂಹ ಘಟನೆಯಾಗಬಾರದು ಎಂದಿದ್ದಾರೆ.

ಸಚಿವ ಆನಂದ್ ಸಿಂಗ್ ಪೋಸ್ಟ್

ಇನ್ನು ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಫೇಸ್‌ಬುಕ್‌ ಪೋಸ್ಟ್ ಕೂಡಾ ಮಾಡಿರುವ ಸಚಿವರು, ಮಹಿಳೆಯರಿಗೆ ಸರ್ಕಾರದಿಂದ‌ ಬಂದೂಕು ಪರವಾನಗಿ ಸಿಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅತ್ಯಾಚಾರ ಪ್ರಕರಣ ಅತ್ಯಂತ ಹೀನ ಕೃತ್ಯವಾಗಿದೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗುವುದು ಶತಃಸಿದ್ಧ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ನಮ್ಮ ಸರ್ಕಾರ ಬದ್ದ. ಆದರೂ ಸಹ ಹೆಣ್ಣು ಮಗಳು ಇಂತಹ ನೀಚ ಕೃತ್ಯಗಳಿಂದ ಹಾಗೂ ಸ್ವಾವಲಂಬಿಯಾಗಿ ತನ್ನ ಆತ್ಮ ರಕ್ಷಣೆ ಮಾಡಿಕೊಳ್ಳಲು ಸರ್ಕಾರದಿಂದ ಮಹಿಳೆಯರಿಗೆ ಬಂದೂಕು ಪರವಾನಗಿ ನೀಡಿದರೆ ಉತ್ತಮ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಬರೆದಿದ್ದಾರೆ.

(ಮೈಸೂರು ಬಳಿಕ ಬೆಳಗಾವಿಯಲ್ಲೂ ಹೇಯ ಕೃತ್ಯ: ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್..! ಕಾಮುಕರು ಅರೆಸ್ಟ್​)

ABOUT THE AUTHOR

...view details