ಕರ್ನಾಟಕ

karnataka

ETV Bharat / city

ಮಾಜಿ ಪೈಲ್ವಾನ್, ಕುಸ್ತಿಪಟುಗಳಿಗೆ ಸಿಹಿ ಸುದ್ದಿ: ಮಾಸಾಶನಕ್ಕೆ ಅನುದಾನ ಬಿಡುಗಡೆ - ಮಾಜಿ ಪೈಲ್ವಾನ್, ಕುಸ್ತಿಪಟು ಮಾಸಾಶನ ಅನುದಾನ

ಮಾಜಿ ಪೈಲ್ವಾನ್‌ ಹಾಗೂ ಮಾಜಿ ಕ್ರೀಡಾಪಟುಗಳ ಮಾಸಾಶನಕ್ಕೆ 2.18 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ

wrestlers
wrestlers

By

Published : Nov 9, 2021, 5:32 PM IST

ಬೆಂಗಳೂರು: ಒಂದು ವರ್ಷದಿಂದ ಬಾಕಿಯಿದ್ದ ಮಾಜಿ ಪೈಲ್ವಾನ್‌ ಹಾಗೂ ಮಾಜಿ ಕ್ರೀಡಾಪಟುಗಳ ಮಾಸಾಶನಕ್ಕೆ 2.18 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಅನುದಾನವನ್ನು ಜಿಲ್ಲಾ ಪಂಚಾಯತ್‌ಗಳಿಗೆ ಹಂಚಿಕೆ ಮಾಡಿ ಬಿಡುಗಡೆಗೊಳಿಸಲಾಗಿದೆ.

ಸಚಿವ ಡಾ.ನಾರಾಯಣಗೌಡ ಅವರು ಇಲಾಖಾ ಪ್ರಗತಿ ಪರಿಶೀಲನೆಗೆ ಹಲವು ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ಮಾಜಿ ಕ್ರೀಡಾಪಟುಗಳು, ಮಾಜಿ ಪೈಲ್ವಾನ್​ಗಳು ಮಾಸಾಶನ ವಿಳಂಬದ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಮೂರು ಬಾರಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಸಚಿವ ಡಾ.ನಾರಾಯಣಗೌಡ ಅವರು, ಒಂದು ತಿಂಗಳೊಳಗೆ ಹಣ ಬಿಡುಗಡೆ ಮಾಡುವಂತೆ ತಾಕೀತು ಮಾಡಿದ್ದರು. ಇದೀಗ ಸಚಿವ ನಾರಾಯಣಗೌಡ ಅವರ ಸೂಚನೆಯಂತೆ ಅನುದಾನ ಬಿಡುಗಡೆಯಾಗಿದ್ದು, ಹಲವು ತಿಂಗಳುಗಳಿಂದ ಸಂಕಷ್ಟದಲ್ಲಿದ್ದ ಮಾಜಿ ಕ್ರೀಡಾಪಟುಗಳು ಹಾಗೂ ಮಾಜಿ ಪೈಲ್ವಾನ್‌ಗಳಿಗೆ ಅನುಕೂಲವಾಗಲಿದೆ.


ಸಂಕಷ್ಟದಲ್ಲಿರುವ ಮಾಜಿ ಕ್ರೀಡಾಪಟುಗಳು ಹಾಗೂ ಮಾಜಿ ಪೈಲ್ವಾನ್‌ಗಳು ಸರಿಯಾದ ರೀತಿಯಲ್ಲಿ ಮಾಸಾಶನ ಸಿಗುತ್ತಿಲ್ಲ ಎಂದು ಹಲವು ಬಾರಿ ನನ್ನ ಗಮನಕ್ಕೆ ತಂದಿದ್ದರು. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಹಣಕಾಸಿನ ಬಗ್ಗೆ ಮಾಹಿತಿ ಪಡೆದು, ಕೂಡಲೇ ಹಣ ಬಿಡುಗಡೆ ಮಾಡುವಂತೆ ಸೂಚಿಸಲಾಗಿತ್ತು. ಮಾಜಿ ಕ್ರೀಡಾಪಟುಗಳು, ಮಾಜಿ ಪೈಲ್ವಾನ್‌ಗಳ ಮಾಸಾಶನಕ್ಕೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಡಾ.ನಾರಾಯಣಗೌಡ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಸಾಶನ ಎಷ್ಟು?
ರಾಜ್ಯ ಸರ್ಕಾರದಿಂದ ರಾಜ್ಯಮಟ್ಟದ ಮಾಜಿ ಕ್ರೀಡಾಪಟುಗೆ 1000 ರೂ., ರಾಷ್ಟ್ರಮಟ್ಟದ ಕ್ರೀಡಾಪಟುವಿಗೆ 1500 ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟುವಿಗೆ 2000 ಮಾಸಾಶನ ಹಾಗೂ ರಾಜ್ಯ ಮಟ್ಟದ ಕುಸ್ತಿಪಟುವಿಗೆ 2500 ರೂ., ರಾಷ್ಟ್ರ ಮಟ್ಟದ ಕುಸ್ತಿಪಟುವಿಗೆ 3000 ರೂ. ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುವಿಗೆ 4000 ರೂಪಾಯಿ ಮಾಸಾಶನ ನೀಡಲಾಗುತ್ತಿದೆ.

ABOUT THE AUTHOR

...view details