ಬೆಂಗಳೂರು: 2021ನೇ ಸಾಲಿನ ಜುಲೈಯಿಂದ ನವೆಂಬರ್ ವರೆಗೆ ಅತಿವೃಷ್ಟಿ ಪ್ರವಾಹದಿಂದ ಹಾನಿಗೊಳಗಾದ ಮನೆಗಳಿಗೆ ಮನೆ ಹಾನಿ ಪರಿಹಾರವನ್ನು ಪರಿಷ್ಕೃತ ದರದಲ್ಲಿ ಪಾವತಿಸಲು 300 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮೊದಲ ಕಂತಿನಲ್ಲಿ 'ಎ' ಮತ್ತು 'ಬಿ' ವರ್ಗದ ಮನೆ ಹಾನಿ ಪ್ರಕರಣಗಳಿಗೆ SDRF/NDRE ಮಾರ್ಗ ಸೂಚಿಯಂತೆ 95,100 ರೂ. ಗಳ ಪರಿಹಾರ ಹಾಗೂ 'ಸಿ' ವರ್ಗದ ಮನೆಗಳಿಗೆ 50,000 ರೂ.ಗಳಂತೆ ಪಾವತಿಸಲು ಒಟ್ಟು 400.86 ಕೋಟಿ ರೂ. ಬಿಡುಗಡೆಗೊಳಿಸಲಾಗಿತ್ತು. ಇದೀಗ 2021ನೇ ಸಾಲಿನ ಅತಿವೃಷ್ಟಿ/ಪ್ರವಾಹದಿಂದ ಮನೆ ಹಾನಿಗೆ ಮೊದಲ ಕಂತಿನ ಪರಿಹಾರ ಪಡೆದಿರುವ ಫಲಾನುಭವಿಗಳಿಗೆ ಜಿಪಿಎಸ್ ಆಧಾರಿತ ಪ್ರಗತಿಗನುಗುಣವಾಗಿ ಜಿಲ್ಲಾಧಿಕಾರಿಗಳು ತಂತ್ರಾಂಶದಲ್ಲಿ ನಮೂದಿಸಿರುವ 53,368 ಫಲಾನುಭವಿಗಳ ಮನೆಗಳಿಗೆ ಬಿಡುಗಡೆ ಮಾಡಲು 500 ಕೋಟಿ ರೂ. ಅನುದಾನ ಅಗತ್ಯವಿತ್ತು.