ಬೆಂಗಳೂರು: 2022-23ನೇ ಸಾಲಿನ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಮಗ್ರ ಕ್ರಿಯಾಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಈ ಸಂಬಂಧ ಒಟ್ಟು 295.59 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರಿಯಾಯೋಜನೆ ಕೈಗೊಳ್ಳಲು ಆದೇಶಿಸಲಾಗಿದೆ.
ಅದರಂತೆ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಆಡಳಿತ ವೆಚ್ಚಕ್ಕೆ 1.25 ಕೋಟಿ ರೂ., ಸ್ವಯಂ ಚಾಲಿತ ವಾಹನ ಚಾಲನಾ ಪರೀಕ್ಷಾ ಪಥಗಳ ನಿರ್ಮಾಣ ಕಾಮಗಾರಿಗಳಿಗೆ 14.71 ಕೋಟಿ ರೂ., ಪೊಲೀಸ್ ಇಲಾಖೆಗೆ 45.47 ಕೋಟಿ ರೂ., ಸಾರಿಗೆ ಇಲಾಖೆಗೆ 122.11 ಕೋಟಿ ರೂ., ಆರ್ಟಿಒ ಜಾರಿ ಹಾಗೂ ಶಿಕ್ಷಣಕ್ಕಾಗಿ 21.42 ಕೋಟಿ ರೂ, ರಸ್ತೆ ಸುರಕ್ಷತೆಗಾಗಿನ ಜನ ಜಾಗೃತಿಗಾಗಿ 37.35 ಕೋಟಿ ರೂ. ಸೇರಿ ಒಟ್ಟು 295.59 ಕೋಟಿ ರೂ. ಕ್ರಿಯಾಯೋಜನೆ ಕೈಗೊಳ್ಳಲು ಅನುಮೋದನೆ ನೀಡಲು ಆದೇಶಿಸಲಾಗಿದೆ.