ಕರ್ನಾಟಕ

karnataka

ETV Bharat / city

ಹೆಸರಘಟ್ಟದಲ್ಲಿ ಸರ್ಕಾರಿ ಜಾಗ ಬಲಾಢ್ಯರ ಪಾಲು: ಸ್ಮಶಾನ, ಪೊಲೀಸ್ ಠಾಣೆ, ಕ್ರೀಡಾಂಗಣ ನಿರ್ಮಾಣಕ್ಕೆ ಜಾಗವೇ ಇಲ್ಲ - Bangalore

ಹೆಸರಘಟ್ಟದಲ್ಲಿ ಸದ್ಯ 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಪಟ್ಟಣ ಪಂಚಾಯಿತಿಯಾಗುವ ಅರ್ಹತೆ ಇದ್ದರೂ ಗ್ರಾಮ ಪಂಚಾಯಿತಿಯಾಗಿಯೇ ಉಳಿದಿದೆ. 20 ಸಾವಿರಕ್ಕೂ ಹೆಚ್ಚು ಜನರಿಗೆ ಮೂಲಭೂತ ಸೌಕರ್ಯಗಳನ್ನು ಗ್ರಾಮ ಪಂಚಾಯತಿ ಒದಗಿಸಲು ಹೆಣಗಾಡುತ್ತಿದೆ. ಇದರ ಜತೆಗೆ ಸರ್ಕಾರಿ ಜಾಗ ಉಳ್ಳವರ ಪಾಲಾಗಿದೆ ಎನ್ನಲಾಗ್ತಿದೆ.

Govt land encroached
ಹೆಸರಘಟ್ಟ

By

Published : Oct 29, 2021, 1:17 PM IST

ಯಲಹಂಕ:ಬೆಂಗಳೂರು ನಗರದ ಪಕ್ಕದಲ್ಲಿರುವ ಹೆಸರಘಟ್ಟದಲ್ಲಿ ಸಮುದಾಯದ ಒಳಿತಿಗೆ ಬಳಕೆಯಾಗಬೇಕಿದ್ದ ಸರ್ಕಾರಿ ಜಾಗ ಬಲಾಢ್ಯರ ಪಾಲಾಗಿದೆ. ಜನ ಸಾಮಾನ್ಯರಿಗೆ ಬೇಕಾದ ಸ್ಮಶಾನ, ಪೊಲೀಸ್ ಠಾಣೆ ಹಾಗು ಕ್ರೀಡಾಂಗಣ ನಿರ್ಮಾಣಕ್ಕೂ ಜಾಗ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಆಶ್ರಯ ಯೋಜನೆಯಲ್ಲಿ ಬಡವರಿಗೆ ನೀಡಲಾದ ನಿವೇಶನಗಳು ಸಹ ಬಲಾಢ್ಯರ ಪಾಲಾಗಿವೆ ಎಂಬ ಆರೋಪ ಕೇಳಿ ಬಂದಿದೆ.

ಹೆಸರಘಟ್ಟದಲ್ಲಿ ಸರ್ಕಾರಿ ಜಾಗ ಬಲಾಢ್ಯರ ಪಾಲು..ಒತ್ತುವರಿ ತೆರವಿಗೆ ಸ್ಥಳೀಯರ ಮನವಿ

ಗ್ರಾಮದ ಸರ್ವೆ ನಂ.51ರ ಅಲೆ ತೋಪು ಜಮೀನನಲ್ಲಿ ಪ್ರಮುಖ ಸರ್ಕಲ್ ಇದ್ದು, ಇಲ್ಲಿನ ಜಾಗವನ್ನ ಉಳ್ಳವರು ಆಕ್ರಮಿಸಿಕೊಂಡು ವಾಣಿಜ್ಯ ಮಳಿಗೆಗಳನ್ನ ತೆರೆದಿದ್ದಾರೆ. ಒತ್ತುವರಿ ಜಾಗವನ್ನ ತೆರವು ಮಾಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಹೆಸರಘಟ್ಟದಲ್ಲಿ ಹೆರಿಗೆ ಆಸ್ಪತ್ರೆಯಿದ್ದರೂ, ವೈದ್ಯರು ಮತ್ತು ಸಿಬ್ಬಂದಿ ಇಲ್ಲದಿರುವುದರಿಂದ ಜನರು ಖಾಸಗಿ ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ಇದೆ.

20 ಸಾವಿರ ಜನಸಂಖ್ಯೆವುಳ್ಳ ಗ್ರಾಮಕ್ಕೆ ಸ್ಮಶಾನವೇ ಇಲ್ಲ. ಅಂತಿಮ ವಿಧಿ ವಿಧಾನಗಳನ್ನು ಮಾಡಲು ಜನರು ಹೆಣಗಾಡ ಬೇಕಾಗಿದೆ. 15 ವರ್ಷಗಳ ಹಿಂದೆಯೇ ಮಾರುಕಟ್ಟೆ ನಿರ್ಮಾಣ ಮಾಡಿದರೂ ಮಾರುಕಟ್ಟೆ ಬಳಕೆಯಾಗುತ್ತಿಲ್ಲ. ವ್ಯಾಪಾರಿಗಳು ಬಸ್ ನಿಲ್ದಾಣದಲ್ಲಿಯೇ ತಮ್ಮ ಮಳಿಗೆಗಳನ್ನು ಇಟ್ಟುಕೊಂಡಿದ್ದು ಮಾರುಕಟ್ಟೆ ಪ್ರದೇಶ ಸದ್ಯ ಹಸುಗಳಿಗೆ ಅಶ್ರಯ ತಾಣವಾಗಿದೆ.

1983ರಲ್ಲಿ ಅಶ್ರಯ ಯೋಜನೆಯಡಿ ಸ್ಥಳೀಯ ಬಡವರಿಗೆ 1 ಎಕರೆ 8 ಗುಂಟೆ ಜಾಗದಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಆದರೆ ಇದೇ ಗ್ರಾಮದ ಜಯರಾಮಯ್ಯ ಮತ್ತು ಆತನ ಸಂಬಂಧಿಕರು ಇದೇ ಜಾಗವನ್ನ ಆಕ್ರಮಿಸಿಕೊಂಡಿದ್ದಾರೆ. ಇದರ ವಿರುದ್ಧ ಬಡವರು ಹೈಕೋರ್ಟ್​ನಲ್ಲಿ ದಾವೆ ಹೂಡಿದ್ದು, 2013ರಲ್ಲಿ ನಿವೇಶನದಾರರ ಪರವಾಗಿ ತೀರ್ಪು ನೀಡಿದೆ. ಆದರೆ ಇಲ್ಲಿಯವರೆಗೂ ಸರ್ವೇ ಅಧಿಕಾರಿಗಳು ಬಂದು ನಿವೇಶನಗಳನ್ನ ಗುರುತಿಸಿ ಬಡವರಿಗೆ ಹಂಚುವ ಕೆಲಸ ಮಾಡಿಲ್ಲವೆಂದು ನಿವೇಶನದಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ABOUT THE AUTHOR

...view details