ಕರ್ನಾಟಕ

karnataka

ETV Bharat / city

ಒನಕೆ ಓಬವ್ವ ಸ್ಮಾರಕ ನಿರ್ಮಾಣಕ್ಕೆ ಮುಂದಾದ ಸರ್ಕಾರ: ವೆಚ್ಚ, ನೀಲನಕಾಶೆಗೆ ಸೂಚನೆ

ಒನಕೆ ಓಬವ್ವ ಸ್ಮಾರಕ ನಿರ್ಮಾಣಕ್ಕೆ (Onake Obavva) ರಾಜ್ಯ ಸರ್ಕಾರ ಮುಂದಾಗಿದ್ದು, ಅಂದಾಜು ವೆಚ್ಚ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದೆ.

onake obavva
onake obavva

By

Published : Nov 11, 2021, 7:28 PM IST

ಬೆಂಗಳೂರು: ಒನಕೆ ಓಬವ್ವನ ಹೆಸರಿನಲ್ಲಿ ಸ್ಮಾರಕ (Onake Obavva Monument) ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು ಸ್ಥಳ ಗುರುತಿಸಿ, ನೀಲ ನಕಾಶೆ, ಅಂದಾಜು ವೆಚ್ಚ ಸಿದ್ಧಪಡಿಸಲು ಚಿತ್ರದುರ್ಗ ಜಿಲ್ಲೆ ಜಿಲ್ಲಾಧಿಕಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ನ.11ರಂದು ಒನಕೆ ಓಬವ್ವ ಜಯಂತಿ (Onake Obavva Jayanti) ಆಚರಣೆ ನಿರ್ಧಾರದ ಬೆನ್ನಲ್ಲೇ ರಾಜ್ಯ ಸರ್ಕಾರ ಇದೀಗ ಒನಕೆ‌ ಓಬವ್ವ ಹೆಸರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಸ್ಥಳ ಗುರುತಿಸಿ, ನೀಲ ನಕಾಶೆ, ಅಂದಾಜು ವೆಚ್ಚಗಳನ್ನು ಸಿದ್ಧಪಡಿಸಿ, ಹಣ ಮಂಜೂರಾತಿಗೆ ಇಲಾಖೆಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಚಿತ್ರದುರ್ಗ ಡಿಸಿಗೆ ತಿಳಿಸಿದೆ.

ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಅವರು ಛಲವಾದಿ ಜನಾಂಗಕ್ಕೆ ಸೇರಿದ ಚಿತ್ರದುರ್ಗದ ಒನಕೆ ಓಬವ್ವ ಹೆಸರಿನಲ್ಲಿ ಸ್ಮಾರಕ ನಿರ್ಮಾಣಕ್ಕಾಗಿ ಸರ್ಕಾರದಿಂದ ರೂ.5 ಕೋಟಿ ಹಣ ಬಿಡುಗಡೆ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದರು. ಸಿಎಂ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಇದನ್ನೂ ಓದಿ: (onake obavva Jayanthi: ಇಂದು ಒನಕೆ ಓಬವ್ವ ಜಯಂತಿ... ಮೋದಿ ಸೇರಿ ಶುಭ ಕೋರಿದ ಅನೇಕ ಗಣ್ಯರು)

ABOUT THE AUTHOR

...view details