ಕರ್ನಾಟಕ

karnataka

ETV Bharat / city

ಸಂಗೊಳ್ಳಿ ರಾಯಣ್ಣ ಜನ್ಮದಿನ, ಹುತಾತ್ಮ ದಿನ ರಾಜ್ಯಾದ್ಯಂತ ಆಚರಣೆಗೆ ಸರ್ಕಾರ ಆದೇಶ - ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನವನ್ನು ಆಗಸ್ಟ್‌ 15 ರಂದು ಹಾಗೂ ಜನವರಿ 26 ರಂದು ಸ್ಮರಣಾರ್ಥವಾಗಿ ಕಾರ್ಯಕ್ರಮ ಹಮ್ಮಿಕೊಂಡು ಗೌರವ ಸಲ್ಲಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.

Govt. Circular to Celebrate Birthday and Martyr's Day of sangolli rayanna across the Karnataka
ಸಂಗೊಳ್ಳಿ ರಾಯಣ್ಣ ಜನ್ಮದಿನ, ಹುತಾತ್ಮ ದಿನ ರಾಜ್ಯಾದ್ಯಂತ ಆಚರಿಣೆಗೆ ಸರ್ಕಾರ ಆದೇಶ

By

Published : Aug 13, 2021, 11:28 PM IST

Updated : Aug 14, 2021, 6:12 AM IST

ಬೆಂಗಳೂರು:ಆಗಸ್ಟ್‌ 15 ರಂದುಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನ ಹಾಗೂ ಹುತಾತ್ಮರಾದ ಜನವರಿ 26 ರಂದು ರಾಯಣ್ಣ ಸ್ಮರಣಾರ್ಥವಾಗಿ ಬೆಂಗಳೂರು ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗೌರವ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ.

ಈ ಸಂಬಂಧ ಆದೇಶ ಹೊರಡಿಸಿರುವ ಸರ್ಕಾರ ಆಗಸ್ಟ್ 15 ಹಾಗೂ ಜನವರಿ 26 ರಂದು ಬೆಂಗಳೂರು ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನವನ್ನು ಆಗಸ್ಟ್ 15 ರಂದು ಆಚರಿಸಲಾಗುತ್ತಿದ್ದರೆ, ಜನವರಿ 26 ಅವರು ಹುತಾತ್ಮರಾದ ದಿನವಾಗಿದೆ. ಈ ನಿರ್ಧಾರವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸ್ಚಾಗತಿಸಿದ್ದಾರೆ. ಇದೊಂದು ಐತಿಹಾಸಿಕ ನಿರ್ಧಾರ ಎಂದು ಟ್ವೀಟ್ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.

Last Updated : Aug 14, 2021, 6:12 AM IST

ABOUT THE AUTHOR

...view details