ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ಕೊರೊನಾ ನಿರ್ವಹಣೆಗೆ ಅಧಿಕಾರಿಗಳನ್ನ ನಿಯೋಜಿಸಿದ ಸರ್ಕಾರ - Govt assigns Corona

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿನ ಕೋವಿಡ್ ನಿರ್ವಹಣೆಗೆ ರಾಜ್ಯ ನೋಡಲ್ ಅಧಿಕಾರಿಯಾಗಿ ಶಿಖಾ ಹಾಗೂ ಕೋವಿಡ್-19 ಕಣ್ಗಾವಲು ಪಡೆಯ ರಾಜ್ಯ ನೋಡಲ್ ಅಧಿಕಾರಿಯಾಗಿ ಡಾ. ಹರೀಶ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ..

ಸರ್ಕಾರ
ಸರ್ಕಾರ

By

Published : Mar 19, 2021, 9:15 PM IST

ಬೆಂಗಳೂರು :ಕೋವಿಡ್ ಎರಡನೇ ಅಲೆಯ ಭೀತಿ ಹಿನ್ನೆಲೆ ಸರ್ಕಾರ ಕೊರೊನಾ ನಿರ್ವಹಣೆಗೆ ಅಧಿಕಾರಿಗಳನ್ನ ನಿಯೋಜಿಸಿದೆ. ನೋಡಲ್ ಅಧಿಕಾರಿಗಳು, ಏರ್ಪೋರ್ಟ್ ಉಸ್ತುವಾರಿ, ILI, SARI ಪ್ರಕರಣಗಳ ಉಸ್ತುವಾರಿಗೆ ಐಎಎಸ್ ಅಧಿಕಾರಿಗಳ ನೇಮಕ ಮಾಡಲಾಗಿದೆ.

ಆಪ್ತಮಿತ್ರ ಸಹಾಯವಾಣಿ ತಂತ್ರಾಂಶದ ನೋಡಲ್ ಅಧಿಕಾರಿಯಾಗಿ ತುಷಾರ್ ಗಿರಿನಾಥ್ ನೇಮಕ ಮಾಡಿದ್ದರೆ, ಆಪ್ತಮಿತ್ರ ‌ಸಹಾಯವಾಣಿ‌ ತಂತ್ರಾಂಶದ ತಂಡಕ್ಕೆ‌ ಸದಸ್ಯರಾಗಿ ಮೀನಾಕ್ಷಿ ನೇಗಿ, ಬಿಸ್ವಜಿತ್‌ ಮಿಶ್ರಾರನ್ನು ನೇಮಿಸಲಾಗಿದೆ.

ಕೊರೊನಾ ನಿರ್ವಹಣೆಗೆ ಅಧಿಕಾರಿಗಳನ್ನ ನಿಯೋಜಿಸಿದ ಸರ್ಕಾರ

ILI ಹಾಗೂ SARI ಕೇಸ್‌ಗಳನ್ನು 108 ಆ್ಯಂಬುಲೆನ್ಸ್ ಮುಖಾಂತರ ಆಸ್ಪತ್ರೆಗೆ ರವಾನಿಸುವಂತೆ ಸೂಚನೆ ನೀಡಲಾಗಿದೆ. ಈ 108 ಆ್ಯಂಬುಲೆನ್ಸ್ ಮೂಲಕ ತುರ್ತು ಚಿಕಿತ್ಸೆಗೆ ಕಳುಹಿಸುವ ವ್ಯವಸ್ಥೆಗೆ IAS ಅಧಿಕಾರಿ ಎಂ ಬಿ ರಾಜೇಶ್ ಗೌಡರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿನ ಕೋವಿಡ್ ನಿರ್ವಹಣೆಗೆ ರಾಜ್ಯ ನೋಡಲ್ ಅಧಿಕಾರಿಯಾಗಿ ಶಿಖಾ ಹಾಗೂ ಕೋವಿಡ್-19 ಕಣ್ಗಾವಲು ಪಡೆಯ ರಾಜ್ಯ ನೋಡಲ್ ಅಧಿಕಾರಿಯಾಗಿ ಡಾ. ಹರೀಶ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.

ಇದನ್ನೂ ಓದಿ .. ಮುಂಬೈನಲ್ಲೇ 3,062 ಕೋವಿಡ್​ ಕೇಸ್​, ಮಹಾರಾಷ್ಟ್ರದಲ್ಲಿ ಇಂದು ದಾಖಲೆಯ ಪ್ರಕರಣ!

ABOUT THE AUTHOR

...view details