ಬೆಂಗಳೂರು:ಒಲಿಂಪಿಕ್ಸ್ ಕ್ರೀಡಾಕೂಟದ ಪುರುಷರ ಹಾಕಿ ಸೆಮಿಫೈನಲ್‌ನಲ್ಲಿ ಭಾರತ ತಂಡವು ಬೆಲ್ಜಿಯಂ ವಿರುದ್ಧ 2-5 ಅಂತರದಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದೆ. ಇದರಿಂದ ಕುಗ್ಗಬೇಡಿ ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಟ್ವೀಟ್ ಮೂಲಕ ಭಾರತೀಯ ಹಾಕಿ ತಂಡಕ್ಕೆ ಧೈರ್ಯ ತುಂಬಿದ್ದಾರೆ.
ಆಟದಲ್ಲಿ ಸೋಲು, ಗೆಲುವು ಸಹಜ. ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪುರುಷರ ಹಾಕಿ ತಂಡ ಕೆಚ್ಚೆದೆಯ ಪ್ರದರ್ಶನ ನೀಡಿರುವುದಕ್ಕೆ ನನ್ನ ಅಭಿನಂದನೆಗಳು. ಹೋರಾಟದಲ್ಲಿ ಗೆಲುವಿಗಾಗಿ ಸೋತರೆ ಸೋಲಾಗುವುದಿಲ್ಲ. ಮರಳಿ ಪ್ರಯತ್ನ ಮಾಡುತ್ತಿರಬೇಕು. ಇದನ್ನೇ ಭಾರತೀಯ ಪುರುಷರ ಹಾಕಿ ತಂಡ ಮೈಗೂಡಿಸಿಕೊಳ್ಳಲಿ ಎಂದು ಬಯಸುತ್ತೇನೆ ಎಂದಿದ್ದಾರೆ.