ಕರ್ನಾಟಕ

karnataka

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೂಸ್ಟರ್ ಡೋಸ್ ಪಡೆದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

By

Published : Jan 14, 2022, 1:32 PM IST

Updated : Jan 14, 2022, 1:54 PM IST

ಇಂದು ಮಕರ ಸಂಕ್ರಮಣ ಹಬ್ಬದ ಹಿನ್ನೆಲೆ ರಾಜ್ಯದ ಜನತೆಗೆ ಸಂಕ್ರಾಂತಿ ಶುಭಾಶಯ ಕೋರಿದರು. ಈ ವೇಳೆ, ರಾಜ್ಯಪಾಲರಿಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸಾಥ್ ನೀಡಿದರು.

governor
ರಾಜ್ಯಪಾಲ

ಬೆಂಗಳೂರು:ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ಬೂಸ್ಟರ್ ಡೋಸ್ ಪಡೆದುಕೊಂಡರು. ಬಳಿಕ ಮಾತನಾಡಿದ ರಾಜ್ಯಪಾಲರು, ದೇಶದೆಲ್ಲೆಡೆ ಬೂಸ್ಟರ್ ಡೋಸ್ ಲಸಿಕಾ ಅಭಿಯಾನ ನಡೆಯುತ್ತಿದೆ. ಇಂದು ನಾನು ಬೂಸ್ಟರ್ ಡೋಸ್ ಪಡೆದಿದ್ದೇನೆ.

ಯಾರ‍್ಯಾರು ಬೂಸ್ಟರ್ ಡೋಸ್ ಪಡೆಯಲು ಅರ್ಹರು ಇದ್ದೀರೋ ಅವರೆಲ್ಲ ಲಸಿಕೆ ಪಡೆಯಿರಿ. ಯಾರೂ ಮೊದಲನೆ, ಎರಡನೆಯ ಲಸಿಕೆ ಪಡೆದಿಲ್ಲವೋ ಅವರು ಲಸಿಕೆ ಕಡ್ಡಾಯ ಹಾಕಿಸಿಕೊಳ್ಳಿ. ದೇಶಕ್ಕೆ ಹೋಲಿಸಿದಲ್ಲಿ ಲಸಿಕೆ ವಿಚಾರದಲ್ಲಿ ಕರ್ನಾಟಕ ಮುಂದಿದೆ. ಇದಕ್ಕೆ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ರಾಜ್ಯಪಾಲರು ಹೇಳಿದರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೂಸ್ಟರ್ ಡೋಸ್ ಪಡೆದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಅಲ್ಲದೇ ಇಂದು ಮಕರ ಸಂಕ್ರಮಣ ಹಬ್ಬದ ಹಿನ್ನೆಲೆ ರಾಜ್ಯದ ಜನತೆಗೆ ಸಂಕ್ರಾಂತಿ ಶುಭಾಶಯ ಕೋರಿದರು. ಈ ವೇಳೆ, ರಾಜ್ಯಪಾಲರಿಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸಾಥ್ ನೀಡಿದರು.

ಲಸಿಕೆ ಪಡೆಯಲು ಸಚಿವ ಸುಧಾಕರ್​ ಮನವಿ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈವರೆಗೂ 83,937 ಡೋಸ್ ಬೂಸ್ಟರ್ ಡೋಸ್ ನೀಡಲಾಗಿದೆ. 420 ಬಾಣಂತಿಯರಿಗೆ, ಗರ್ಭಿಣಿಯರು 1,179 ಮೂರನೇ ಡೋಸ್ ನೀಡಲಾಗಿದೆ. ಅರ್ಹರು ಎಲ್ಲರೂ 3ನೇ ಡೋಸ್ ಪಡೆಯಬೇಕು ಹಾಗೂ 15-18 ವರ್ಷದವರು ಲಸಿಕೆ ಪಡೆಯಬೇಕು. WHO ಕೂಡಾ ಲಸಿಕೆಯಿಂದ ಅಪಾಯ ಜಾಸ್ತಿ ಆಗಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಕೊರೊನಾದಿಂದ ರಕ್ಷಣೆ ಪಡೆಯಲು ಲಸಿಕೆ ಪಡೆಯಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್​ ಮನವಿ ಮಾಡಿದರು.

ಇನ್ನೊಂದು ವಾರ ಮಾತ್ರ ವೀಕೆಂಡ್ ಕರ್ಪ್ಯೂ ಪಾಲನೆ ಮಾಡ್ತೀವಿ ಅನ್ನೋ ಹೊಟೇಲ್, ಬಾರ್ ಮಾಲೀಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ವೀಕೆಂಡ್ ಕರ್ಪ್ಯೂನಿಂದ ಕೆಲ ವರ್ಗಕ್ಕೆ ಸಮಸ್ಯೆ ಆಗುತ್ತೆ ಅಂತ ಗೊತ್ತಿದೆ. ಆದರೆ, ಜನರ ಆರೋಗ್ಯಕ್ಕಾಗಿ ಇಂತಹ ನಿಯಮ ತೆಗೆದುಕೊಳ್ಳಲಾಗಿದೆ. ಅನಿವಾರ್ಯವಾಗಿ ಇಂತಹ ನಿಯಮ ಜಾರಿ ಮಾಡಲಾಗಿದೆ. ಎಲ್ಲರೂ ಸಹಕಾರ ನೀಡಬೇಕೆಂದು ಹೊಟೇಲ್, ಬಾರ್ ಮಾಲೀಕರಿಗೆ ಆರೋಗ್ಯ ಸಚಿವರು ಮನವಿ ಮಾಡಿದರು.

ಇದನ್ನೂ ಓದಿ:ಕೊರೊನಾ ಸ್ಫೋಟ: ರಾಜ್ಯದಲ್ಲಿ ಲಾಕ್​​ಡೌನ್ ಬಗ್ಗೆ ಸಚಿವ ಸುಧಾಕರ್ ಹೇಳಿದ್ದೇನು?

Last Updated : Jan 14, 2022, 1:54 PM IST

ABOUT THE AUTHOR

...view details