ಕರ್ನಾಟಕ

karnataka

ETV Bharat / city

ಕರ್ನಾಟಕ ಲೋಕಾಯುಕ್ತ ವೆಬ್​ಸೈಟ್ ಉದ್ಘಾಟಿಸಿದ ರಾಜ್ಯಪಾಲ ಗೆಹ್ಲೋಟ್ - ಕರ್ನಾಟಕ ಲೋಕಾಯುಕ್ತ ವೆಬ್​ಸೈಟ್ ಉದ್ಘಾಟಿಸಿದ ರಾಜ್ಯಪಾಲ ಗೆಹ್ಲೋಟ್

ಬೆಂಗಳೂರಿನ ಲೋಕಾಯುಕ್ತ ಕೇಂದ್ರ ಕಚೇರಿಯಲ್ಲಿ ಕರ್ನಾಟಕ ಲೋಕಾಯುಕ್ತ ಜಾಲತಾಣ ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲ, ಸಾರ್ವಜನಿಕರು ವೆಬ್​ಸೈಟ್​ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

Karnataka Lokayukta website, Karnataka Lokayukta website launches, Governor Gehlot launches Karnataka Lokayukta website, Gehlot launches Karnataka Lokayukta website in Bengaluru, ಕರ್ನಾಟಕ ಲೋಕಾಯುಕ್ತ ವೆಬ್​ಸೈಟ್, ಕರ್ನಾಟಕ ಲೋಕಾಯುಕ್ತ ವೆಬ್​ಸೈಟ್ ಉದ್ಘಾಟನೆ, ಕರ್ನಾಟಕ ಲೋಕಾಯುಕ್ತ ವೆಬ್​ಸೈಟ್ ಉದ್ಘಾಟಿಸಿದ ರಾಜ್ಯಪಾಲ ಗೆಹ್ಲೋಟ್, ಬೆಂಗಳೂರಿನಲ್ಲಿ ಕರ್ನಾಟಕ ಲೋಕಾಯುಕ್ತ ವೆಬ್​ಸೈಟ್ ಉದ್ಘಾಟಿಸಿದ ಗೆಹ್ಲೋಟ್
ಕರ್ನಾಟಕ ಲೋಕಾಯುಕ್ತ ವೆಬ್​ಸೈಟ್ ಉದ್ಘಾಟಿಸಿದ ರಾಜ್ಯಪಾಲ ಗೆಹ್ಲೋಟ್

By

Published : Dec 31, 2021, 8:27 AM IST

ಬೆಂಗಳೂರು:ಲೋಕಾಯುಕ್ತ ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಮತ್ತು ಎಲ್ಲಾ ವಿಷಯಗಳಲ್ಲಿ ಸಂಬಂಧಪಟ್ಟ ದೂರುದಾರರು, ಪ್ರತಿವಾದಿಗಳಿಗೆ ಮತ್ತು ಸಾರ್ವಜನಿಕರಿಗೆ ಸಕಾಲಿಕ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ನೂತನ ಕರ್ನಾಟಕ ಲೋಕಾಯುಕ್ತ ಜಾಲತಾಣಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದರು.

ಕರ್ನಾಟಕ ಲೋಕಾಯುಕ್ತ ವೆಬ್​ಸೈಟ್ ಉದ್ಘಾಟಿಸಿದ ರಾಜ್ಯಪಾಲ ಗೆಹ್ಲೋಟ್

ವ್ಯವಸ್ಥೆಯಲ್ಲಿ ಮಾನವ ಹಸ್ತಕ್ಷೇಪ ಕಡಿಮೆ ಮಾಡಿ ತಂತ್ರಜ್ಞಾನದ ಬಳಕೆಗೆ ಆದ್ಯತೆ ನೀಡುವ ಪ್ರಧಾನಿಯವರ ಚಿಂತನೆ ಪಾರದರ್ಶಕತೆ ಮತ್ತು ಉತ್ತಮ ಆಡಳಿತಕ್ಕೆ ದಾರಿ ಮಾಡಿಕೊಡುತ್ತದೆ. ಇದೇ ಚಿಂತನೆಯೊಂದಿಗೆ ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಮತ್ತು ಎಲ್ಲಾ ವಿಷಯಗಳಲ್ಲಿ ಸಂಬಂಧಪಟ್ಟ ದೂರುದಾರರು, ಪ್ರತಿವಾದಿಗಳಿಗೆ ಮತ್ತು ಸಾರ್ವಜನಿಕರಿಗೆ ಸಕಾಲಿಕ ಮಾಹಿತಿಯನ್ನು ಒದಗಿಸಲು ಲೋಕಾಯುಕ್ತ ಜಾಲತಾಣವನ್ನು ಉನ್ನತೀಕರಿಸಲಾಗಿದೆ ಎಂದು ತಿಳಿಸಿದರು.

ಅಲ್ಲದೇ, ಸಾರ್ವಜನಿಕ ಹಿತಾಸಕ್ತಿಯ ಅನೇಕ ವಿಷಯಗಳಲ್ಲಿ ಕರ್ನಾಟಕ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಸ್ವಯಂಪ್ರೇರಿತ ಕ್ರಮ ತೆಗೆದುಕೊಂಡಿದ್ದಾರೆ. ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕ ರೋಗ ಹರಡಿದ್ದರೂ ಕರ್ನಾಟಕ ಲೋಕಾಯುಕ್ತದಿಂದ 3293 ದೂರುಗಳು ಮತ್ತು 368 ಶಿಸ್ತಿನ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಮತ್ತು 228 ಪ್ರಕರಣಗಳಲ್ಲಿ ಆ್ಯಕ್ಟ್‌ನ ಸೆಕ್ಷನ್ 12(1) ಮತ್ತು 12(3) ರ ಅಡಿಯಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ವರದಿ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ ಶೆಟ್ಟಿ, ಉಪಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್, ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗಡೆ, ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಕುಮಾರ್ ಥಾಕೂರ್, ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.

ಜಾಲತಾಣದ ಉನ್ನತೀಕರಣ:

ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಹೊಸ ಜಾಲತಾಣದಲ್ಲಿ ಸಾಮಾನ್ಯ ನಾಗರಿಕರಿಗೆ ಸಂಸ್ಥೆಯ ಸ್ಥಾಪನೆ, ಉದ್ದೇಶ, ಇತಿಹಾಸ, ಸರ್ಕಾರಿ, ಸಾರ್ವಜನಿಕ ಸೇವಕರ ವಿರುದ್ಧ ದೂರುಗಳನ್ನು ಸಲ್ಲಿಸುವ ವಿಧಾನ, ದೂರು, ವಿಮರ್ಶೆ ಟಿಪ್ಪಣಿ, ಆದೇಶ ಪ್ರತಿ, 2017 ರಿಂದ ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984 ರ ವಿವಿಧ ವಿಭಾಗಗಳ ಅಡಿಯಲ್ಲಿ ಅಂಕಿಅಂಶಗಳು ಮತ್ತು ವರದಿಗಳು, ಸ್ವಯಂ ಪ್ರೇರಣೆಯಿಂದ ಲೋಕಾಯುಕ್ತ, ಉಪಲೋಕಾಯುಕ್ತರು ದಾಖಲಿಸಿಕೊಂಡಿರುವ ಪ್ರಕರಣಗಳ ವಿವರಗಳು, ಕರ್ನಾಟಕ ಲೋಕಾಯುಕ್ತಕ್ಕೆ ಸಂಬಂಧಿಸಿದ ಕೆಲಸಗಳು, ನಿಯಮಗಳು ಮತ್ತು ಕಾಯಿದೆಗಳು, ವಿವಿಧ ರೀತಿಯ ಫಾರ್ಮ್ ಫಾರ್ಮ್ಯಾಟ್‌ಗಳು ಇತ್ಯಾದಿಗಳ ಮಾಹಿತಿ ಲಭ್ಯವಿದೆ.

ABOUT THE AUTHOR

...view details