ಕರ್ನಾಟಕ

karnataka

ETV Bharat / city

ಉಪ ಚುನಾವಣೆ ಹಿನ್ನೆಲೆ.. ಆರು ಮಂದಿ ಪೊಲೀಸ್ ಅಧೀಕ್ಷಕರ ವರ್ಗಾವಣೆ.. ರಾಜ್ಯ ಸರ್ಕಾರದಿಂದ ಆದೇಶ - ಪೊಲೀಸ್ ಅಧೀಕ್ಷಕರ ವರ್ಗಾವಣೆ

ಉಪ ಚುನಾವಣೆ ನೀತಿ ಸಂಹಿತೆ ಮುಕ್ತಾಯವಾಗುವವರೆಗೂ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ..

government-transfer-of-six-superintendents-of-police
ರಾಜ್ಯ ಸರ್ಕಾರ

By

Published : Apr 3, 2021, 9:20 PM IST

Updated : Apr 3, 2021, 10:06 PM IST

ಬೆಂಗಳೂರು :ಉಪ ಚುನಾವಣೆ ಹಿನ್ನೆಲೆ ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ಆರು ಮಂದಿ ಪೊಲೀಸ್ ಅಧೀಕ್ಷಕರನ್ನು (ಸಿವಿಲ್ ಮತ್ತು ಸಶಸ್ತ್ರ) ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಳಗಾವಿ ನಗರ ಉಪ ಪೊಲೀಸ್ ಆಯುಕ್ತ ಡಾ. ಅಮಟೆ ವಿಕ್ರಂ ಅನರನ್ನು ಬೆಂಗಳೂರು ನಗರ ವಿವಿಐಪಿ ಭದ್ರತೆ ಉಪ ಪೊಲೀಸ್ ಆಯುಕ್ತರನ್ನಾಗಿ, ಬೆಳಗಾವಿ ನಗರ ಅಪರಾಧ ಮತ್ತು ಸಂಚಾರ ಉಪ ಪೊಲೀಸ್ ಆಯುಕ್ತ ಚಂದ್ರಶೇಖರ್ ಆರ್.ನೀಲಗಾರರನ್ನು ಮೈಸೂರು ರಾಜ್ಯ ಗುಪ್ತವಾರ್ತೆ ಪೊಲೀಸ್ ಅಧೀಕ್ಷಕರನ್ನಾಗಿ, ಬೆಳಗಾವಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ಯಶೋಧ ವಂಟಿಗೋಡೆರನ್ನು ಬೆಳಗಾವಿ ನಗರ ಕಾನೂನು ಮತ್ತು ಸುವ್ಯವಸ್ಥೆ ಉಪ ಪೊಲೀಸ್ ಆಯುಕ್ತರನ್ನಾಗಿ, ಮೈಸೂರು ರಾಜ್ಯ ಗುಪ್ತವಾರ್ತೆ ಪೊಲೀಸ್ ಅಧೀಕ್ಷಕ ಮುತ್ತುರಾಜ್​ರನ್ನು ಬೆಳಗಾವಿ ನಗರ ಅಪರಾಧ ಮತ್ತು ಸಂಚಾರ ಉಪ ಪೊಲೀಸ್ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯ ಡಿಎಆರ್ ಪೊಲೀಸ್ ಅಧೀಕ್ಷಕ ಯಲ್ಲಪ್ಪ ಕೆ.ಕಾಶಪ್ಪನವರ್ ಅವರನ್ನು ಬೆಂಗಳೂರು ಉತ್ತರ ಸಿಎಆರ್ ಉಪ ಪೊಲೀಸ್ ಆಯುಕ್ತರನ್ನಾಗಿ ಮತ್ತು ಬೆಂಗಳೂರು ಉತ್ತರ ಸಿಎಆರ್ ಉಪ ಪೊಲೀಸ್ ಆಯುಕ್ತ ಅಬ್ರಾಹಂ ಜಾರ್ಜ್​ರನ್ನು ಬೆಳಗಾವಿ ಜಿಲ್ಲೆಯ ಡಿಎಆರ್ ಪೊಲೀಸ್ ಅಧೀಕ್ಷಕರನ್ನಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಉಪ ಚುನಾವಣೆ ನೀತಿ ಸಂಹಿತೆ ಮುಕ್ತಾಯವಾಗುವವರೆಗೂ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

ಬೆಂಗಳೂರು ಪಶ್ಚಿಮ ವಿಭಾಗದ ಟ್ರಾಫಿಕ್ ಡಿಸಿಪಿ ಡಾ.ಕೆ.ಎಸ್.ಸೌಮ್ಯಲತಾ ರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿದೆ ಆದೇಶ ಹೊರಡಿಸಿದೆ. ಪೊಲೀಸ್ ಅಧೀಕ್ಷಕ ಕುಲುದೀಪ್ ಕುಮಾರ್ ಆರ್.ಜೈನ್ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಬೆಂಗಳೂರು ಪಶ್ಚಿಮ ವಿಭಾಗದ ಟ್ರಾಾಫಿಕ್ ಡಿಸಿಪಿಯಾಗಿ ನೇಮಕ ಮಾಡಿದೆ.

ಉಪ ಪೊಲೀಸ್ ಆಯುಕ್ತರಾಗಿದ್ದ ಡಾ.ಕೆ.ಎಸ್.ಸೌಮ್ಯಲತಾ ರನ್ನು ವರ್ಗಾವಣೆಗೊಳಿಸಿ ಯಾವುದೇ ಹುದ್ದೆಗೆ ನೇಮಕ ಮಾಡದೆ ಮುಖ್ಯ ಕಚೇರಿಗೆ ವರದಿ ಮಾಡಿಕೊಳ್ಳುಲು ಅದೇಶದಲ್ಲಿ ಸೂಚಿಸಲಾಗಿದೆ.

Last Updated : Apr 3, 2021, 10:06 PM IST

ABOUT THE AUTHOR

...view details