ಕರ್ನಾಟಕ

karnataka

ETV Bharat / city

ಎರಡಂಕಿ ಲಾಟರಿ ಆರೋಪ ಪ್ರಕರಣ: ಐಪಿಎಸ್ ಅಲೋಕ್ ಕುಮಾರ್ ಅಮಾನತು ಆದೇಶ ವಾಪಸ್​

ಎರಡಂಕಿ ಲಾಟರಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್​ ಅವರ ವಿರುದ್ಧದ ಆರೋಪ ಸಾಕ್ಷ್ಯಾಧಾರಗಳಿಂದ ಸಾಬೀತಾಗದ ಹಿನ್ನೆಲೆ ಸಿಬಿಐ ಕ್ಲೀನ್​ ಚಿಟ್​ ನೀಡಿದೆ. ಅಲ್ಲದೆ ರಾಜ್ಯ ಸರ್ಕಾರ ಅವರ ಅಮಾನತು ಅದೇಶವನ್ನು ಹಿಂಪಡೆದಿದೆ.

government-to-revoke-suspension-order-of-ips-officer-alok-kumar
ರಾಜ್ಯ ಸರ್ಕಾರ ಆದೇಶ

By

Published : Sep 25, 2020, 3:59 PM IST

Updated : Sep 25, 2020, 4:18 PM IST

ಬೆಂಗಳೂರು: ಎರಡಂಕಿ ಲಾಟರಿ ಹಗರಣ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್​ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದ್ದ ಬೆನ್ನಲ್ಲೇ ರಾಜ್ಯ ಸರ್ಕಾರ ಅಮಾನತು ಆದೇಶವನ್ನು ಹಿಂಪಡೆದಿದೆ.

ಆರೋಪ ಕೇಳಿ ಬರುತ್ತಿದ್ದಂತೆ ಐದು ತಿಂಗಳು ಕಾಲ ಸರ್ಕಾರ ಅಲೋಕ್​​ಕುಮಾರ್​​ ಅವರನ್ನು ಅಮಾನತು ಮಾಡಿತ್ತು. ಪ್ರಕರಣದಲ್ಲಿ ಅವರ ಪಾತ್ರವಿಲ್ಲ ಎಂದು ಸಿಬಿಐ ವರದಿ ನೀಡಿದ ಹಿನ್ನೆಲೆ ಅಮಾನತು ಆದೇಶ ರದ್ದುಪಡಿಸಿ ಕರ್ತವ್ಯದಲ್ಲಿದ್ದಂತೆ ತೋರಿಸಲು ಸೂಚನೆ ನೀಡಿದೆ.

ರಾಜ್ಯ ಸರ್ಕಾರ ಆದೇಶ ಪ್ರತಿ

ಲಾಟರಿ ಹಗರಣಕ್ಕೂ ಅಲೋಕ್ ಕುಮಾರ್​ಗು ಯಾವುದೇ ಸಂಬಂಧ ಇಲ್ಲ. ಅವರ ಮೇಲೆ ಆರೋಪ ಕೇಳಿ ಬಂದ ಹಿನ್ನೆಲೆ ಐದು ತಿಂಗಳು ಅಮಾನತು ಮಾಡಲಾಗಿತ್ತು. ಆದರೆ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರ ಲಭ್ಯವಾಗಿಲ್ಲ. ಹೀಗಾಗಿ ಅವರ ವಿರುದ್ಧ ಯಾವುದೇ ಶಿಸ್ತು ಕ್ರಮ‌ ಇಲ್ಲವೆಂದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರ ಆದೇಶ ಪ್ರತಿ

ಇದೀಗ ಅಮಾನತು ಮಾಡಿ ಶಿಸ್ತುಕ್ರಮ ಜರುಗಿಸಿದ್ದನ್ನ ರೆಗ್ಯುಲರ್ ಮಾಡಬಹುದು. ಸಿಬಿಐ ಅಧಿಕಾರಿಗಳಿಂದ ತನಿಖಾ ವರದಿ ಮತ್ತು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯದ ಮೂಲಕ ಮಾಹಿತಿ ನೀಡಿದೆ. ಅಲ್ಲದೆ ಎಫ್​ಐಆರ್ ಹಾಗೂ ಚಾರ್ಜ್ ಶೀಟ್​ನಲ್ಲಿ ಎಲ್ಲಿಯೂ ಅಲೋಕ್ ಕುಮಾರ್ ಹೆಸರು ಉಲ್ಲೇಖ ಆಗಿಲ್ಲ. ಸದ್ಯ ಇದರಿಂದ ಅಲೋಕ್ ಕುಮಾರ್ ಮೇಲೆ ಇದ್ದ ಆರೋಪ ಸುಳ್ಳು ಎಂಬುದು ಸಾಬೀತಾಗಿದೆ.

Last Updated : Sep 25, 2020, 4:18 PM IST

ABOUT THE AUTHOR

...view details