ಕರ್ನಾಟಕ

karnataka

ETV Bharat / city

ಮದುವೆಗೆ ಮಾರ್ಗಸೂಚಿ ಬಿಡುಗಡೆ: ಮಕ್ಕಳಿಗೆ, ಹಿರಿಯ ನಾಗರಿಕರಿಗಿಲ್ಲ ಅನುಮತಿ - Release the limitations for marriage news

ಕೋವಿಡ್ ಲಾಕ್​​​​​ಡೌನ್ ಹಿನ್ನೆಲೆಯಲ್ಲಿ ಮದುವೆ ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರ 17 ಅಂಶಗಳ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ.

ಮದುವೆಗೆ ಮಾರ್ಗಸೂಚಿ ಬಿಡುಗಡೆ
ಮದುವೆಗೆ ಮಾರ್ಗಸೂಚಿ ಬಿಡುಗಡೆ

By

Published : May 15, 2020, 5:30 PM IST

ಬೆಂಗಳೂರು: ಕೊರೊನಾ ಲಾಕ್​​​​​​ಡೌನ್ ನಡುವೆ ಮದುವೆ ಸಮಾರಂಭ ನಡೆಯಲು ರಾಜ್ಯ ಸರ್ಕಾರ ಅಧಿಕೃತ ಅನುಮತಿ ನೀಡಿದೆ. ಅದಕ್ಕಾಗಿ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. 10 ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟವರಿಗೆ ಮದುವೆ ಮನೆಗೆ ನೋ ಎಂಟ್ರಿ. ಅಲ್ಲದೇ 50 ಜನಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ಮದುವೆಗೆ ಮಾರ್ಗಸೂಚಿ ಬಿಡುಗಡೆ

ಕೋವಿಡ್ ಲಾಕ್​​​​​​ಡೌನ್ ಹಿನ್ನೆಲೆಯಲ್ಲಿ ಮದುವೆ ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ17 ಅಂಶಗಳ ಮಾರ್ಗಸೂಚಿ:

  • ಸ್ಥಳೀಯ ಆಡಳಿತದಿಂದ ಅಗತ್ಯ ಅನುಮತಿ, ಟ್ರಾವೆಲ್ ಪಾಸ್ ಕಡ್ಡಾಯ
  • 50 ಜನ‌ಕ್ಕಿಂತ ಹೆಚ್ಚು ಅತಿಥಿಗಳಿಲ್ಲ
  • ಸ್ಥಳದಲ್ಲಿ ಹವಾ ನಿಯಂತ್ರಣವಿಲ್ಲದ, ಉತ್ತಮ ನ್ಯಾಚುರಲ್ ವೆಂಟಿಲೇಷನ್ ಇರಬೇಕು
  • ಕಂಟೇನ್​ಮೆಂಟ್ ಝೋನ್​ನಲ್ಲಿರುವ ಯಾವುದೇ ವ್ಯಕ್ತಿ ಪಾಲ್ಗೊಳ್ಳುವಂತಿಲ್ಲ
  • 65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, 10 ವರ್ಷದ ಕೆಳಗಿನ ಮಕ್ಕಳಿಗೆ ಪ್ರವೇಶವಿಲ್ಲ
  • ಪ್ರವೇಶ ಸ್ಥಳ ಮತ್ತು ಅಗತ್ಯ ಸ್ಥಳಗಳಲ್ಲಿ ಸ್ಯಾನಿಟೈಸರ್​ ಇರಬೇಕು
  • ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ‌ಕಡ್ಡಾಯ
  • ಸ್ಕ್ರೀನಿಂಗ್ ವೇಳೆ ಜ್ವರ, ಶೀತ, ಕಫ, ಉಸಿರಾಟದ ತೊಂದರೆ ಕಂಡುಬಂದಲ್ಲಿ ಪ್ರವೇಶ ನಿಷೇಧ
  • ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು
  • ಎಲ್ಲರೂ ಒಂದು ಮೀಟರ್ ದೈಹಿಕ ಅಂತರ ಕಾಪಾಡಬೇಕು
  • ವಾಷ್​ರೂಮ್​ನಲ್ಲಿ ಹ್ಯಾಂಡ್​ವಾಷ್, ನೀರು, ಸೋಪು ಒದಗಿಸಬೇಕು
  • ಮದ್ಯ, ಗುಟ್ಕಾ, ಪಾನ್, ತಂಬಾಕು ಸೇವನೆಗೆ ಅವಕಾಶ ಇಲ್ಲ
  • ಕಾರ್ಯಕ್ರಮ ಸ್ಥಳ ಶುಚಿತ್ವ ಮತ್ತು ಹೈಜೆನಿಕ್ ಆಗಿರಬೇಕು
  • ಸಾರ್ವಜನಿಕ ಸ್ಥಳದಲ್ಲಿ ಉಗಿಯುವಂತಿಲ್ಲ
  • ವ್ಯವಸ್ಥೆ, ಸಮನ್ವಯ ಕೆಲಸವನ್ನು ನೋಡಲ್ ವ್ಯಕ್ತಿ ನಿರ್ವಹಿಸಬೇಕು
  • ಪಾಲ್ಗೊಳ್ಳುವವರ ಪಟ್ಟಿ ಮತ್ತು ಫೋನ್ ನಂಬರ್ ಒದಗಿಸಬೇಕು
  • ಪಾಲ್ಗೊಳ್ಳುವ ಎಲ್ಲ ಅತಿಥಿಗಳು ಆರೋಗ್ಯ ಸೇತು ಆ್ಯಪ್​​​​​​​​​​​​​​​​​​​​​​​​​​​ ಡೌನ್ ಲೋಡ್ ಮಾಡಿಕೊಂಡಿರಬೇಕು

ABOUT THE AUTHOR

...view details