ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ಎರಡನೇ ಅನ್​ಲಾಕ್​ಗೆ ಸರ್ಕಾರದ ಸಿದ್ಧತೆ ಏನು?

ಈಗಾಗಲೇ ಹಂತ ಹಂತವಾಗಿ ಲಾಕ್​ಡೌನ್ ಸಡಿಲಿಸುವ ಬಗ್ಗೆ ತೀರ್ಮಾನಿಸಿರುವ ಸರ್ಕಾರ, 11 ಜಿಲ್ಲೆಗಳಿಗೆ ವಿಧಿಸಿರುವ ನಿರ್ಬಂಧ ಮುಂದುವರೆಸಬೇಕೆ, ಬೇಡವೇ ಎಂಬುದರ ಬಗ್ಗೆಯೂ ನಾಳೆ ತೀರ್ಮಾನಿಸಲಿದೆ.

second unlock
ಎರಡನೇ ಅನ್​ಲಾಕ್​ಗೆ ಸರ್ಕಾರದ ಸಿದ್ದತೆ

By

Published : Jun 18, 2021, 2:00 PM IST

ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಲಾಕ್​ಡೌನ್ ಮತ್ತಷ್ಟು ಸಡಿಲಿಕೆ ಮಾಡಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿನ ಪಾಸಿಟಿವಿಟಿ ದರ 5ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಲಾಕ್​ಡೌನ್ ಮತ್ತಷ್ಟು ಸಡಿಲಿಕೆಗೆ ಚಿಂತಿಸಲಾಗುತ್ತಿದ್ದು, ಇನ್ನು ಎರಡನೇ ಹಂತದ ಅನ್​ಲಾಕ್ ಮಾಡುವ ಬಗ್ಗೆ ನಾಳೆ ಕೋವಿಡ್ ಉಸ್ತುವಾರಿ ವಹಿಸಿಕೊಂಡಿರುವ ಸಚಿವರು ಮತ್ತು ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆ ನಡೆಸಲಿದ್ದಾರೆ.

ಈಗಾಗಲೇ ಹಂತ ಹಂತವಾಗಿ ಲಾಕ್​ಡೌನ್ ಸಡಿಲಿಸುವ ಬಗ್ಗೆ ತೀರ್ಮಾನಿಸಿರುವ ಸರ್ಕಾರ, 11 ಜಿಲ್ಲೆಗಳಿಗೆ ವಿಧಿಸಿರುವ ನಿರ್ಬಂಧ ಮುಂದುವರೆಸಬೇಕೆ, ಬೇಡವೇ ಎಂಬುದರ ಬಗ್ಗೆಯೂ ನಾಳೆ ತೀರ್ಮಾನಿಸಲಿದೆ. ರಾಜ್ಯದ ಹನ್ನೊಂದು ಜಿಲ್ಲೆಗಳಲ್ಲಿ ಕೊರೊನಾ ಕೇಸ್ ಕಡಿಮೆಯಾದರೂ ಪಾಸಿಟಿವಿಟಿ ದರ 5ಕ್ಕಿಂತ ಕಡಿಮೆಯಾಗಿಲ್ಲ. ಹೀಗಾಗಿ ಈಗಿರುವ ನಿಯಮಗಳನ್ನು ಮುಂದುವರಿಸುವ ಬಗ್ಗೆ ಚರ್ಚೆಯಾಗಲಿದೆ. ಎರಡನೇ ಹಂತದ ಅನ್​ಲಾಕ್​ನಲ್ಲಿ ಯಾವುದಕ್ಕೆ ವಿನಾಯಿತಿ ನೀಡಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಗುತ್ತದೆ.

ಪ್ರಸ್ತುತ ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಇರುವ ವಿನಾಯಿತಿ ಸಮಯವನ್ನು ಸಂಜೆವರೆಗೂ ವಿಸ್ತರಿಸುವ ಸಾಧ್ಯತೆ ಇದೆ. ಒಂದು ವೇಳೆ ಶನಿವಾರ ಯಾವುದೇ ತೀರ್ಮಾನ ಕೈಗೊಳ್ಳದಿದ್ದರೆ, ಸೋಮವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅನ್​ಲಾಕ್​ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಲಾಕ್​ಡೌನ್ ಘೋಷಣೆಯಾದಾಗಿನಿಂದ ರಾಜ್ಯದ ಆರ್ಥಿಕ ಚಟುವಟಿಕೆ ಕುಂಠಿತಗೊಂಡಿದೆ. ಇದು ಹೀಗೆಯೇ ಮುಂದುವರೆದರೆ ಕಷ್ಟವಾಗಬಹುದೆಂದು ಅರಿತಿರುವ ಸರ್ಕಾರ, ಎರಡನೇ ಅನ್​ಲಾಕ್​ನಲ್ಲಿ ವಾಣಿಜ್ಯ ಚಟುವಟಿಕೆ, ವ್ಯಾಪಾರ, ಜ್ಯುವೆಲರಿ ಶಾಪ್, ಸಲೂನ್ ಮತ್ತಿತರ ಸಣ್ಣಪುಟ್ಟ ವ್ಯವಹಾರಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ, ಉಳಿದ ಬಹುತೇಕ ಕಡೆ ಕೆಲ ನಿರ್ಬಂಧ ವಿಧಿಸುವ ಮೂಲಕ ಅನ್​ಲಾಕ್​ ಮಾಡುವ ಸಾಧ್ಯತೆ ಇದೆ.

ಅವಕಾಶ ಸಿಗುವುದು ಕಷ್ಟ:

ಮೆಟ್ರೋ ರೈಲು, ಸಿನಿಮಾ ಮಂದಿರ, ಜಿಮ್, ಈಜುಕೊಳ, ಮನರಂಜನಾ ಪಾರ್ಕ್, ರಂಗಮಂದಿರ, ಬಾರ್, ಸಭಾಂಗಣ, ಹೆಚ್ಚು ಜನಸಂದಣಿ ಇರುವ ಧಾರ್ಮಿಕ ಕಾರ್ಯಕ್ರಮಗಳು, ಜಾತ್ರೆ, ಕ್ರೀಡಾಕೂಟ, ಸಾಂಸ್ಕೃತಿ ಕಾರ್ಯಕ್ರಮ, ರಾಜಕೀಯ ಕಾರ್ಯಕ್ರಮಗಳಿಗೆ ಅವಕಾಶ ನೀಡುವ ಸಾಧ್ಯತೆ ಕಡಿಮೆ. ಶಾಲಾ-ಕಾಲೇಜು, ಕೋಚಿಂಗ್ ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಅವಕಾಶ ಇಲ್ಲ. ಆದರೆ, ಆನ್​​ಲೈನ್ ಶಿಕ್ಷಣ ಮುಂದುವರಿಸಬಹುದು.

ನೈಟ್ ಕರ್ಫ್ಯೂ ಮುಂದುವರಿಕೆ ಸಾಧ್ಯತೆ:ರಾಜ್ಯಾದ್ಯಂತ ಎಲ್ಲಾ ಪ್ರದೇಶಗಳಲ್ಲೂ ರಾತ್ರಿ 7 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕಟ್ಟುನಿಟ್ಟಿನ ನೈಟ್ ಕರ್ಫ್ಯೂ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ. ಈ ಅವಧಿಯಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಉಳಿದಂತೆ ಜನಸಂಚಾರಕ್ಕೆ ಅವಕಾಶ ಇರುವುದಿಲ್ಲ. ಇನ್ನು ಎರಡನೇ ಅನ್​ಲಾಕ್​ನಲ್ಲಿ ದಿನದ ವಸ್ತುಗಳ ಖರೀದಿಗೆ ಮತ್ತಷ್ಟು ಸಮಯದ ಅವಧಿ ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ:ನಾಯಕತ್ವ ಬದಲಾವಣೆ ಗೊಂದಲಕ್ಕೆ ತಲೆಕೆಡಿಸಿಕೊಳ್ಳದ ಸಿಎಂ: ನಾಳೆ ಜಿಲ್ಲಾಡಳಿತಗಳ ಜೊತೆ ವಿಡಿಯೋ ಸಂವಾದ

ABOUT THE AUTHOR

...view details