ಬೆಂಗಳೂರು:ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಯೋಜನೆಗೆ ಡಿಜಿಟಲ್ ಟಚ್ ಕೊಡಲು ತಯಾರಿ ನಡೆದಿದೆ. ಕರ್ನಾಟಕ ಸರ್ಕಾರದ ಇ- ಆಡಳಿತ ಇಲಾಖೆಯು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಸಹಭಾಗಿತ್ವವನ್ನು ಹೊಂದುವ ಮೂಲಕ ಈ ವ್ಯವಸ್ಥೆ ಜಾರಿಯಾಗಲಿದೆ.
ವಿದ್ಯಾರ್ಥಿವೇತನ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ನಗದುರಹಿತ ಮತ್ತು ಸಂಪರ್ಕರಹಿತ ಪಾವತಿ ಪರಿಹಾರವಾದ 'e-RUPT' ಅನ್ನು ಸಕ್ರಿಯಗೊಳಿಸಲು ಮುಂದಾಗಿದೆ. ಕಾಲೇಜು ಅಥವಾ ಸಂಸ್ಥೆಗೆ ಡಿಜಿಟಲ್ನಲ್ಲಿ ಪಾವತಿಸುವ ಮೂಲಕ ಅರ್ಹ ವಿದ್ಯಾರ್ಥಿಗಳ ಶಿಕ್ಷಣ ಶುಲ್ಕದ ಸೋರಿಕೆ- ವಿತರಣೆಯನ್ನು ಖಚಿತಪಡಿಸಿಕೊಳ್ಳಲು e-RUPI ಅನ್ನು ಒಂದು ಅಸ್ತ್ರವಾಗಿ ಬಳಸಲಾಗುತ್ತದೆ.
ಅಂದಹಾಗೆ, ಸರ್ಕಾರವು ಅರ್ಹ ವಿದ್ಯಾರ್ಥಿಗಳ ಮೊಬೈಲ್ಗಳಿಗೆ ಇ- ವೋಚರ್ಗಳನ್ನು ತಲುಪಿಸಲಿದೆ. ವೋಚರ್ ಕೋಡ್ ಅನ್ನು ಫೀಚರ್ ಫೋನ್ನಲ್ಲಿಯೂ ಸ್ವೀಕರಿಸಬಹುದು. e-RUPI ಅನ್ನು ಗುರುತಿಸಲಾದ ಸಂಸ್ಥೆಗಳು ಅಪ್ಲಿಕೇಶನ್ ಅಥವಾ POS ಯಂತ್ರವನ್ನು ಬಳಸಿಕೊಂಡು ವಿದ್ಯಾರ್ಥಿಗಳು ತೋರಿಸುವ QR ಕೋಡ್ ಅಥವಾ SMS ಸ್ಟ್ರಿಂಗ್ ಅನ್ನು ಸ್ಕ್ಯಾನ್ ಮಾಡಲಾಗುತ್ತದೆ. ಈ ಪ್ರಕ್ರಿಯೆಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಪಡೆಯಲು ಯಾವುದೇ ಭೌತಿಕ ( physical) ಟೋಕನ್ ವಿತರಣೆಯ ಅಗತ್ಯ ಇರೋದಿಲ್ಲ.