ಕರ್ನಾಟಕ

karnataka

ETV Bharat / city

ಅನುದಾನಿತ ಪದವಿ ಕಾಲೇಜುಗಳ ಬೋಧಕ-ಬೋಧಕೇತರ ಬ್ಯಾಕ್‌ಲಾಗ್ ಹುದ್ದೆ ಭರ್ತಿಗೆ ಅಸ್ತು - ಬೋಧಕರ ಬ್ಯಾಕ್​ ಲಾಗ್‌ ಹುದ್ದೆ

ವಯೋಮಿತಿ ಆಧಾರದ ಮೇಲೆ ಬ್ಯಾಕ್​ ಲಾಗ್‌ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ಪುಸ್ತಾವನೆ ಸಲ್ಲಿಸಲು ಸರ್ಕಾರ ಆದೇಶಿಸಿದೆ.

government-order-to-fill-the-backlog-posts-in-aided-degree-colleges
ಅನುದಾನಿತ ಪದವಿ ಕಾಲೇಜುಗಳ ಬೋಧಕ - ಬೋಧಕೇತರ ಬ್ಯಾಕ್ ಲಾಗ್ ಹುದ್ದೆ ಭರ್ತಿಗೆ ಅಸ್ತು

By

Published : Aug 18, 2022, 10:52 PM IST

ಬೆಂಗಳೂರು: ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿನ ಬೋಧಕ ಮತ್ತು ಬೋಧಕೇತರ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಮಿತವ್ಯಯದ ಆದೇಶದ ಕಾರಣ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಿರಲಿಲ್ಲ.

ಇದೀಗ ಆಡಳಿತ ಮಂಡಳಿಯು ಅಭ್ಯರ್ಥಿಗಳಿಂದ ಸ್ವೀಕರಿಸಲಾದ ಅರ್ಜಿಗಳನ್ನು ವಯೋಮಿತಿ ಆಧಾರದ ಮೇಲೆ ಅಂದರೆ ಬೋಧಕರ ಬ್ಯಾಕ್​ ಲಾಗ್‌ ಹುದ್ದೆಗಳಿಗೆ 18ರಿಂದ 29ರವರೆಗೆ ಮತ್ತು 29ರಿಂದ 45 ರವರೆಗಿನ ವಯೋಮಿತಿಯೊಳಗೆ ಬರುವ ಹಾಗೂ ಬೋಧಕೇತರ ಬ್ಯಾಕ್‌ಲಾಗ್‌ ಹುದ್ದೆಗಳಿಗೆ 18ರಿಂದ 29 ರವರೆಗೆ ಮತ್ತು 29 ರಿಂದ 40ರವರೆಗಿನ ವಯೋಮಿತಿಯೊಳಗೆ ಬರುವ ಅಭ್ಯರ್ಥಿಗಳ ಅರ್ಜಿಗಳನ್ನು ಪ್ರತಿಭಾ ಆಧಾರದ ಮೇರೆಗೆ ಪಟ್ಟಿ ಸಿದ್ಧವಡಿಸುವಂತೆ ಆದೇಶಿದೆ.

ಬೋಧಕರ ಬ್ಯಾಕ್‌ಲಾಗ್ ಹುದ್ದೆಗೆ ಪ್ರತಿಭಾ ಪಟ್ಟಿ ಸಿದ್ಧಪಡಿಸುವಾಗ ಹುದ್ದೆಗಳಿಗೆ ನಿಗದಿಪಡಿಸಿರುವ ವಿದ್ಯಾರ್ಹತೆಯಲ್ಲಿ ಗರಿಷ್ಠ ಅಂಕಗಳ ಆಧಾರದ ಮೇಲೆ ಸಿದ್ಧಪಡಿಸಬೇಕು. ಅಲ್ಲದೇ, ಪ್ರತಿಭಾ ಪಟ್ಟಿಯನ್ನು ಸಿದ್ಧಪಡಿಸುವಾಗ 18-29ರ ವಯೋಮಾನದಲ್ಲಿ ಬರುವ ಅಭ್ಯರ್ಥಿಗಳ ಮತ್ತು 29-45ರ ವಯೋಮಾನದಲ್ಲಿ ಬರುವ ಅಭ್ಯರ್ಥಿಗಳೆಂದು ಎಂಬ ಪ್ರತ್ಯೇಕವಾದ ಎರಡು ಪಟ್ಟಿಗಳನ್ನು ಸಿದ್ಧಪಡಿಸುವಂತೆ ಸೂಚಿಸಲಾಗಿದೆ.

ಮೊದಲಿಗೆ 29ರಿಂದ 45ರ ವಯೋಮಾನದ ಅಭ್ಯರ್ಥಿಗಳ ಪ್ರತಿಭಾ ಪಟ್ಟಿಯಲ್ಲಿ ಬರುವ ಅರ್ಹ ಮೊದಲನೇ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಈ ವಯೋಮಾನದ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಮಾತ್ರ 18ರಿಂದ 29ರ ವಯೋಮಾನದಲ್ಲಿ ಬರುವ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಆಡಳಿತ ಮಂಡಳಿಯ ಶಿಫಾರಸ್ಸು ಹಾಗೂ ಠರಾವಿನೊಂದಿಗೆ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ಪುಸ್ತಾವನೆ ಸಲ್ಲಿಸಬೇಕು. ಬ್ಯಾಕ್‌ಲಾಗ್ ಹುದ್ದೆ ಭರ್ತಿ ಸಂದರ್ಭದಲ್ಲಿ ಪ್ರತಿಭಾ ಪಟ್ಟಿಯ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯಬೇಕು. ಯಾವುದೇ ಕಾರಣಕ್ಕೂ ಸಂದರ್ಶನ ನಡೆಸುವಂತಿಲ್ಲ ಎಂದೂ ಸೂಚಿಸಲಾಗಿದೆ.

ಇದನ್ನೂ ಓದಿ:ಕಾಲೇಜುಗಳಲ್ಲಿ ಎನ್ ಸಿ ಸಿ ಬಲವರ್ಧನೆಗೆ ಸರ್ಕಾರ ಬದ್ಧ: ಅಶ್ವತ್ಥನಾರಾಯಣ

ABOUT THE AUTHOR

...view details