ಬೆಂಗಳೂರು :ಕೋವಿಡ್ ಎರಡನೇ ಅಲೆ ಹಿನ್ನೆಲೆ ಜಿಮ್ ಮುಚ್ಚಲು ಆದೇಶ ಹೊರಡಿಸಿದ್ದ ಸರ್ಕಾರ ಜಿಮ್ ಅಸೋಸಿಯೇಷನ್ ಮನವಿ ಮೇರೆಗೆ ನಿಷೇಧ ಸಡಿಲಿಸಿ ಪರಿಷ್ಕೃತ ಆದೇಶ ಹೊರಡಿಸಿದೆ.
ಜಿಮ್ ಮುಚ್ಚುವ ಆದೇಶದ ಹಿನ್ನೆಲೆ ಜಿಮ್ ಅಸೋಸಿಯೇಷನ್ ಸದಸ್ಯರು ನಿನ್ನೆ ಗೃಹ ಕಚೇರಿ ಕೃಷ್ಣಾಗೆ ತೆರಳಿ ಮನವಿ ಪತ್ರ ಸಲ್ಲಿಸಿದ್ದರು. ಶೇ.50ರಷ್ಟು ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆ ಸರ್ಕಾರ ಇದೀಗ ಶೇ.50ರಷ್ಟು ಅವಕಾಶ ನೀಡಿ ಹೊಸ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ.