ಕರ್ನಾಟಕ

karnataka

ETV Bharat / city

ಫಾರ್ಮಸಿ ಇನ್ಸ್‌‌ಪೆಕ್ಟರ್‌ಗಳ ನೇಮಕಾತಿ.. ನಿಯಮಗಳ ರಚನೆ ಬಗ್ಗೆ ಹೈಕೋರ್ಟ್​​​ಗೆ ಸರ್ಕಾರದ ಮಾಹಿತಿ - pharmacy inspectors

ಫಾರ್ಮಸಿ ಇನ್ಸ್‌‌ಪೆಕ್ಟರ್‌ಗಳ ನೇಮಕಾತಿಗೆ ಸಂಬಂಧಿಸಿದ ಕರಡು ನಿಯಮಗಳಿಗೆ ಸಾರ್ವಜನಿ ಆಕ್ಷೇಪಣೆಗಳನ್ನು ಆಲಿಸಲು 3 ದಿನಗಳಲ್ಲಿ ಗೆಜೆಟ್‌ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

Government Information to HC on Pharmacy Inspectors Appointment Rules Formulation
ಫಾರ್ಮಸಿ ಇನ್ಸ್‌‌ಪೆಕ್ಟರ್‌ಗಳ ನೇಮಕಾತಿ ನಿಯಮಗಳ ರಚನೆ ಬಗ್ಗೆ ಹೈಕೋರ್ಟ್​​​ಗೆ ಸರ್ಕಾರದ ಮಾಹಿತಿ

By

Published : Mar 4, 2022, 1:49 PM IST

ಬೆಂಗಳೂರು: ಫಾರ್ಮಸಿ ಇನ್ಸ್‌‌ಪೆಕ್ಟರ್‌ಗಳ ನೇಮಕಾತಿಗೆ ಸಂಬಂಧಿಸಿದ ಕರಡು ನಿಯಮಗಳಿಗೆ ಸಾರ್ವಜನಿಕ ಆಕ್ಷೇಪಣೆಗಳನ್ನು ಆಲಿಸಲು 3 ದಿನಗಳಲ್ಲಿ ಗೆಜೆಟ್‌ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಫಾರ್ಮಸಿ ಕಾಯ್ದೆ-1948ರ ನಿಯಮಗಳನ್ನು ಜಾರಿಗೆ ತರಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಕೊಪ್ಪಳದ ಅಶೋಕ್‌ಸ್ವಾಮಿ ಹೆರೂರು ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ವಿಜಯ್ ಕುಮಾರ್ ಎ. ಪಾಟೀಲ್ ವಾದಿಸಿ, ಫಾರ್ಮಸಿ ಇನ್ಸ್‌‌ಪೆಕ್ಟರ್‌ಗಳ ನೇಮಕಕ್ಕೆ ಅರ್ಹತೆ ನಿಗದಿಪಡಿಸಿ ರೂಪಿಸಿರುವ ಕರಡು ನಿಯಮಗಳನ್ನು ಮಾ.2ರಂದು ಪ್ರಕಟಿಸಲಾಗಿದೆ. ಮೂರು ದಿನಗಳಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸಿ ಸಾರ್ವಜನಿಕ ಆಕ್ಷೇಪಣೆ ಸಲ್ಲಿಕೆಗೆ 15 ದಿನ ಕಾಲಾವಕಾಶ ನೀಡಲಾಗುತ್ತದೆ. ಎಲ್ಲ ಆಕ್ಷೇಪಣೆಗಳನ್ನು ಪರಿಗಣಿಸಿದ ನಂತರ ನಿಯಮ ಅಂತಿಮಗೊಳಿಸಲಾಗುವುದು. ಅದಕ್ಕೆ ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಇದನ್ನೂ ಓದಿ:ಕಡತ ವಿಲೇವಾರಿಯಾಗುವವರೆಗೆ ಅಧಿಕಾರಿಗಳು ರಜೆ ತೆಗೆದುಕೊಳ್ಳುವಂತಿಲ್ಲ: ಸಚಿವ ಆರ್.ಅಶೋಕ್

ಮನವಿ ಪರಿಗಣಿಸಿದ ಪೀಠ 3 ವಾರ ಕಾಲಾವಕಾಶ ನೀಡಿ, ಮುಂದಿನ ವಿಚಾರಣೆ ವೇಳೆ ಅನುಪಾಲನಾ ವರದಿ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಏ.4ಕ್ಕೆ ಮುಂದೂಡಿತು.

ಫಾರ್ಮಸಿ ಇನ್ಸ್‌‌ಪೆಕ್ಟರ್‌ಗಳ ನೇಮಕಕ್ಕೆ ಅರ್ಹತಾ ನಿಯಮ ರೂಪಿಸುವ ವಿಚಾರದಲ್ಲಿ ವಿಳಂಬ ಕಾರಣಕ್ಕೆ ಪೀಠ ಕಳೆದ ಫೆ.14ರಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೇ ಸಂಬಂಧಪಟ್ಟ ಸಚಿವರನ್ನು ನ್ಯಾಯಾಲಯಕ್ಕೆ ಕರೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಹಾಗೆಯೇ ಪ್ರಕರಣವನ್ನು ಮುಖ್ಯಮಂತ್ರಿಗಳ ಮುಂದೆ ಇರಿಸಿ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿತ್ತು.

ABOUT THE AUTHOR

...view details