ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ನಿನ್ನೆ 9 ಜಿಲ್ಲೆಗಳಿಗೆ ಲಾಕ್ ಡೌನ್ ಆದೇಶ ಹೊರಡಿಸಿದ್ದು, ಸಿಲಿಕಾನ್ ಸಿಟಿಯನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎನ್ನಲಾಗಿದೆ.
ಸಿಲಿಕಾನ್ ಸಿಟಿ ಲಾಕ್ ಡೌನ್ ಮಾಡುವಲ್ಲಿ ವಿಫಲವಾಯಿತ ಸರ್ಕಾರ? - 9 ಜಿಲ್ಲೆಗಳಿಗೆ ಲಾಕ್ ಡೌನ್ ಆದೇಶ
ಕೊರೊನಾ ಭೀತಿ ಹಿನ್ನೆಲೆ 9 ಜಿಲ್ಲೆಗಳಿಗೆ ಲಾಕ್ ಡೌನ್ ಆದೇಶ ಹೊರಡಿಸಲಾಗಿದ್ದು, ಬೆಂಗಳೂರಿನಲ್ಲಿ ಮುಂಜಾನೆಯಿಂದಲೇ ವಾಹನ ಸಂಚಾರ ಪ್ರಾರಂಭವಾಗಿದೆ.
ಬೆಂಗಳೂರಿನಲ್ಲಿ ಮುಂಜಾನೆಯಿಂದಲೇ ವಾಹನ ಸಂಚಾರ ಪ್ರಾರಂಭ
ಜನತಾ ಕರ್ಪ್ಯೂನಿಂದ ಹೊರಬಂದ ಜನ ಮುಂಜಾನೆಯಿಂದಲೇ ಓಡಾಟ ಶುರುಮಾಡಿದ್ದಾರೆ. ಬೆಳಗ್ಗೆಯಿಂದಲೇ ಆಟೋ, ಕ್ಯಾಬ್, ಖಾಸಗಿ ,ಬಿಎಂಟಿಸಿ ಬಸ್ಗಳ ಸೇವೆ ಕೊಂಚ ಮಟ್ಟಿಗೆ ಆರಂಭವಾಗಿದೆ. ಸರ್ಕಾರಿ ಕೆಲಸಗಾರರು ಹಾಗೂ ಕೂಲಿ ಕಾರ್ಮಿಕರು ಹೆಚ್ಚಾಗಿ ಸಂಚಾರಕ್ಕೆ ಸ್ವಂತ ವಾಹನಗಳನ್ನು ಬಳಕೆ ಮಾಡುತ್ತಿದ್ದು, ನಿನ್ನೆಗೆ ಹೋಲಿಸಿದರೆ ಅರ್ಧದಷ್ಟು ಬೆಂಗಳೂರಿನ ಜನ ರಸ್ತೆಗೆ ಇಳಿದಿದ್ದಾರೆ. ಈಗಾಗಲೇ ರಾಜ್ಯದಲ್ಲಿ 26 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.