ಕರ್ನಾಟಕ

karnataka

ETV Bharat / city

ಸಿಲಿಕಾನ್​ ಸಿಟಿ ಚರ್ಚ್​‌ಗಳಲ್ಲಿ ಗುಡ್ ಫ್ರೈಡೆ ಸಂಭ್ರಮ - Celebration at Silicon City

ಶಿವಾಜಿನಗರದ ಸೇಂಟ್‌ ಮೇರಿ ಬೆಸಿಲಿಕಾ ಹಾಗೂ ಹಲಸೂರಿನ ಲೂದ್‌ ಮಾತಾ ಚರ್ಚ್‌ನಲ್ಲಿ ಯೇಸು ಕ್ರಿಸ್ತನು ಬಂಧನಕ್ಕೆ ಒಳಗಾಗುವುದರಿಂದ ಹಿಡಿದು ಶಿಲುಬೆಯ ಮೇಲೆ ಮರಣ ಹೊಂದುವ ತನಕದ ವಿವಿಧ ಘಟನೆಗಳನ್ನು ನೆನಪಿಸುವ ಪ್ರದರ್ಶನದ ಮೂಲಕ ಜನರಿಗೆ ಏಸು ಕ್ರಿಸ್ತನ ಕುರಿತ ಸಂದೇಶ ಸಾರಲಾಯಿತು.

ಹಬ್ಬ
ಹಬ್ಬ

By

Published : Apr 2, 2021, 10:58 PM IST

ಬೆಂಗಳೂರು:ಗುಡ್‌ ಫ್ರೈಡೆ ಅಂಗವಾಗಿ ಶುಕ್ರವಾರ ನಗರದ ವಿವಿಧ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು. ಈ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಕ್ರೈಸ್ತ ಅನುಯಾಯಿಗಳು ನಗರದ ಹಲವು ಚರ್ಚ್‌ಗಳಲ್ಲಿ ಮೇಣದ ಬತ್ತಿ ಹಿಡಿದು ಪ್ರಾರ್ಥನೆ ಸಲ್ಲಿಸಿದರು.

ಸಿಲಿಕಾನ್​ ಸಿಟಿ ಚರ್ಚ್​‌ಗಳಲ್ಲಿ ಗುಡ್ ಫ್ರೈಡೆ ಹಬ್ಬದ ಸಂಭ್ರಮ

ಕಾರ್ಪೊರೇಷನ್ ಸರ್ಕಲ್​ನಲ್ಲಿರುವ ಚರ್ಚ್​ನಲ್ಲಿ ಫಾದರ್​ಗ‌ಳು ಮುಂಜಾನೆಯಿಂದಲೇ ಶಿಲುಬೆಗೇರಿದ ಯೇಸು ಕ್ರಿಸ್ತನು ಆಡಿದ ಮಹತ್ವದ ಏಳು ಮಾತುಗಳ ಕುರಿತು ಪ್ರವಚನ ನೀಡಲಾಯಿತು. ಯೇಸು ಕ್ರಿಸ್ತ ಬಂಧನಕ್ಕೆ ಒಳಗಾಗುವುದರಿಂದ ಹಿಡಿದು ಶಿಲುಬೆಗೆ ಏರುವವರೆಗಿನ ಘಟನೆಗಳನ್ನು ಅವಲೋಕಿಸುತ್ತಾ ಪ್ರಾರ್ಥಿಸುವ ಮೂಲಕ ಶುಭ ಶುಕ್ರವಾರದ ಆರಾಧನೆ ನಡೆಯಿತು.

ABOUT THE AUTHOR

...view details