ಬೆಂಗಳೂರು :ಹಣ ಡಬ್ಲಿಂಗ್, ಗೋಲ್ಡ್ ಬಿಸ್ಕೆಟ್ ಕೊಡಿಸುವುದಾಗಿ ನಂಬಿಸಿ ನಕಲಿ ನೋಟು ಹಾಗೂ ಗೋಲ್ಡ್ ಬಿಸ್ಕೆಟ್ ಕೊಟ್ಟು ವಂಚಿಸುತ್ತಿದ್ದ ಗ್ಯಾಂಗ್ನ ನಾಲ್ವರನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ನಟರಾಜ್ ಅಲಿಯಾಸ್ ರಾಜಾರೆಡ್ಡಿ, ಬಾಲಾಜಿ, ವೆಂಕಟೇಶ್, ರಾಕೇಶ್ ಬಂಧಿತ ಆರೋಪಿಗಳು. ನಾಲ್ವರಿಂದ 5.57 ಲಕ್ಷ ರೂ., 80 ಗ್ರಾಂ ಚಿನ್ನಾಭರಣ ಹಾಗೂ 2 ಕಾರು, 20 ಕೋಟಿ ಮೌಲ್ಯದ ನಕಲಿ ನೋಟುಗಳು, 10 ನಕಲಿ ಗೋಲ್ಡ್ ಬಿಸ್ಕೆಟ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ.
ಪ್ರಾಪರ್ಟಿ ತೋರಿಸುವ ನೆಪದಲ್ಲಿ ದೋಚಿದ್ದ ಗ್ಯಾಂಗ್ :ಪ್ರಾಪರ್ಟಿ ತೋರಿಸುವ ನೆಪದಲ್ಲಿ ಕಳೆದ ವರ್ಷ ಅಕ್ಟೋಬರ್ನಲ್ಲಿ ಜಕ್ಕೂರಿನ ಸಂಗೀತಾ ಮತ್ತು ಆಕೆಯ ಕಾರ್ ಡ್ರೈವರ್ ಕೃಷ್ಣ ಎಂಬುವರನ್ನು ಅಪಹರಿಸಿದ್ದರು. ಇವರ ಬಿಡುಗಡೆಗೆ 10 ಲಕ್ಷ ರೂ. ಪಡೆದಿದ್ದರು.