ಕರ್ನಾಟಕ

karnataka

ETV Bharat / city

ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ಚಿನ್ನ, ಬೆಳ್ಳಿ ಬೆಲೆ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಗೋಲ್ಡ್‌ ರೇಟ್​ ಹೀಗಿದೆ..

gold price
gold price

By

Published : Jun 22, 2022, 1:23 PM IST

ಬೆಂಗಳೂರು: ಚಿನ್ನ, ಬೆಳ್ಳಿ ದರದಲ್ಲಿ ನಿತ್ಯ ಏರಿಳಿತ ಸಾಮಾನ್ಯ. ದಿನದಿಂದ ದಿನಕ್ಕೆ ಚಿನ್ನ, ಬೆಳ್ಳಿ ದರ ಕೆಲವೊಮ್ಮೆ ಗಗನಕ್ಕೇರಿದರೆ, ಇಂದು ಕೊಂಚ ಇಳಿಕೆ ಕಂಡಿದೆ. ನೀವು ಇಂದು ಚಿನ್ನಾಭರಣ ಖರೀದಿಸುವವರಾಗಿದ್ದರೆ, ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಅನ್ನೋದನ್ನು ತಿಳಿದುಕೊಳ್ಳಿ.

ನಗರ ಚಿನ್ನ(22K) ಚಿನ್ನ(24K) ಬೆಳ್ಳಿ
ಬೆಂಗಳೂರು 4,745 ರೂ. 5,110 ರೂ. 61.1
ಹುಬ್ಬಳ್ಳಿ 4,766 ರೂ. 5,199 ರೂ. 62.7
ಮೈಸೂರು 4,725 ರೂ. 5,232 ರೂ. 78.17
ದಾವಣಗೆರೆ 4,740 ರೂ. 5,125 ರೂ. 66.08
ಮಂಗಳೂರು 4,750 ರೂ. 5,180 ರೂ. 66

ಇಂದು ರಾಜ್ಯದ ವಿವಿಧ ಭಾಗಗಳಲ್ಲಿ ಚಿನ್ನದ ದರ ಇಳಿಕೆ ಕಂಡಿದೆ. ನಿನ್ನೆ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ 4,775 ರೂ., 24 ಕ್ಯಾರೆಟ್ ಚಿನ್ನದ ದರ 5,135 ಇದ್ದು ಇಂದು ಕೊಂಚ ಇಳಿಕೆ ಕಂಡಿದೆ. ಮಂಗಳೂರಿನಲ್ಲೂ 22 ಕ್ಯಾರೆಟ್ ಚಿನ್ನದ ದರದಲ್ಲಿ 18 ರೂ., 24 ಕ್ಯಾರೆಟ್ ಚಿನ್ನದ ದರದಲ್ಲಿ 21 ರೂ., ಬೆಳ್ಳಿ ದರದಲ್ಲಿ 30 ಪೈಸೆ ಇಳಿಕೆಯಾಗಿದೆ.

ಮೈಸೂರಿನಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ದರ 4,755 ರೂ., 24 ಕ್ಯಾರೆಟ್ ಚಿನ್ನದ ದರ 5,266 ರೂ. ಇದ್ದು ಇಂದು ಕ್ರಮವಾಗಿ 4,725 ರೂ. ಮತ್ತು 5,232 ರೂ. ಇದೆ. ಹಾಗೆಯೇ ಬೆಳ್ಳಿದರದಲ್ಲಿ ಸಹ ಇಳಿಕೆ ಕಂಡುಬಂದಿದೆ. ಹುಬ್ಬಳ್ಳಿಯಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ದರ 4,789 ರೂ. ಇದ್ದು ಇಂದು 4,766 ರೂ. ಇದೆ.

ಇದನ್ನೂ ಓದಿ:ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ.. ರಾಜ್ಯದ ಪ್ರಮುಖ ನಗರಗಳಲ್ಲಿ ಹೀಗಿದೆ ದರ ಪಟ್ಟಿ!

ABOUT THE AUTHOR

...view details