ಬೆಂಗಳೂರು: ಅಕ್ಷಯ ಪಾತ್ರ ಫೌಂಡೇಶನ್ ಹಾಗೂ ಕಾರ್ಮಿಕ ಇಲಾಖೆ ಆಹಾರ ಪದಾರ್ಥಗಳ ಕಿಟ್ ಅನ್ನು ಉಚಿತವಾಗಿ ಕೊಡುತ್ತಿವೆ. ಆದ್ರೆ ಇದನ್ನು ಜಯನಗರದ ವಾಸವಿ ಜನರಲ್ ಸ್ಟೋರ್ಗೆ 850ಕ್ಕೆ ಮಾರಾಟ ಮಾಡಲಾಗಿದೆ ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ದೂರಿದ್ದಾರೆ.
ಆಹಾರ ಪದಾರ್ಥಗಳ ಕಿಟ್ ವಿತರಣೆಯಲ್ಲಿ ಗೋಲ್ಮಾಲ್: ರಿಜ್ವಾನ್ ಅರ್ಷದ್ ಆರೋಪ - ರಿಜ್ವಾನ್ ಅರ್ಷದ್ ಆರೋಪ ನ್ಯೂಸ್
ಅಕ್ಷಯ ಪಾತ್ರ ಫೌಂಡೇಶನ್ ಹಾಗೂ ಕಾರ್ಮಿಕ ಇಲಾಖೆ ಆಹಾರ ಪದಾರ್ಥಗಳ ಕಿಟ್ ಅನ್ನು ಉಚಿತವಾಗಿ ವಿತರಿಸುತ್ತಿದ್ದು, ಇದರಲ್ಲಿ ಗೋಲ್ಮಾಲ್ ನಡೆದಿದೆ ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಆರೋಪಿಸಿದ್ದಾರೆ.
8 ಕಡೆ ಆಹಾರ ಪ್ಯಾಕಿಂಗ್ ಕಾರ್ಯ ನಡೆಯುತ್ತಿದ್ದು, ಕಳಪೆ ಗುಣಮಟ್ಟದ ಅಕ್ಕಿ, ಬೇಳೆ ಕೊಡಲಾಗುತ್ತಿದೆ. ಈ ಸಂದರ್ಭದಲ್ಲಿ ಗ್ಲೌಸ್ ಹಾಕದೆ, ಶುಚಿತ್ವ ಕಾಪಾಡದೇ ಪ್ಯಾಕಿಂಗ್ ಮಾಡಲಾಗಿದೆ. ಜೊತೆಗೆ ಕಡಿಮೆ ಗುಣಮಟ್ಟದ ಅಕ್ಕಿ ಕೊಡಲಾಗುತ್ತಿದೆ. ಹಂಚುವಿಕೆಯಲ್ಲೂ ಗೋಲ್ಮಾಲ್ ನಡೆಯುತ್ತಿದೆ. ಈ ಕುರಿತು ಬಿಬಿಎಂಪಿ ಆಯುಕ್ತರು ಕೂಡಲೇ ಸ್ಥಳ ಪರಿಶೀಲನೆ ನಡೆಸಬೇಕೆಂದು ಪಾಲಿಕೆ ಸದಸ್ಯ ಎಂ. ಶಿವರಾಜು ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.
ಇದಕ್ಕೆ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಪ್ರತಿಕ್ರಿಯಿಸಿ, ಇದು ಗೋಲ್ಮಾಲ್ ಮಾಡುವ ಸಮಯವಲ್ಲ ಎಂದಿದ್ದಾರೆ. ಮೇಯರ್ ಗೌತಮ್ ಕುಮಾರ್ ಸಹ ಈ ಕುರಿತು ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.