ಕರ್ನಾಟಕ

karnataka

ETV Bharat / city

ಏಳೆಂಟು ತಿಂಗಳು ಸಮಯ ಕೊಡಿ, ಬೆಂಗಳೂರಿನ‌ ಚಿತ್ರಣವನ್ನೇ ಬದಲಿಸುವೆ: ಬಿಎಸ್​ವೈ - ಡಾ.ಎಸ್.ವಿ.ಎಸ್. ಸುಬ್ರಮಣ್ಯ ಗುಪ್ತ

ಏಳೆಂಟು ತಿಂಗಳು ನನಗೆ ಸಮಯ ಕೊಡಿ ಬೆಂಗಳೂರು ನಗರದ ಚಿತ್ರಣವನ್ನೇ ಬದಲಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಬಿಎಸ್​ವೈ

By

Published : Sep 15, 2019, 3:21 PM IST

ಬೆಂಗಳೂರು: ಏಳೆಂಟು ತಿಂಗಳು ನನಗೆ ಸಮಯ ಕೊಡಿ ಬೆಂಗಳೂರು ನಗರದ ಚಿತ್ರಣವನ್ನೇ ಬದಲಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ನಗರದ ಎಫ್​ಕೆಸಿಸಿಐ ಕೇಂದ್ರ ಕಚೇರಿಯಲ್ಲಿ ಸಂಸ್ಥಾಪಕರ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅದ್ವೈತ್ ಹ್ಯುಂಡೈ ನಿರ್ದೇಶಕ ಡಾ.ಎಸ್.ವಿ.ಎಸ್. ಸುಬ್ರಮಣ್ಯ ಗುಪ್ತ ಅವರಿಗೆ ಈ ಬಾರಿಗೆ ಸರ್.ಎಂ.ವಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಸಮಾರಂಭದಲ್ಲಿ ಭಾಷಣ ಮಾಡಿದ ಸಿಎಂ, ಬೆಂಗಳೂರು ಅಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ಕೊಟ್ಟಿದೆ. ಇನ್ನು ಏಳೆಂಟು ತಿಂಗಳಲ್ಲಿ ವಿಶ್ವದರ್ಜೆಗೆ ಬೆಂಗಳೂರನ್ನು ಅಭಿವೃದ್ಧಿ ಪಡಿಸುತ್ತೇವೆ. ಬೆಂಗಳೂರು ಅಭಿವೃದ್ಧಿಗೆ 12 ಹೈಡೆನ್ಸಿಟಿ ಕಾರಿಡಾರ್ ರಸ್ತೆ, ಏರ್ಪೋರ್ಟ್ ವರೆಗೂ ನಮ್ಮ ಮೆಟ್ರೋ ವಿಸ್ತರಣೆ, ಬೆಂಗಳೂರು‌ ತ್ಯಾಜ್ಯ ಸಮಸ್ಯೆಗೆ ಪರಿಹಾರ, ನಗರದ ಕೆರೆಗಳ ಸ್ವಚ್ಛತೆಗೆ ಆದ್ಯತೆ ನೀಡುತ್ತೇವೆ. ಹಾಗು ರೋರೀಚ್ ಎಸ್ಟೇಟ್‌ ನಲ್ಲಿ ಫಿಲಂ ಸಿ.ಟಿ ನಿರ್ಮಾಣದ ಚಿಂತನೆ ನಡೆದಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಫೆರಿಫೆರಲ್ ರಿಂಗ್ ರೋಡ್, ಸರ್ಬನ್ ರೈಲ್ವೆ ಸೇರಿದಂತೆ ಎಲ್ಲಾ ಯೋಚನೆಗಳನ್ನು ರೂಪಿಸುತ್ತಿದ್ದೇವೆ. ಫುಟ್ ಪಾತ್, ಸೇರಿದಂತೆ ಇನ್ನೂ ಹಲವಾರು ಸಮಸ್ಯೆಗಳಿವೆ. ಕಸ ವಿಲೇವಾರಿ ಬಹುದೊಡ್ಡ ಸಮಸ್ಯೆ. ನಗರದ ಕೆರೆಗಳ ಸ್ವಚ್ಚತೆಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿ ಬಹಳ ದೊಡ್ಡ ಸಮಸ್ಯೆಗಳಾಗಿವೆ. ಎತ್ತರದ ಜಾಗಗಳಲ್ಲಿ ಗ್ರಾಮಗಳನ್ನು ಶಿಫ್ಟ್ ಮಾಡಬೇಕಿದೆ. ಹೀಗಾಗಿ ಕೈಗಾರಿಕೋದ್ಯಮಿಗಳು ದೊಡ್ಡ ಮಟ್ಟದ ದೇಣಿಗೆ ನೀಡಬೇಕು ಎಂದು ಮುಖ್ಯಮಂತ್ರಿಗಳು ವಿನಂತಿ‌ ಮಾಡಿದರು.

ಧೈರ್ಯವಾಗಿ ಮಾತನಾಡಿ:

ದಕ್ಷಿಣ ಭಾರತದ ಕೈಗಾರಿಕೋದ್ಯಮಿಗಳಿಗೆ ಬುದ್ದಿವಂತಿಕೆ ಮತ್ತು ಕೌಶಲ್ಯವಿದೆ ಆದರೆ ಧೈರ್ಯದಿಂದ ಮಾತನಾಡೋದು ಕಡಿಮೆ. ಧೈರ್ಯ ಮಾಡಿ ಸರ್ಕಾರ ಮತ್ತು ಅಧಿಕಾರಿಗಳ ಜೊತೆ ಮಾತನಾಡಬೇಕು ಎಂದು ಉದ್ಯಮಿಗಳಿಗೆ ರಾಜ್ಯಪಾಲ ವಜುಭಾಯ್ ವಾಲಾ ಕರೆ ನೀಡಿದರು.

ಜಿಎಸ್​ಟಿಯಿಂದ ಸಾಕಷ್ಟು ಸುಧಾರಣೆ ಆಗಿದೆ. ಆದರೆ ಕೆಲ ಅಧಿಕಾರಿಗಳು ಜಿಎಸ್‌ಟಿಯನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಎಲ್ಲರೂ ಟ್ಯಾಕ್ಸ್ ಕಟ್ಟಿದ್ರೆ ಸಮಸ್ಯೆ ಆಗಲ್ಲ. ಎನ್‌ಪಿಎ 90 ದಿನಕ್ಕೆ ಇದೆ, ಅದನ್ನ 180 ದಿನಕ್ಕೆ ಹೆಚ್ಚಳ ಮಾಡಬೇಕು ಅನ್ನೋ ಮನವಿಗಳು ಬರ್ತಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಮ್ಮ ರಾಜ್ಯದಿಂದಲೇ ಆಯ್ಕೆ ಆಗಿದ್ದಾರೆ. ಅವರಿಗೆ ಮತ್ತು ಸಿಎಂಗೆ ಮನವಿ ಕೊಟ್ಟು ಮಾತನಾಡಿ ಎಂದು ಸಲಹೆ ನೀಡಿದರು.

ABOUT THE AUTHOR

...view details