ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೈಶಾಚಿಕ ಕೃತ್ಯವೊಂದು ನಡೆದಿದೆ. ಯುವತಿಯನ್ನು ಭೇಟಿಗೆಂದು ಕರೆಸಿ ಅವರ ಮೇಲೆ ದೂರದ ಸಂಬಂಧಿಯೊಬ್ಬ ಅತ್ಯಾಚಾರ ಎಸಗಿರುವ ಘಟನೆ ಕಬ್ಬನ್ ಪಾರ್ಕ್ನಲ್ಲಿ ನಡೆದಿದೆ. ಅತ್ಯಾಚಾರ ಎಸಗಿ ಪರಾರಿಯಾಗಿರುವ ಆರೋಪಿಯನ್ನು ರಮೇಶ್ ಎಂದು ಗುರುತಿಸಲಾಗಿದೆ.
ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ದ ರಮೇಶ್ ಆ.6ರಂದು ಭೇಟಿ ಮಾಡಬೇಕು ಎಂದು ಕಬ್ಬನ್ ಪಾರ್ಕ್ಗೆ ಯುವತಿಯನ್ನು ಕರೆಸಿಕೊಂಡಿದ್ದ. ದೂರದ ಸಂಬಂಧಿ ಅಪರೂಪಕ್ಕೆ ನಗರಕ್ಕೆ ಬಂದಿದ್ದಾನೆ ಎಂದು ಯುವತಿ ಕೂಡ ರಮೇಶನ ಮಾತು ನಂಬಿ ಕಬ್ಬನ್ ಪಾರ್ಕ್ಗೆ ಬಂದಿದ್ದರು. ಈ ಸಮಯವನ್ನ ದುರುಪಯೋಗ ಪಡಿಸಿಕೊಂಡ ರಮೇಶ್, ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.