ಕರ್ನಾಟಕ

karnataka

ETV Bharat / city

ಕೊರೊನಾ, ಕಾನೂನು ಸುವ್ಯವಸ್ಥೆ ಕುರಿತು ಡಿಜಿ ಮಹತ್ವದ ಸಭೆ - ಕೊರೊನಾ ಕಾನೂನು ಸುವ್ಯವಸ್ಥೆ ಕುರಿತು ಡಿಜಿ ಮಹತ್ವದ ಸಭೆ

ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ನೇತೃತ್ವದಲ್ಲಿ ಇಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ‌ ಎಲ್ಲಾ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಭೆ ನಡೆಸಲಾಯಿತು.

ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್

By

Published : Mar 27, 2020, 3:16 PM IST

ಬೆಂಗಳೂರು: ಕೊರೊನಾ ಹಾಗೂ ಕಾನೂನು ಸುವ್ಯವಸ್ಥೆ ನಿರ್ವಹಣೆ ಬಗ್ಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಸಲಾಯಿತು.

ನಗರದ ಇನ್​ಫೆಂಟ್ರಿ ರಸ್ತೆಯಲ್ಲಿರುವ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ‌ ಎಲ್ಲ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಭೆ ನಡೆಸಲಾಯಿತು. ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿಗಳು ಸೇರಿದಂತೆ ಎಲ್ಲಾ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

ಸಾರ್ವಜನಿಕರ ಬಳಿ ವಿನಾಕಾರಣ ಅನುಚಿತವಾಗಿ ಸಿಬ್ಬಂದಿ ವರ್ತಿಸದೇ ಒಗ್ಗಟ್ಟಾಗಿ ಕೊರೊನಾ ತಡೆಗಟ್ಟಲು ಮುಂದಾಗಬೇಕು. ಜೊತೆಗೆ ಇನ್ನೂ 19 ದಿನಗಳ ಕಾಲ ನೂತನ ನಿಯಮ ಹಾಗೂ ನಗರದ ಕಾನೂನು ಹಾಗೂ ಸುವ್ಯವಸ್ಥೆಯನ್ನ ಸಂಚಾರಿ ಪೊಲೀಸರು ಪಾಲೀಸಬೇಕು, ಜೊತೆಗೆ ಲಾಠಿಯನ್ನು ಅನಾವಶ್ಯಕವಾಗಿ ಬಳಸದಂತೆ ಪೊಲೀಸರಿಗೆ ಸೂಚಿಸಲಾಯಿತು.

For All Latest Updates

ABOUT THE AUTHOR

...view details